ಪೋಸ್ಟ್‌ಗಳು

ಕೆಲವು ಸತ್ಯಗಳು. ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಜೀವನದಲ್ಲಿ ತಡವಾಗಿ ಅರ್ಥವಾಗುವ ಸತ್ಯಗಳು

ಇಮೇಜ್
ಜೀವನದಲ್ಲಿ ತಡವಾಗಿ ಅರ್ಥವಾಗುವ ಪೂರ್ಣ ಸತ್ಯಗಳು :- ತುಂಬ ದಿನಗಳ ನಂತರ ಹಳೆಯ ಸ್ನೇಹಿತನೊಬ್ಬ ಭೇಟಿಯಾಗಿದ್ದ.ಅ ಕಾಲೇಜು ದಿನಗಳಲ್ಲಿ ಅವನೊಂಥರ ರಾಜಕುಮಾರ. ಅವನ ಸುತ್ತಲೂ ಹತ್ತಾರು ಜನ ಹುಡುಗರು. ಅವನ ಜೊತೆಗಿನ ಸ್ನೇಹದಲ್ಲಿ ಅದೆಷ್ಟು ಜನ ಮುಳುಗಿದ್ದರೂ ಗೊತ್ತಿಲ್ಲ. ಯಾವಾಗಲೂ ಕ್ಲಾಸಗೆ ಚಕ್ಕರ ಹಾಕಿ, ಅದು ಇದು ಅಂತ ತಿರುಗಾಡುತ್ತಿದ್ದದರಿಂದ ಅವನು ತರಗತಿಗೆ ಅಪರೂಪದವನಾಗಿದ್ದ. ಕ್ಲಾಸು, ಲೈಬ್ರರಿ, ವರ್ಕು ಅನ್ನೂದ್ರಲ್ಲೆ ಕಳೆದು ಹೊಗುತ್ತಿದ್ದ ನನ್ನೋಂದಿಗೆ ಅವನ ಸ್ನೇಹ ಅಷ್ಟಕ್ಕಷ್ಟೆ ಎಂಬಂತಿತ್ತು. ಆದರೆ ಈಗ ನನ್ನ ಎದುರು ಬಂದ ಹುಡುಗ ಅವನೆನಾ ಎನ್ನುವಷ್ಟು ಬದಲಾಗಿದ್ದ. ಚುಮು ಚುಮು ಮಳೆ ಬಿಳುತ್ತಿರುವುದರಿಂದ ಅಲ್ಲಿಯೆ ಪಕ್ಕದಲ್ಲಿದ್ದ ಟೀ ಅಂಗಡಿಯಲ್ಲಿ ಕುಳಿತೆವು. ಅವನು ಹೆಚ್ಚಿಗೆನು ಮಾತಾಡಲಿಲ್ಲ. ಮದುವೆ ಮಕ್ಕಳು ಹಾಗೆ ಹೀಗೆ ಕೇಳಿ ಹೋಗುತ್ತೆನೆಂದನು. ನಾನು ತಡೆಯಲಿಲ್ಲ. ಅವನು ಹೋದ ನಂತರ ಇನ್ನೊಂದು ಕಪ್ ಟೀ ಹಿರುತ್ತಾ ಅವನ ಜೊತೆ ಮಾತಾಡಿದ್ದನ್ನು ಮೆಲುಕು ಹಾಕಿದೆ. ಆತನ ಒಂದು ಮಾತು ಚೆನ್ನಾಗಿ ಜ್ಞಾಪಕಕ್ಕೆ ಉಳಿದಿತ್ತು.ಅದನ್ನೇ ಆಲೋಚಿಸಿದೆ. ಹೌದು ಮದುವೆ ಮಕ್ಕಳು ಸಂಸಾರದ ಜಂಜಡಗಳಲ್ಲಿ ಮುಳುಗಿದ್ದ ಆತನಿಗೆ ಈಗ ಜ್ಞಾನೊದಯವಾಗಿತ್ತು. ಬಹುತೇಕ ಎಲ್ಲರೂ ತಮ್ಮ ಬದುಕಿನ ಮಾಡುವ ಮೊದಲ ತಪ್ಪು ಅದು. ಜೀವನದ ಬಗೆಗೆ ಅಪಾರ ನೀರಿಕ್ಷೆಗಳನಿಟ್ಟುಕೊಂಡು ಪಡಿಬಾರದ ಪಡಿಪಾಟಲು ಅನುಭವಿಸುವ ಮೂಲಕ ತಮ್ಮ ಮೇಲೆ ತಾವೇ ಭ್ರಮನಿ...