ಪೋಸ್ಟ್‌ಗಳು

ಜೀವನದಲ್ಲಿ ಸಹಕಾರದ ಪ್ರಾಮುಖ್ಯತೆ. ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಎರಡು ಯಜಮಾಾರ ಕುದುರೆ ಹಾಗೂ ದಾಂಪತ್ಯ ಗೀತೆ.....

ಇಮೇಜ್
ಎರಡು ಯಜಮಾನರ ಕುದುರೆ ಏಕೆ ಸೊರಗುತ್ತದೆ? – ಒಂದು ಕುಟುಂಬ ಕಲಿಸುವ ಪಾಠ   ಹೀಗೆ ಜೀವನ ನಡೆಯುತ್ತಿರುತ್ತದೆ. ಎಲ್ಲವೂ ಉತ್ತಮವಾಗಿಯೆ ಸಾಗುತ್ತಿದೆ ಎಂದಾಗ ಅಕಸ್ಮಾತ್ ಆಗಿ ಏನೋ ಒಂದು ಘಟಿಸುತ್ತದೆ. ಆ ಕ್ಷಣದಲ್ಲಿ ನೀವು ಆ ಘಟನೆ ಬಗ್ಗೆ ಮಾತ್ರ ಯೋಚಿಸುತ್ತಿರಿ. ಆದರೆ ಆ ಘಟನೆ ಜರುಗಲು ಬಹು ಹಿಂದಿನಿಂದಲೆ ಒಂದು ಹಲವಾರು ಕಾರಣಗಳು ಸುಪ್ತವಾಗಿ ಕಾರ್ಯ ನಿರ್ವಹಿಸುತ್ತಿರುತ್ತವೆ. ಕುಟುಂಬವನ್ನೆ ತೆಗೆದುಕೊಳ್ಳಿ. ಎಲ್ಲವೂ ಚೆನ್ನಾಗಿದೆ ಅನ್ನುವಷ್ಟರಲ್ಲಿ ಏನೋ ಅಚಾತುರ್ಯ ನಡೆದು ಬಿಡುತ್ತದೆ. ಆದರೆ   ಕುಟುಂಬವೂ ಒಂದು ಪುಟ್ಟ ರಾಜ್ಯವಿದ್ದಂತೆ. ಆ ರಾಜ್ಯದಲ್ಲಿ ಪ್ರೀತಿ ಇರುತ್ತದೆ, ಜವಾಬ್ದಾರಿಗಳು ಇರುತ್ತವೆ, ಕನಸುಗಳಿರುತ್ತವೆ, ಭಿನ್ನಾಭಿಪ್ರಾಯಗಳೂ ಇರುತ್ತವೆ. ಆದರೆ ಇವೆಲ್ಲವನ್ನೂ ಮೀರಿ ಆ ಕುಟುಂಬವನ್ನು ಒಂದಾಗಿ ಹಿಡಿದಿಡುವ ಶಕ್ತಿ ಯಾವುದು ಎಂದರೆ ಸ್ಪಷ್ಟತೆ ಮತ್ತು ಪರಸ್ಪರ ವಿಶ್ವಾಸ . ಒಂದು ಹಳೆಯ ಗಾದೆಯನ್ನು ನೆನಪಿಸಿಕೊಳ್ಳಬಹುದು, "ಎರಡು ಯಜಮಾನರಿರುವ ಕುದುರೆ ಯಾವಾಗಲೂ ಸೊರಗಿರುತ್ತದೆ; ಇಬ್ಬರು ನಾಯಕರು ನಡೆಸುವ ಹಡಗು ಮುಳುಗುತ್ತದೆ." ಮೊದಲ ನೋಟಕ್ಕೆ ಇದು ಕುದುರೆ ಮತ್ತು ಹಡಗಿನ ಕಥೆಯಂತೆ ಕಾಣಬಹುದು. ಆದರೆ ನಿಜವಾಗಿ ಇದು ಕುಟುಂಬದ ಬದುಕನ್ನು ಕನ್ನಡಿಯಂತೆ ತೋರಿಸುವ ಜೀವನದ ತತ್ವ. ಒಂದು ಮನೆಯಲ್ಲಿರುವ ಐದು ವರ್ಷದ ಮಗನನ್ನು ಊಹಿಸಿಕೊಳ್ಳಿ. ತಂದೆ, "ಪ್ರತಿದಿನ ಒಂದು ಗಂಟೆ ಓದು" ಎಂದು ಹೇಳುತ್...