ಮನೆ ಕಟ್ಟುವುದು ಮುಖ್ಯವಲ್ಲ, ಮನ ಕಟ್ಟುವುದು ಮುಖ್ಯ.....
ಮನೆ ಕಟ್ಟುವುದು ಮುಖ್ಯವಲ್ಲ, ಮನಸ್ಸು ಕಟ್ಟುವುದು ಮುಖ್ಯ ಈ ನಾಗರಿಕತೆ ಮೊಸಲು ಹುಟ್ಟಿಕೊಂಡಿದ್ದು ಮನೆ ಕಟ್ಟುವ ಮೂಲಕವೆ ಅಥವಾ ಮನಸ್ಸು ಕಟ್ಟುವ ಮೂಲಕವೆ ಎನ್ನುವದು ಒಂದು ಪ್ರಶ್ನೇಯಾದರೆ ಇದಕ್ಕೆ ಉತ್ತರ ಮನಸ್ಸು ಕಟ್ಟುವ ಮೂಲಕ ಈ ನಾಗರಿಕತೆ ಹುಟ್ಟಿಕೊಂಡಿತು ಎಂದು ಬಲು ಸ್ಪಷ್ಠವಾಗಿ ಹೇಳಬಹುದು ಯಾಕೆ ಮನೆಗಿಂತ ಮನಸ್ಸು ಮುಖ್ಯ ಎಂಬುದು ಇಲ್ಲೆ ವಿದಿತವಾಗುತ್ತದೆ. ಮನೆ ಕಟ್ಟಲು ನಮಗೆ ಬೇಕಾಗಿರುವ ವಸ್ತುಗಳು ನಿರ್ಜಿವ ವಸ್ತುಗಳು . ಆದರೆ ಮನ ಕಟ್ಟಲು ಬೇಕಾಗಿರುವುದ ಮಾತ್ರ ಭಾವನೆಗಳಿಂದ ತುಂಬಿರುವ ಮಾನವ ಜೀವಿಗಳು. ಅನೇಕ ಜನರಿಗೆ ತಮ್ಮ ಮನೆ ಅದ್ಭುತವಾಗಿರಬೇಕೆಂದು ಬಯಸುತ್ತಾರೆ.ಎಷ್ಟೋ ಜನ ತಮ್ಮ ಜೀವಮಾನದ ಸಂಪಾದನೆಯನ್ನಲ್ಲ ತಾವು ಬಯಸಿದಂತಹ ಮನೆ ನಿರ್ಮಾಣಕ್ಕಾಗಿ ಸುರಿಯುತ್ತಾರೆ. ಆದರೆ ಅದ್ಭುತವಾಗಿರಬೇಕಾದ್ದದ್ದು ಮನೆಯಲ್ಲ ಬದಲಿಗೆ ಮನಸ್ಸು ಎಂಬುದನ್ನು ಮರೆಯುತ್ತಾರೆ.ನಾವು ನಿಜವಾಗಿಯೂ ಕಟ್ಟಬೇಕಾಗಿರುವುದು ಕಲ್ಲು ಇಟ್ಟಿಗೆಗಳ ಮನೆಯಲ್ಲ, ಬದಲಾಗಿ ಬೆಚ್ಚನೆಯ ಭಾವದಿಂದ ಕೂಡಿರುವ ಮನಸ್ಸಇನ ಮನೆ. ಕನ್ನಡದಲ್ಲಿ ಅಸಮಾನತೆಯ ವಿರುದ್ದ ದೊಡ್ಡ ಕ್ರಾಂತಿಯನ್ನೆ ಮಾಡಿರುವ ಬಸವಣ್ಣವನರ ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಮಾತು ಇಲ್ಲಿ ಪ್ರಸ್ತುತ. ಜಂಗಮವೆಂದರೆ ನಮ್ಮ ಮನಸ್ಸೆ ...