ಪೋಸ್ಟ್‌ಗಳು

ಜುಲೈ, 2026 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮಂಡೆಲಾ ಎನ್ನುವ ಮಹೋನ್ನತ ವ್ಯಕ್ತಿತ್ವ.

ಇಮೇಜ್
ಲೋಹದ ಸರಪಳಿಯನ್ನು ಮುರಿದು ಸ್ವಾತಂತ್ರ ನೀಡಿದ ಚಿನ್ನದ ವ್ಯಕ್ತಿತ್ವ. ನೆಲ್ಸನ್ ಮಂಡೆಲಾ:  "ಒಬ್ಬ ವ್ಯಕ್ತಿಯನ್ನು ಸೆರೆಮನೆಗೆ ಹಾಕುವುದು ಸುಲಭ. ಆದರೆ ಅವನ ಕನಸುಗಳನ್ನು, ಅವನ ಚಿಂತನೆಗಳನ್ನು, ಅವನ ನ್ಯಾಯದ ನಂಬಿಕೆಯನ್ನು ಸೆರೆಹಿಡಿಯುವುದು ಅಸಾಧ್ಯ." ಇತಿಹಾಸವು ಕೆಲವರನ್ನು ಆಡಳಿತಗಾರರೆಂದು ನೆನಪಿಸಿಕೊಳ್ಳುತ್ತದೆ. ಕೆಲವರನ್ನು ವಿಜಯಿಗಳೆಂದು ಸ್ಮರಿಸುತ್ತದೆ. ಆದರೆ ಕೆಲವು ಅಪರೂಪದ ವ್ಯಕ್ತಿಗಳನ್ನು ಮಾತ್ರ ಮಾನವೀಯತೆಯ ಪ್ರತೀಕವಾಗಿ ಉಳಿಸಿಕೊಳ್ಳುತ್ತದೆ. ಅಂತಹ ಶ್ರೇಷ್ಠ ವ್ಯಕ್ತಿಗಳ ಸಾಲಿನಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ನೆಲ್ಸನ್ ರೋಲಿಹ್ಲಾಹ್ಲಾ ಮಂಡೆಲಾ. ಅವರ ಬದುಕು ಒಬ್ಬ ವ್ಯಕ್ತಿಯ ಯಶೋಗಾಥೆಯಲ್ಲ; ಅದು ಒಂದು ರಾಷ್ಟ್ರದ ಆತ್ಮಗೌರವದ ಪುನರ್ಜನ್ಮದ ಕಥೆ. ಕಪ್ಪು ಮತ್ತು ಬಿಳಿ ಎಂಬ ಹೆಸರಿನಲ್ಲಿ ವಿಭಜನೆಯಾದ ಸಮಾಜಕ್ಕೆ ಸಮಾನತೆಯ ಭಾಷೆಯನ್ನು ಕಲಿಸಿದ ನಾಯಕನ ಕಥೆ. ಜೈಲಿನ ಕತ್ತಲೆಯಲ್ಲಿಯೂ ಸ್ವಾತಂತ್ರ್ಯದ ಕನಸನ್ನು ಜೀವಂತವಾಗಿಟ್ಟ ವ್ಯಕ್ತಿಯ ಕಥೆ. 1918ರ ಜುಲೈ 18ರಂದು ದಕ್ಷಿಣ ಆಫ್ರಿಕಾದ ಮ್ವೆಜೋ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದ ಮಂಡೆಲಾ, ರಾಜವಂಶದ ಹಿನ್ನೆಲೆಯ ಕುಟುಂಬದಿಂದ ಬಂದರೂ, ಬಾಲ್ಯದಲ್ಲಿಯೇ ಸಾಮಾನ್ಯ ಜನರ ಕಷ್ಟಗಳನ್ನು ಕಂಡರು. ಶಿಕ್ಷಣವು ಮನುಷ್ಯನನ್ನು ಬದಲಾಯಿಸಬಲ್ಲದು ಎಂಬ ನಂಬಿಕೆ ಅವರದು  ಉತ್ತಮವಾಗಿ ಓದಿದ ಅವರು ನಂತರ ವಕೀಲರಾದರು. ಆದರೆ ಅವರು ಓದಿದ ಕಾನೂನು ಪುಸ್ತಕಗಳಲ್ಲಿ ನ್ಯ...

ನದಿಯಂತಿರಲಿ ನಮ್ಮ ಬದುಕು..... ನಿರಂತರತೆಯ ನಿರ್ಭಾವದಲಿ........ ಪರಿಪೂರ್ಣನನು ಸೇರುವ ತವಕದಲಿ.

ಇಮೇಜ್
  ನದಿಯಂತಿರಲಿ   ನಮ್ಮ ಬದುಕು              ಈ ಜಗತ್ತಿನಲ್ಲಿ ಅನೇಕ ಬದಲಿಸಲಾಗದ ಅದ್ಭುತಗಳಿವೆ . ಅವುಗಳು   ಅತ್ಯಂತ ಪರಿಪೂರ್ಣ ಬದುಕನ್ನು ಬಾಳುತ್ತವೆ . ಒಂದು ಮರವನ್ನೆ ತೆಗೆದುಕೊಳ್ಳಿ , ಒಂದು ಹಸುವನ್ನಾದರೂ ತೆಗೆದುಕೊಳ್ಳಿ . ಇಂತಹದೆ ಮತ್ತೋಂದು ಅದ್ಭುತವೆಂದರೆ ನದಿ . ವಾಸ್ತವದಲ್ಲಿ ನದಿಯಷ್ಟು ಸುಂದರ ಹಾಗೂ ಪರಿಪೂರ್ಣ ಬದುಕನ್ನು ಬಾಳುವಂತಹ ವಸ್ತಗಳು ಬಹು ಕಡಿಮೆ.ಎಲ್ಲೋ ಹುಟ್ಟಿ ಅದು ಹರಿಯುತ್ತಾ ಸಾಗುತ್ತದೆ. ತನಗೆ ಎದುರಾದ ಪ್ರತಿಯೋಂದನ್ನು ಅದು ಎದುರಿಸುತ್ತಾ ನಿರಂತರವಾಗಿ ಹರಿಯುತ್ತದೆ.ಹುಟ್ಟಿದಾಗ ಅದರ ನೀರನ್ನು   ಬರಿ ಬೊಗಸೆಯಲ್ಲಿ ಹಿಡಿದಿಡಬಹುದು. ಆದರೆ ಬೆಳೆಯುತ್ತಾ ಹೋದಂತೆ, ಅದು ಅಗಾಧವಾದ ಗಾತ್ರಕ್ಕೆ   ಬದಲಾಗುತ್ತದೆ.ಅಷ್ಟೆ ಅಲ್ಲ ತನ್ನ ಸುತ್ತಮುತ್ತ ಇರುವ ಪ್ರದೇಶವನ್ನು ಹಸಿರಾಗಿಸುತ್ತಾ ಸಾಗುತ್ತದೆ. ಜನರ ಜೀವನವನ್ನು ಸುಂದರಗೊಳಿಸಿ ಪ್ರಕೃತಿಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ತನ್ಮೋಲಕ ಜೀವನವನ್ನು ಸಾರ್ಥಕಗೊಳಿಸುತ್ತದೆ.                  ಮನುಷ್ಯ ಜೀವನವೂ ಹಾಗೆ . ಹುಟ್ಟಿದಾಗ ಅಸ್ತಿತ್ವವೆ ಇಲ್ಲದಂತಿರುವ ಪರಿಸ್ಥಿತಿಯಿಂದ ಅಗಾಧ ಸಾಧನೆಯತ್ತ ನಾವು ಸಾಗುತ್ತೆವೆ. ಈ ಜೀವನವನ್ನು ಸುಂ...

ವೀರಶೈವ ಹಾಗೂ ವಿರಕ್ತ ಮಠಗಳಿಗೆ ಮಾದರಿ ಭಾಲ್ಕಿ ಹಿರೇಮಠ

ಇಮೇಜ್
  ವೀರಶೈವ ಹಾಗೂ ವಿರಕ್ತ ಮಠಗಳಿಗೆ ಮಾದರಿ ಭಾಲ್ಕಿಯ ಹಿರೇಮಠ ಸಂಸ್ಥಾನ ಮಠ           ಸ್ವಲ್ಪ ಕಲ್ಪಿಸಿಕೊಳ್ಳಿ, ನಿಮ್ಮದೆ ಆದ ಮನೆ , ಅದು ಪೂರ್ವಜರು ಬಾಳಿ ಬೆಳಗಿದ ಮನೆ. ಆದರೆ ನಿಮ್ಮ ಕಾರ್ಯಕ್ಷಮತೆ ಹಾಗೂ ನಿಮ್ಮ ದಯಾಪರ ನೀತಿಯಿಂದಾಗಿ     ನಿಮ್ಮದೆ ಮನೆಯಲ್ಲಿ ನೀವುಗಳು ಎರಡನೆ ದರ್ಜೆಗೆ ಇಳಿದಿದ್ದಿರಿ. ಅಲ್ಲದೆ ಪ್ರತಿಯೊಂದು ಅಂಶಕ್ಕೂ ನೀವು ಆ ನಿಮ್ಮ ನೆಂಟರಿಷ್ಟರ ಅನುಮತಿ ಪಡೆಯಬೇಕಾಗಿದೆ. ನೆನಪಿಡಿ. ಅದು ನಿಮ್ಮದೆ ಮನೆ. ನಿಮ್ಮದೆ ಪೂರ್ವಜರ ಮನೆ.   ನಿಮ್ಮ ಮನಸ್ಥಿತಿ ಹೇಗಾಗಿರಬೇಡ.       ಇಂತಹ ಪರಿಸ್ಥಿತಿಯನ್ನು ಇಡಿ ಕನ್ನಡ ನಾಡಿಗೂ ಸಹ ಅನ್ವಯಿಸಿಕೊಳ್ಳಿ. ನಿಮ್ಮದೆ ನಾಡು, ನಿಮ್ಮ ಪೂರ್ಜಜರು   ನೀಡಿ ಹೋದ ಸಾಂಸ್ಕೃತಿಕ   ಅಸ್ಮಿತೆಯನ್ನು ನೀವು ಮುಂದುವರೆಸಲೆಬೇಕು ಏನ್ನುವ ನಿಮ್ಮ ಮನಸ್ಥಿತಿಗೆ ನಿಮ್ಮಲ್ಲೆ ಇರದ ಒಗ್ಗಟ್ಟು ದಾರಿಗಡ್ಡವಾಗಿ ನಿಂತಿದೆ.   ಸಾವಿರಾರು ವರುಷಗಳಿಂದ ಓತಪ್ರೋತವಾಗಿ ಹರಿದು ಬಂದಿರುವ ನಿಮ್ಮ ಭಾಷೆಯ ಸಾಹಿತ್ಯ ಸಂಸ್ಕೃತಿ ಆಕ್ರಮಣಕಾರರಾಗಿ ಈ   ನಾಡಿನ ಮೇಲೆ ಧಾಳಿ ಎಸಗಿದ ವ್ಯಕ್ತಿಗಳಿಂದ ಹಾನಿಗೊಳಗಾಗುತ್ತಿದೆ. ಈ ವಿಷಯಗಳನ್ನು ಕುರಿತಾದ ವಿಷಯಗಳನ್ನು ಮಾತಾಡಿದರೆ ನಿಮ್ಮನ್ನೆ ದೂಷಿಸುವಂತಹ ವ್ಯವಸ್ಥೆ ಇದೆ.        ಇದನ್ನೆಲ್ಲಾ ಗಮನಿಸಿದರೆ ನೀವು ನಿಮ್ಮದೆ ನಾಡಿ...

ಇಬ್ಬರು ಮಾಲೀಕರ ಕುದುರೆ ಹಾಗೂ ದಾಂಪತ್ಯ ಗೀತೆ.....

ಇಮೇಜ್
ಎರಡು ಯಜಮಾನರ ಕುದುರೆ ಏಕೆ ಸೊರಗುತ್ತದೆ? – ಒಂದು ಕುಟುಂಬ ಕಲಿಸುವ ಪಾಠ   ಹೀಗೆ ಜೀವನ ನಡೆಯುತ್ತಿರುತ್ತದೆ. ಎಲ್ಲವೂ ಉತ್ತಮವಾಗಿಯೆ ಸಾಗುತ್ತಿದೆ ಎಂದಾಗ ಅಕಸ್ಮಾತ್ ಆಗಿ ಏನೋ ಒಂದು ಘಟಿಸುತ್ತದೆ. ಆ ಕ್ಷಣದಲ್ಲಿ ನೀವು ಆ ಘಟನೆ ಬಗ್ಗೆ ಮಾತ್ರ ಯೋಚಿಸುತ್ತಿರಿ. ಆದರೆ ಆ ಘಟನೆ ಜರುಗಲು ಬಹು ಹಿಂದಿನಿಂದಲೆ ಒಂದು ಹಲವಾರು ಕಾರಣಗಳು ಸುಪ್ತವಾಗಿ ಕಾರ್ಯ ನಿರ್ವಹಿಸುತ್ತಿರುತ್ತವೆ. ಕುಟುಂಬವನ್ನೆ ತೆಗೆದುಕೊಳ್ಳಿ. ಎಲ್ಲವೂ ಚೆನ್ನಾಗಿದೆ ಅನ್ನುವಷ್ಟರಲ್ಲಿ ಏನೋ ಅಚಾತುರ್ಯ ನಡೆದು ಬಿಡುತ್ತದೆ. ಆದರೆ   ಕುಟುಂಬವೂ ಒಂದು ಪುಟ್ಟ ರಾಜ್ಯವಿದ್ದಂತೆ. ಆ ರಾಜ್ಯದಲ್ಲಿ ಪ್ರೀತಿ ಇರುತ್ತದೆ, ಜವಾಬ್ದಾರಿಗಳು ಇರುತ್ತವೆ, ಕನಸುಗಳಿರುತ್ತವೆ, ಭಿನ್ನಾಭಿಪ್ರಾಯಗಳೂ ಇರುತ್ತವೆ. ಆದರೆ ಇವೆಲ್ಲವನ್ನೂ ಮೀರಿ ಆ ಕುಟುಂಬವನ್ನು ಒಂದಾಗಿ ಹಿಡಿದಿಡುವ ಶಕ್ತಿ ಯಾವುದು ಎಂದರೆ ಸ್ಪಷ್ಟತೆ ಮತ್ತು ಪರಸ್ಪರ ವಿಶ್ವಾಸ . ಒಂದು ಹಳೆಯ ಗಾದೆಯನ್ನು ನೆನಪಿಸಿಕೊಳ್ಳಬಹುದು, "ಎರಡು ಯಜಮಾನರಿರುವ ಕುದುರೆ ಯಾವಾಗಲೂ ಸೊರಗಿರುತ್ತದೆ; ಇಬ್ಬರು ನಾಯಕರು ನಡೆಸುವ ಹಡಗು ಮುಳುಗುತ್ತದೆ." ಮೊದಲ ನೋಟಕ್ಕೆ ಇದು ಕುದುರೆ ಮತ್ತು ಹಡಗಿನ ಕಥೆಯಂತೆ ಕಾಣಬಹುದು. ಆದರೆ ನಿಜವಾಗಿ ಇದು ಕುಟುಂಬದ ಬದುಕನ್ನು ಕನ್ನಡಿಯಂತೆ ತೋರಿಸುವ ಜೀವನದ ತತ್ವ. ಒಂದು ಮನೆಯಲ್ಲಿರುವ ಐದು ವರ್ಷದ ಮಗನನ್ನು ಊಹಿಸಿಕೊಳ್ಳಿ. ತಂದೆ, "ಪ್ರತಿದಿನ ಒಂದು ಗಂಟೆ ಓದು" ಎಂದು ಹೇಳುತ್...