ವೀರಶೈವ ಹಾಗೂ ವಿರಕ್ತ ಮಠಗಳಿಗೆ ಮಾದರಿ ಭಾಲ್ಕಿ ಹಿರೇಮಠ

 

ವೀರಶೈವ ಹಾಗೂ ವಿರಕ್ತ ಮಠಗಳಿಗೆ ಮಾದರಿ ಭಾಲ್ಕಿಯ ಹಿರೇಮಠ ಸಂಸ್ಥಾನ ಮಠ


 

        ಸ್ವಲ್ಪ ಕಲ್ಪಿಸಿಕೊಳ್ಳಿ, ನಿಮ್ಮದೆ ಆದ ಮನೆ , ಅದು ಪೂರ್ವಜರು ಬಾಳಿ ಬೆಳಗಿದ ಮನೆ. ಆದರೆ ನಿಮ್ಮ ಕಾರ್ಯಕ್ಷಮತೆ ಹಾಗೂ ನಿಮ್ಮ ದಯಾಪರ ನೀತಿಯಿಂದಾಗಿ   ನಿಮ್ಮದೆ ಮನೆಯಲ್ಲಿ ನೀವುಗಳು ಎರಡನೆ ದರ್ಜೆಗೆ ಇಳಿದಿದ್ದಿರಿ. ಅಲ್ಲದೆ ಪ್ರತಿಯೊಂದು ಅಂಶಕ್ಕೂ ನೀವು ಆ ನಿಮ್ಮ ನೆಂಟರಿಷ್ಟರ ಅನುಮತಿ ಪಡೆಯಬೇಕಾಗಿದೆ. ನೆನಪಿಡಿ. ಅದು ನಿಮ್ಮದೆ ಮನೆ. ನಿಮ್ಮದೆ ಪೂರ್ವಜರ ಮನೆ.  ನಿಮ್ಮ ಮನಸ್ಥಿತಿ ಹೇಗಾಗಿರಬೇಡ.

      ಇಂತಹ ಪರಿಸ್ಥಿತಿಯನ್ನು ಇಡಿ ಕನ್ನಡ ನಾಡಿಗೂ ಸಹ ಅನ್ವಯಿಸಿಕೊಳ್ಳಿ. ನಿಮ್ಮದೆ ನಾಡು, ನಿಮ್ಮ ಪೂರ್ಜಜರು  ನೀಡಿ ಹೋದ ಸಾಂಸ್ಕೃತಿಕ  ಅಸ್ಮಿತೆಯನ್ನು ನೀವು ಮುಂದುವರೆಸಲೆಬೇಕು ಏನ್ನುವ ನಿಮ್ಮ ಮನಸ್ಥಿತಿಗೆ ನಿಮ್ಮಲ್ಲೆ ಇರದ ಒಗ್ಗಟ್ಟು ದಾರಿಗಡ್ಡವಾಗಿ ನಿಂತಿದೆ.  ಸಾವಿರಾರು ವರುಷಗಳಿಂದ ಓತಪ್ರೋತವಾಗಿ ಹರಿದು ಬಂದಿರುವ ನಿಮ್ಮ ಭಾಷೆಯ ಸಾಹಿತ್ಯ ಸಂಸ್ಕೃತಿ ಆಕ್ರಮಣಕಾರರಾಗಿ ಈ  ನಾಡಿನ ಮೇಲೆ ಧಾಳಿ ಎಸಗಿದ ವ್ಯಕ್ತಿಗಳಿಂದ ಹಾನಿಗೊಳಗಾಗುತ್ತಿದೆ. ಈ ವಿಷಯಗಳನ್ನು ಕುರಿತಾದ ವಿಷಯಗಳನ್ನು ಮಾತಾಡಿದರೆ ನಿಮ್ಮನ್ನೆ ದೂಷಿಸುವಂತಹ ವ್ಯವಸ್ಥೆ ಇದೆ.

       ಇದನ್ನೆಲ್ಲಾ ಗಮನಿಸಿದರೆ ನೀವು ನಿಮ್ಮದೆ ನಾಡಿನಲ್ಲಿ ಪರಕೀಯರಯ ಎಂಬ ಭಾವನೆ ಮೂಡುತ್ತದೆ, ನಿಮ್ಮದೆ ಭಾಷೆ ಸಂಸ್ಕೃತಿಗಳನ್ನು ಮುಂದುವರೆಸಿಕೊಡು ಹೋಗಲು ಸಹ ದಂಡ ಕಟ್ಟಬೇಕಾದ ಪರಿಸ್ಥಿತಿ ಇದ್ದಾಗ ಯಾವುದೊ ಒಂದು ಶಕ್ತಿ ನಮ್ಮನ್ನು ಮುನ್ನಡೆಸುತ್ತದೆ. ಅಂತಹ ಶಕ್ತಿ ಈಗಿನ ಕಲ್ಯಾಣ ಕರ್ನಾಟಕ ಎಂದು ಕರೆಸಿಕೊಳ್ಳುತ್ತಿರುವ ಹೈದ್ರಾಬಾದ್‌ ಕರ್ನಾಟಕದ ತುತ್ತ ತುದಿಯಾಗಿರುವ ಬೀದರ ಜಿಲ್ಲೆಯಲ್ಲಿ ಕಳೆದ ಶತಮಾದಲ್ಲಿ ಮೂಡಿ ಮುಂದಿನ ಹೊಸ ಪರಂಪರಗೆ ನಾಂದಿ ಹಾಕಿಕೊಟ್ಟಿತು. 

      ಆ ಶಕ್ತಿ ಇಂದು ಬೃಹತ್ತಾಗಿ ಬೆಳೆದು ನಮ್ಮನ್ನು ಇಂದು ಒಂದು  ಗುರುತರವಾದ ಸಂಕಲ್ಪ ಸಾಧನೆಯೆಡೆಗೆ  ಕರೆದೊಯ್ಯುತ್ತಿದೆ. ಆ ಶಕ್ತಿ ಪರಮ ಪೂಜ್ಯ ಡಾ|| ಚೆನ್ನಬಸವ ಪಟ್ಟದ್ದೇವರು. ನಿಜಾಮನ ಕನ್ನಡ ಸಂಸ್ಕೃತಿ ವಿರೋಧಿ ನೀತಿಗಳ ವಿರುದ್ದ ಹೋರಾಡಿ, ಕನ್ನಡ ಮಠವನ್ನು ಕಟ್ಟಿದ ಈ ಪರಂಪರೆ  ಮೂರು ತಲೆಮಾರುಗಳಿಗೂ ಹಬ್ಬಿದೆ. ಅಹಂಕಾರ ಹಾಗೂ ದೌರ್ಜನ್ಯ ಕೊನೆಯವರೆಗೂ ಮುಟ್ಟುವುದಿಲ್ಲ ಎನ್ನುವುದಕ್ಕೆ ಇದೆ ಸಾಕ್ಷಿ. ಯಾವ ನೆಲದಲ್ಲಿ ಕನ್ನಡ ಉಸಿರಾಡಲೂ ತೆರಿಗೆ ಕಟ್ಟಬೇಕೆಂದು ಕಟ್ಟಪ್ಪಣೆ ಮಾಡಿದ್ದನೂ, ಇಲ್ಲಿನ ಸಹಸ್ರಾರು ವರುಷಗಳ ಪರಂಪರೆಗೆ ಧಕ್ಕೆ ತಂದಿದ್ದನೋ, ಅದೆ  ನಿಜಾಂ ನೆ ಸ್ವತಃ ಈ ನೆಲವನ್ನು ಬಿಟ್ಟು ಓಡಿಹೋದದ್ದು ಕಾಲಗತಿಯು ನಿಲ್ಲದು ಎನ್ನುವುದರ ಸೂಚಕ. ಪರಮ ಪೂಜ್ಯ ಡಾ. ಚೆನ್ನಬಸವ ಪಟ್ಟದ್ದೇವರಿಂದ ಆರಂಭವಾದ ಈ ಲಿಂಗಾಯತದ ಪರಂಪರೆಯ ಸಮಾಜ ಸೇವೆಯ ನಿರಂತರತೆಯ ಅಸ್ಮಿತೆ ಪೂಜ್ಯರ ಮಾರ್ಗದರ್ಶನದಲ್ಲಿ  ಮುಂದುವರೆಯಿತು.

      ಭಾಲ್ಕಿ ಬಸವ ಮಠದ ಇತಿಹಾಸವೂ ಅಷ್ಟೆ ರೋಚಕವಾದುದು. ಸಂಪ್ರದಾಯಕವಾಗಿ ಇದು ವೀರಶೈವ ಮಾದರಿಯ ಹಿರೇಮಠವಾಗಿದ್ದರೂ ಸಹ ಬಸವತತ್ವವನ್ನು ತನ್ನ ಉಸಿರಾಗಿಸಿಕೊಂಡಿದೆ. ಕಲ್ಯಾಣ ನಾಡಿನಲ್ಲಿ ಬಸವತತ್ವ ಪ್ರಚಾರದ ಅತ್ಯಂತ ಮುಖ್ಯ ಕೊಂಡಿ ಇದು. ತ್ರಿವಿಧ ದಾಸೋಹದ ಮೂಲಕ ಇಲ್ಲಿನ ಜನ ಮನವನ್ನು ಪೊರೆಯುತ್ತಿರುವ ಈ ಬಸವಮಠ ನಾಡಿನ ವೀರಶೈವ ಹಾಗೂ ವಿರಕ್ತ ಮಠಗಳಿಗೆ ಮಾದರಿಯಾಗಿ ನಿಂತಿದೆ.

        ಇಂದು ಧರ್ಮಗುರು ಬಸವಣ್ಣನವರ ಹೆಸರೆ ವಿತಂಡವಾದಿಗಳ ಪ್ರಮುಖ ಆಯುಧವಾಗಿದೆ. ಅವರ ಹೆಸರಿದ್ದರೆ ಸಾಕು, ಯಾವುದೆ ವಿರೋಧವಾಗುವುದಿಲ್ಲ ಎಂದು ತಿಳಿದಂತಿದೆ. ಕೆಲವೊಂದಿಷ್ಟು ಮಠಾಧೀಶರಂತೂ ಬಸವಣ್ಣನವರ ಹೆಸರನ್ನೆ ತಮ್ಮ ಕಾರ್ಯ ಸಾಧುವಾಗಷ್ಟರ ಮಟ್ಟಿಗೆ ತಮ್ಮ ಹೆಸರಿನಲ್ಲೆ ಸೇರಿಸಿಕೊಂಡು ಬಿಟ್ಟಿರುತ್ತಾರೆ. ನಂತರ ಅದನ್ನು ತೆಗೆದುಹಾಕುತ್ತಾರೆ. ಇತ್ತಿಚಿಗೆ ಲಿಂಗಾಯತ ಸಮುದಾಯವನ್ನು ಒಡೆಯುವ ನಿಟ್ಟಿನಲ್ಲಿ ರೂಪುಗೊಂಡ  ಜಾತಿ ಮೀಸಲಾತಿ ಚಳುವಳಿಯ ನೇತೃತ್ವ ವಹಿಸಿಕೊಂಡಿದ್ದ ಸ್ವಾಮೀಜಿಯೊಬ್ಬರು ತಮ್ಮ ಹೆಸರಿನಲ್ಲೆ ಗುರು ಬಸವಣ್ಣನವರ ಹೆಸರನ್ನು ಸೇರಿಸಿಕೊಂಡು, ಸ್ವಲ್ಪ ಜನಪ್ರಿಯತೆ ಸಿಕ್ಕ ಬಳಿಕ, ತಮ್ಮ ಹೆಸರಿನಿಂದ ತೆಗೆದು ಹಾಕಿದ್ದು ಕಾಣಬಹುದು.

      ಇನ್ನೂ ಇತ್ತೀಚಿಗೆ ಶರಣ ಕ್ರಾಂತಿಯ ಮಹೋನ್ನತ ನಾಡು  ʼʼಬಸವಕಲ್ಯಾಣʼʼ ದಲ್ಲಿ ಒಂದು ಸಮಾವೇಶ ಜರುಗಿತು. ಯಾವ ಧರ್ಮದ ವಿರುದ್ದ ಹೋರಾಡಿ ಬಸವಣ್ಣನವರು ಸಮಾಜದಲ್ಲಿ ಸಮಾನತೆ ತರಲು ಯತ್ನಿಸಿದರೋ ಅದೆ ಧರ್ಮದ ಬಂಡವಾಳದಲ್ಲಿ ನಡೆದ  ಸಮಾವೇಶಕ್ಕೆ ಇಟ್ಟ ಹೆಸರೆ ʼʼಬಸವಾದಿ ಶಿವಶರಣರ ಹಿಂದೂ ಸಮಾವೇಶʼʼ ಎಂದು. ಇದಕ್ಕೆ ಸಂವಾದಿಯಾದಿ ಅನೇಕ ವೀರಶೈವ ಮಠಗಳ ಮಠಾಧೀಶರು ಸಹ ಅಲ್ಲಿ ಸೇರಿ, ಆ ಸಮಾವೇಶಕ್ಕೆ ಬಂದಿರುವ ಬಸವತತ್ವ ವಿರೋಧಿ ಸ್ವಾಮಿಯೊಬ್ಬರ ಆಶಿರ್ವಾದ ಪಡೆದುಕೊಂಡು ಪುನೀತರಾದರು. ಬಸವಣ್ಣನವರಿಗೆ ಎಂತಹ ಅನ್ಯಾಯ……

       ಇದಕ್ಕೆ ಸಂಪೂರ್ಣ ತದ್ವಿರುದ್ದವಾಗಿ ಸಮಾಜ ಸೇವೆಯಲ್ಲಿ ಸಾಗುತ್ತಿರುವ ಭಾಲ್ಕಿಯ  ಬಸವ ಮಠ ನಾಡಿನ ಎಲ್ಲಾ ಮಠಗಳಿಗೆ ಮಾದರಿಯಾಗಿ ನಿಲ್ಲುತ್ತದೆ. ಇಂತಹ ಮಠಗಳು ಕನ್ನಡ ನಾಡಿನ ಅಸ್ಮಿತೆಯನ್ನು ಉಳಿಸುವ ಬೆಳೆಸುವ ನೈಜ ದೀಪಗಂಬಗಳು. ಜಾತಿ ವ್ಯವಸ್ಥೆಯನ್ನು ಪೂಷಿಸುವ ವೀರಶೈವ ಮಠಗಳು ಹಾಗೂ ತಮ್ಮದೆ ಆಮೆಚಿಪ್ಪಿನಲ್ಲಿ ಬಂದಿತರಾಗಿರುವ ವಿರಕ್ತ ಮಠಗಳು , ಬಸವಾದಿ ಶರಣರ ತತ್ವಗಳನ್ನು ಪ್ರಚಾರ ಮಾಡುತ್ತಿರುವ ಬಸವ ಮಠವನ್ನು ಅನುಸರಿಸಬೇಕು. ಆ ಮೂಲಕ ಕನ್ನಡ ಮೂಲ ಅಸ್ಮಿತೆಯನ್ನು ಎತ್ತಿ ಹಿಡಿಯುವುದರಲ್ಲಿಯೆ ಕನ್ನಡಿಗರ ಒಳಿತು ಅಡಗಿದೆ.

ಸಮಭಾವ ಸಮಜೀವದ ಸಮಾಜಕ್ಕಾಗಿ ನಮ್ಮೊಳಗೊಂದು ಅಂತರಂಗದ ಚಳುವಳಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡಮಯ ಮಹಾರಾಷ್ಟ್ರ

ವಿಜ್ಞಾನದ ಮೂಲವೆ ಪ್ರಶ್ನೆ ಮಾಡುವ ಕುತೂಹಲಕರ ಮನಸ್ಸು...

ಎರಡು ಯಜಮಾಾರ ಕುದುರೆ ಹಾಗೂ ದಾಂಪತ್ಯ ಗೀತೆ.....