ಪೋಸ್ಟ್‌ಗಳು

ಹೀಗೊಂದು ಕಥೆ. ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಹೇಮಿಯ ಗಂಡ

ಇಮೇಜ್
            (ಕುವೆಂಪು ತಮ್ಮ ಮಗು ಮತ್ತು ಮಡದಿ        ಹೇಮಾವತಿಯವರೊಂದಿಗೆ) ಸುಮಾರು ದಿನಗಳಿಂದ ಮನಸ್ಸು ವಿಪ್ಲವದಲ್ಲಿ ಮುಳುಗಿತ್ತು. ಯಾವುದರಲ್ಲಿ‌ ಸಹ ಆಸಕ್ತಿ ಇರಲಿಲ್ಲ. ಕೆಲಸ ದಣಿವು, ನಿದ್ರೆ ಇವುಗಳೆ ನನ್ನ ಸಂಗಾತಿಗಳಾಗಿಬಿಟ್ಟಿದ್ದವು. ನನ್ನವಳ ಕಿರಿ-ಕಿರಿಯಿಂದ ನನಗೆ ಸಾಕಾಗಿತ್ತು. ಪರಸ್ಪರ ಪ್ರೇಮಿಸಿ ಮದುವೆಯಾಗಿದ್ದರು ಸಹ ನಮ್ಮಲ್ಲಿ  ಸಹಸಂಗತಿಗಳು ಹೇರಳವಾಗಿ ಇರಲಿಲ್ಲ. ಅಸಹನೆ ಹೆಚ್ಚುತ್ತಿತ್ತು. ಇಬ್ಬರೂ  ನೌಕರರಾಗಿದ್ದರಿಂದಲೋ, ಸಮಯದ ಅಭಾವದಿಂದಲೋ ಎನೋ ಗೊತ್ತಿಲ್ಲ. ಇವತ್ತು ಬೆಳಿಗ್ಗೆ ಎದ್ದವನೆ ಅವನಿಗೆ ಕರೆ ಮಾಡಿದೆ. ಅವನಿಟ್ಟಿದ್ದ ಕಾಲರ್ ಟ್ಯೂನ್ ಕೇಳಿಯೆ ಮನಸ್ಸು ಸಮಾಧಾನವಾಗಬೇಕು. ಅಂತಹ ಟ್ಯೂನ್ ಅದು. ಆತ ಕರೆ ಸ್ವೀಕರಿಸಿ ಮಾತನಾಡಿದ. ಸಾಯಂಕಾಲ ಸಿಗುವೆಯಾ?? "ಖಂಡಿತ " ಆ ಕಡೆಯಿಂದ ಉತ್ತರ ಬಂದಿತು. ಅಷ್ಟೇ ಕರೆ ಮುರಿಯಿತು. ಚನ್ನಬಸವ ಕೆರೆ, ನಾನಿರುವ ಪಟ್ಟಣದ ಬಹುತೇಕ ಬಾವಿ, ಕೊಳವೆ ಬಾವಿಗಳ ಜೀವದಾಯಿನಿ. ಇದು ಬಯಲು ಸೀಮೆಯ ಈ ಪಟ್ಟಣದಲ್ಲಿ‌ ನೀರಿನ ಸಮಸ್ಯೆಯನ್ನು ಕಡಿಮೆ ಮಾಡಿದೆ. ಇತ್ತಿಚಿಗೆ ಆ ಕೆರೆಯ ಒಡ್ಡನ್ನು ಮತ್ತಷ್ಟು ಎತ್ತರಕ್ಕೆರಿಸಿ ಅದರ ಮೇಲೆ ಡಾಂಬರು ರಸ್ತೆ ಮಾಡಿದ್ದಾರೆ. ಬೆಳಿಗ್ಗೆ ಮತ್ತು ಸಾಯಂಕಾಲ ಅಲ್ಲಿ ಜನ ವಾಯುವಿಹಾರಕ್ಕೆ ಬರುತ್ತಾರೆ. ನಾವಿಬ್...