ವಿಜ್ಞಾನದ ಮೂಲವೆ ಪ್ರಶ್ನೆ ಮಾಡುವ ಕುತೂಹಲಕರ ಮನಸ್ಸು...

ವಿಜ್ಞಾನದ ಮೂಲವೆ ಪ್ರಶ್ನೆ ಮಾಡುವ ಕುತೂಹಲಕರ ಮನಸ್ಸು
ಡಾ! ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮುಂದಾಳತ್ವದಲ್ಲಿ ರೂಪಿಸಿದ ಸಂವಿಧಾನದ ಮೂಲ ಆಶಯಗಳಲ್ಲಿ ಪ್ರಶ್ನಿಸುವುದು ಒಂದು ಬಹು ಮುಖ್ಯ ಅಂಶ.
ಅಲ್ಲದೆ ನಮ್ಮದೆ ಪ್ರಪ್ರಾಚೀನ ತತ್ವಜ್ಞಾನದ ರೂಪಗಳಾಗಿರುವ ಉಪನಿಷತ್ತುಗಳು ಇರುವುದು ಪ್ರಶ್ನೋತ್ತರಗಳ ಮಾದರಿಯಲ್ಲೆ. ಸಹಸ್ರಾರು ಜನರು ಗೌರವಿಸುವ   ನಮ್ಮ ಭಗವದ್ಗೀತೆ ಇರುವುದು ಪ್ರಶ್ನೋತ್ತರದ ರೂಪದಲ್ಲೆ, ಬೌದ್ದ ಸಾಹಿತ್ಯದ ಬಹುಭಾಗ ಇರುವುದು, ಮುಖ್ಯ ಗ್ರಂಥವಾದ ಮಿಲಿಂದ ಪನ್ಹಾ ಇರುವುದು ಪ್ರಶ್ನೋತ್ತರದ ಮಾದರಿಯಲ್ಲೆ. 

ಯಾವಾಗ ನಾವು ಪ್ರಶ್ನೆ ಮಾಡುವುದನ್ನು ಬಿಟ್ಟು ಬಿಡುತ್ತೆವೆಯೋ ಆವಾಗ ನಮ್ಮ  ಬೌದ್ದಿಕ ವಿಕಾಸ ನಿಂತುಬಿಡುತ್ತದೆ.
ಮೌಡ್ಯತೆ ಮೂಡುವುದು ವ್ಯಕ್ತಿಗತವಾಗಿ ಆಲೋಚನಾ ಶಕ್ತಿ ಕಳೆದುಕೊಂಡಾಗ, ಯಾರೋ ಒಬ್ಬ ಪ್ರಭಾವಿ ಹೇಳುವುದನ್ನೆ ವೇದವಾಕ್ಯ ಎಂದು ಪರಿಭಾವಿಸಿದಾಗ, ಅಲ್ಲಿಗೆ ನಮ್ಮ ಸ್ವಂತಿಕೆಯ ಅಧಃ ಪತನದ ಆರಂಭವಾಗುವುದು. ..
_ಅಂತಸತ್ವ ಶಕ್ತಿಶಾಲಿಯಾಗಿ ಇರುವ ಯಾವನೂ ಸಹ ಖಂಡಿತ ಪ್ರಶ್ನೆ ಮಾಡದೆ ಯಾವುದನ್ನೂ ಒಪ್ಪಿಕೊಳ್ಳಲಾರ_ , _ಸ್ವೀಕರಿಸಲಾರ_.   ಇಲ್ಲದವ ಮಾತ್ರ ಕತ್ತಲಲ್ಲಿ ಕುರುಡನೆ ದಾರಿ ತೋರುತ್ತಿದ್ದಾನೆ ಎಂಬ ಭಾವದೊಂದಿಗೆ ನಡೆಯುತ್ತಾನೆ.. ಅದು ಅವನ ವ್ಯಯುಕ್ತಿಕ ನಷ್ಟವಲ್ಲದೆ, ಆತನನ್ನೆ ಅವಲಂಬಿಸಿರುವ ವ್ಯವಸ್ಥೆಯ ನಷ್ಟವೂ ಹೌದು.

ಪ್ರಶ್ನೆ ಮಾಡದೆ ಮಾಡುವ ವ್ಯಕ್ತಿಪೂಜೆ ಪ್ರಜಾಪ್ರಭುತ್ವದ ಅಡಿಯಲ್ಲಿ ನಡೆಯುವ ಯಾವ ಸಂಸ್ಥೆಯಲ್ಲಿಯೂ ಸಲ್ಲದು. ಇದರಿಂದ ಪ್ರಜಾಪ್ರಭುತ್ವಕ್ಕೆ ಖಂಡಿತ ಅಪಾಯ ಉಂಟು.

ನಮ್ಮ ತಲೆಮಾರು ಡಾ! ಬಿ.ಆರ್ ಅಂಬೇಡ್ಕರ್ ಅವರನ್ನು ನೋಡದೆ ಇದ್ದರೂ ಅವರ ಪ್ರಖರ ಚಿಂತನೆಗಳಲ್ಲಿ ಬೆಳೆಯುವ ಸಾಧ್ಯತೆ ಸಾಕಷ್ಟಿದೆ.  ವೈಜ್ಞಾನಿಕ ದೃಷ್ಟಿಕೋನ ಕೇವಲ ವಿಜ್ಞಾನದ ಪ್ರಯೋಗಾಲಕ್ಕೆ ಮಾತ್ರ ಸೀಮಿತವಲ್ಲ. ಬದಲಿಗೆ ನಿಜ ಜೀವನದ ಪ್ರತಿಯೊಂದು ಸಂಗತಿಯಲ್ಲೂ ಸಹ ಅನ್ವಯವಾಗುತ್ತದೆ.
ಮಾನ್ಯ ಪೂರ್ವ ಪ್ರಧಾನಿಯವರಾದ ಇಂದಿರಾಜಿ ಯವರ ವ್ಯಕ್ತಿತ್ವ ಇದಕ್ಕೆ ತಕ್ಕ ಹೋಲಿಕೆ. ಅದಕ್ಕಾಗಿಯೆ ಪ್ರಾಯಶಃ ೫೧(ಎ) ವಿಧಿ ತಂದು ಸಮಾಜದಲ್ಲಿ ಅಡಗಿರುವ ಮೌಡ್ಯತೆಯನ್ನು ತೊಡೆದು ಹಾಕಲು ಯತ್ನಿಸಲಾಯಿತು.

ಪ್ರಶ್ನೆ ಮಾಡುವುದನ್ನೆ  ಅಪರಾಧವೆಂಬಂತೆ ಬಿಂಬಿಸುತ್ತಿರುವ ಈ ದಿನಗಳಲ್ಲಿ,   ಒಂದು ವ್ಯವಸ್ಥೆಯ ಮುಖ್ಯರು ಪ್ರಶ್ನೆ ಮಾಡುವುದನ್ನು ಪ್ರೊತ್ಸಾಹಿಸಬೇಕಾಗಿರುವುದು ಬಲು ತುರ್ತಿನ ವಿಷಯ... ಇಂದಿರಜ್ಜಿ ತೋರಿರುವ ಈ ದಾರಿ ಪ್ರಜಾಪ್ರಭುತ್ವಕ್ಕೆ ರಾಜಮಾರ್ಗವಾಗಲಿ ಎಂದು ಹಾರೈಸುತ್ತಾ...... ಇಂದಿನ ವಿಜ್ಞಾನ ದಿನವು ನಮ್ಮೊಳಗೆ ವೈಜ್ಞಾನಿಕ ಹಾಗೂ ಧೈರ್ಯದ ಮನಸ್ಸನ್ನು ತುಂಬಲಿ..

ಸಮಭಾವ ಸಮಜೀವದ ಸಮಾಜಕ್ಕಾಗಿ ನಮ್ಮೊಳಗೊಂದು ಅಂತರಂಗದ ಚಳವಳಿಗೆ ನಿಮ್ಮನ್ನು ಆಹ್ವಾನಿಸುವೆ.

--ನಾಗೇಶ ಮುದ್ದಾಳೆ.
ಉಪ ಪ್ರಾಂಶುಪಾಲರು ಮತ್ತು ಕನ್ನಡ ಸಹ ಶಿಕ್ಷಕರು
ಕಿ.ರಾ.ಚ.ವ.ಶಾಲೆ.ಭಾಲ್ಕಿ
೯೬೬೩೯೯೫೯೦೮

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡಮಯ ಮಹಾರಾಷ್ಟ್ರ

ಸ್ಥಿತಪ್ರಜ್ಞ ಪೌರವ ಪುರುಷ