ಪೋಸ್ಟ್‌ಗಳು

ಮಾನಸಿಕ ಒತ್ತಡ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಮಾನಸಿಕ ಒತ್ತಡ : ಸನ್ನಿವೇಶಗಳು ಮತ್ತು ನಿರ್ವಹಣೆ

ಇಮೇಜ್
ಮಾನಸಿಕ ಒತ್ತಡ :- ಸನ್ನಿವೇಶಗಳು ಮತ್ತು  ದೇಹದ ಮೇಲೆ ಪ್ರಭಾವ. ಎರಡು ದಿನಗಳ ಹಿಂದೆ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ಸುದ್ದಿ ಕೇಳಿ ತೀವ್ರ ಆಘಾತವಾಯಿತು. ೩೫ ರ ಹರೆಯದ ಶಿಕ್ಷಕರೊಬ್ಬರು ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರಿಗೆ ವುಹಾನ್ ವೈರಸ್ ಅಂದರೆ ಕೋವಿಡ್-೧೯ ರ ಸೊಂಕು ತಗುಲಿತ್ತು. ಮೂಲಗಳ ಪ್ರಕಾರ ಸೊಂಕು ಅವರಿಗೆ ತಗುಲಿದ್ದರೂ ಸಹ ಅವರು ಗುಣಮುಖರಾಗುವ ಸಾಧ್ಯತೆಗಳು ಬಹಳಷ್ಟಿದ್ದವು. ವೈದ್ಯರು ಮತ್ತು ಕೋವಿಡ್ ಆಪ್ತ ಸಮಾಲೋಚಕರು ಅವರಿಗೆ ಧೈರ್ಯ ಹೇಳಿದರು ಸಹ ಅವರು ಮಾನಸಿಕವಾಗಿ ತೀವ್ರ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆಯಂತಹ ದಾರಿ ಹಿಡಿದಿದ್ದರು, ಅವರು ಶಿಕ್ಷಕರಾಗಿದ್ದರು ಎಂಬುದು  ಇನ್ನೊಂದು ಸಹಿಸಲಾರದ ಅಂಶವಾಗಿತ್ತು. ಶಿಕ್ಷಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಸುದ್ದಿ. ಶಿಕ್ಷಣ, ಮೌಲ್ಯಗಳು ಮತ್ತು ನಾಗರಿಕತೆಯನ್ನು ಕಲಿಸುವ ಶಿಕ್ಷಕರೆ ಇಷ್ಟೊಂದು ಧೈರ್ಯಗೆಟ್ಟರೆ ಮಕ್ಕಳಿಗೆ ನಾವು ಇನ್ನೆಂತಹ ಶಿಕ್ಷಣ ನೀಡಬಹುದು??? ಎನ್ನವುದೊಂದು ಪ್ರಶ್ನೆಯಾದರೆ, ಆತ್ಮಹತ್ಯೆಯಂತಹ ಕನಿಷ್ಟತಮ ಕೃತ್ಯಕ್ಕೆ ಪ್ರೇರೆಪಿಸುವ ಒತ್ತಡ ನಿವಾರಣೆ ಇನ್ನೊಂದು ಮುಖ್ಯವಾದ ಸವಾಲಾಗಿ ನಿಂತಿದೆ. ನಾವೆಲ್ಲರೂ ನಮ್ಮ ಜೀವನದ ಒಂದಿಲ್ಲೊಂದು ಸಂದರ್ಭದಲ್ಲಿ ನಮ್ಮ ಅಸ್ತಿತ್ವಕ್ಕೆ ಮೀರಿದ ಒತ್ತಡವನ್ನು ಅನುಭವಿಸುತ್ತೆವೆ. ಇದು ನಮ್ಮ  ಸುತ್ತಮುತ್ತಲಿನ ಪರಿಸರ, ನಾವು ಮಾಡುವ ಕೆಲಸಗಳು, ಇಲ್ಲವೆ ನಮ್ಮ ಜೀವನ ವಿಧಾನ...