ಕನ್ನಡಮಯ ಮಹಾರಾಷ್ಟ್ರ
ಕನ್ನಡಮಯ ಮಹಾರಾಷ್ಟ್ರ ಯಾರೂ ತಿಳಿಯದ ಇತಿಹಾಸದ ಕಟು ಸತ್ಯಗಳು ಕಳೆದು ಹೋದ ಕನ್ನಡ ಭಾಷೆ , ಕನ್ನಡದ ನೆಲ, ಕನ್ನಡದ ಜಲ…… ದಕ್ಷಿಣ ಭಾರತವಷ್ಟೆ ಅಲ್ಲ, ಸಮಸ್ತ ಭಾರತದ ಇತಿಹಾಸದಲ್ಲಿ ಕರ್ನಾಟಕವು ಬಹಳಷ್ಟು ಬಾರಿ ಅತ್ಯಂತ ನಿರ್ಣಾಯಕ ಪಾತ್ರವನ್ನು ವಹಿಸಿದೆ. ಅದೆಷ್ಟೋ ಬಾರಿ ಕರ್ನಾಟಕವು ಭಾರತದ ಇತಿಹಾಸದ ನದಿಯ ಹರಿವ ದಿಕ್ಕನ್ನೆ ಬದಲಿಸಿದೆ. ಸ್ನೇಹಿತರೆ, ನಾವು ಕೇವಲ ಇತಿಹಾಸದ ಸಮಯದಲ್ಲಿನ ಕರ್ನಾಟಕ ಅಷ್ಟೆ ಅಲ್ಲ, ಇತಿಹಾಸ ಪೂರ್ವದಲ್ಲಿಯೂ ಸಹ ಕನ್ನಡ ಇರುವಿಕೆಯನ್ನು ಸಿಂಧೂ ಸರಸ್ವತಿ ನಾಗರಿಕತೆಯ ಸಂದರ್ಭದಲ್ಲಿಯೆ ಪತ್ತೆ ಹಚ್ಚಬಹುದು. ಆಗಿನ ಸಿಂಧೂ ನದಿ ನಾಗರಿಕತೆ ಅಂದರೆ ನಮ್ಮದೆ ಆದ ಹರಪ್ಪ ನಾಗರಿಕತೆಗೆ ಚಿನ್ನ ದ ಪೂರೈಕೆ ಇಲ್ಲಿಂದಲೆ ಆಗುತ್ತಿತ್ತು ಎನ್ನುವುದನ್ನು ನಮ್ಮ ಪುರಾತನ ತಜ್ಞರು ಪತ್ತೆ ಹಚ್ಚಿದ್ದಾರೆ. ಅಲ್ಲದೆ ಮಹಾಭಾರತದ ಯುದ್ದದಲ್ಲಿಯೂ ಸಹ ನಮ್ಮ ಕನ್ನಡದ ಸೈನಿಕರು ಹೋರಾಡಿದ್ದನ್ನು ವ್ಯಾಸ ಭಾರತದಲ್ಲಿ ದಾಖಲೆಯಲ್ಲಿದೆ. ಇನ್ನೂ ಕನ್ನಡದ ಇತಿಹಾಸವಂತೂ ಅಗಣಿತ ಸೈನಿಕ ಸಾಹಸಗಳಿಂದ, ಅಪೂರ್ವ ಕಲಾಸೌಂದರ್ಯದ ವಾಸ್ತಶಿಲ್ಪಗಳಿಂದಗಳಿಂದ ತುಂಬಿದೆ. ಪ್ರಾಚೀನದಿಂದಲೂ ಉತ್ತರ ಮತ್ತು ದಕ್ಷಿಣಗಳನ್ನು ಬೆಸೆದ ರಾಜ್ಯ ನಮ್ಮ ಹೆಮ್ಮೆಯ ಕರ್ನಾಟಕ. ಇದರಿಂದ ನಾವು ಪಡೆದುಕೊಂಡಿದ್ದು ಕೆಲವೊಂದಿಷ್ಟಾದರೂ ಬಹಳಷ್ಟನ್ನು ಕಳೆದುಕೊಂಡಿದ್ದು ಸಹ ಅಷ್ಟೆ ಸತ್ಯ. ಒಂದು ನಾಗ...