ಪ್ರತಿಭಾವಂತರ ಪ್ರೇಮ ವೈಫಲ್ಯ
ಪ್ರತಿಭಾವಂತರ ಪ್ರೇಮ ವೈಫಲ್ಯ [............................] ಜಮೀನಿನಲ್ಲಿ ಕಾರಂಜಾ ನದಿ ನೀರು ಹಾಯಿಸುತ್ತಿದ್ದೆ. ಬರಗಾಲದ ನಮ್ಮ ಜಿಲ್ಲೆಗೆ ಅದೊಂದು ಮಾತ್ರ ವರದಾನವಾಗಿದೆ. ಅಷ್ಟರಲ್ಲಿ ಫೋನ್ ರಿಂಗಣಿಸಿತು. ಹಸಿಕೆಸರಾದ ಕೈಗಳನ್ನು ಒರೆಸಿಕೊಂಡು ಬಂದ ಕರೆ ಸ್ವೀಕರಿಸಬೇಕೆಂದು ಅನ್ನುವಷ್ಟರಲ್ಲಿ ಕರೆ ನಿಂತಿತು. ಯಾವುದೂ ಹೊಸ ಸಂಖ್ಯೆ ಇದ್ದಿದರಿಂದ ತಿರುಗಿ ಕರೆ ಮಾಡಲಿಲ್ಲ. ಕೆಲ ನಿಮಿಷಗಳ ತರುವಾಯ ಮತ್ತದೆ ನಂಬರ್ ನಿಂದ ಫೋನ್ ಬಂದಿತು. ರಿಸೀವ್ ಮಾಡುತ್ತಿದ್ದಂತೆ ಆ ಕಡೆಯಿಂದ ಹಲೋ..... ಎನ್ನುವ ಗಂಡು ದನಿ. ನಾನು ಯಾರೆಂದು ಕೇಳಿದೆ. ಅವರು ತಾನು ಯಾರೆಂದು ಹೇಳದೆ ಮಾತನಾಡಲು ಆರಂಭಿಸಿದರು. ಹೇಗಿದಿಯಾ, ಮನೆಕಡೆಯಲ್ಲಾ ಆರಾಮಾ... ಪಕ್ಕಾ ಉತ್ತರ ಕರ್ನಾಟಕ ಭಾಷೆಯಿದ್ದರು ಅದರಲ್ಲಿ ಇಂಗ್ಲಿಷ್ ಮತ್ತು ಬೆಂಗಳೂರಿನ ಪದಗಳು ಯಥೇಚ್ಛವಾಗಿ ಸೇರಿದ್ದವು. ಸ್ವಲ್ಪ ಸಮಯದಂತರದಲ್ಲಿ ತಿಳಿಯಿತು.ನನ್ನ ಜೂನಿಯರ್ ಹುಡುಗ ಕರೆ ಮಾಡಿ ಮಾತಾಡುತ್ತಿದ್ದನು ನಾನು ಆರಾಮವಾಗಿ ಇದ್ದಿನಿ ನೀನು ಹೇಗಿದಿಯಾ ,ಮದುವೆ ಆಯ್ತಾ ಅಂತ ಕೇಳಿದೆ. ಮದುವೆ ಬಗ್ಗೆ ಕೇಳಿದ ತಕ್ಷಣ ಅವನ ಧ್ವನಿಯಲ್ಲಿ ಸ್ಪಷ್ಟ ಬದಲಾವಣೆ ಆಯಿತು. ಅಲ್ಲಿಯವರೆಗೂ ಅರಳು ಹುರಿದಂತೆ ಪಟ ಪಟನೆ ಮಾತನಾಡುತ್ತಿದ್ದ ಆತ ಈಗ ಸುಮ್ಮನೆ ವಿಚಿತ್ರ ಮೌನದಿಂದ ಹ್ಞೂಂ ಗುಡುತ್ತಿದ್ದನು. ಸ್ವಲ್ಪ ...