ಪೋಸ್ಟ್‌ಗಳು

ಸೆಪ್ಟೆಂಬರ್, 2026 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹೈದ್ರಾಬಾದ್ ಕರ್ನಾಟಕ ವಿಮೋಚನಾ ಚಳುವಳಿಗಳು -ಒಂದು ಅಧ್ಯಯನ

  ವಸಾಹತು ಕಾಲದ ರಾಯಚೂರು ಪ್ರದೇಶ :   ಐತಿಹಾಸಿಕ ದಾಖಲೆಗಳು ಮತ್ತು ಚರಿತ್ರೆಯ ಅವಲೋಕನ [೧೮೦೦-೧೯೪೮] ಕಲ್ಯಾಣ ಕರ್ನಾಟಕದಲ್ಲಿ ʼʼ ಹೈದರಾಬಾದ್‌ ವಿಮೋಚನಾ ಹೋರಾಟಗಳುʼʼ (ರಾಯಚೂರು ಜಿಲ್ಲೆಯನ್ನು ಅನುಲಕ್ಷಿಸಿ.) ………………………………………………………………………………………………. ಪ್ರವೇಶ :-               ಸ್ವಾತಂತ್ರ್ಯ ಎನ್ನುವುದು ಒಂದು ಮೂಲಭೂತ ಹಕ್ಕು. ಎಷ್ಟೆಲ್ಲಾ ಸೌಲಭ್ಯ ಸವಲತ್ತುಗಳಿದ್ದರು, ಈ ಒಂದು ಪದಕ್ಕೆ ಅದು ಯಾವುದು ಖಂಡಿತ ಸಮವಾಗಲಾರದು. ಮನುಷ್ಯನಿಗೆ ಅಗತ್ಯವಾಗಿರುವ ಎಲ್ಲದರ ಮೂಲವೆ ಸ್ವಾತಂತ್ರ್ಯ. ಅದರಲ್ಲೂ ಬುದ್ದಿಜೀವಿಯಾಗಿರುವ ಮನುಷ್ಯನಿಗೆ ಬೇಕಾಗಿರುವ ಬಹುಮುಖ್ಯ ಸಂಪತ್ತು ಎಂದರೆ ಅದು ಸ್ವಾತಂತ್ರ. ಬೌಧ್ದಿಕ ವಿಕಾಸ ಹಾಗೂ ಸಮಾಜೋ-ಆರ್ಥಿಕ ಸಂಗತಿಗಳ ಕೃಷಿಯ ಉನ್ನತಿಗೆ ಸ್ವಾತಂತ್ರವೆ ಪ್ರಧಾನವಾದ ನೇಗಿಲು.              ಒಬ್ಬ ವ್ಯಕ್ತಿ, ಸಮಾಜ, ನಾಡು, ದೇಶ ಅಥವಾ ರಾಷ್ಟ್ರ ಹೀಗೆ ಮೂಲ ಘಟಕದಿಂದ ಹಿಡಿದು ಕೊನೆಯ ಘಟಕದವರೆಗೂ ಪ್ರಗತಿಗೆ ಅಡಿಪಾಯವಾಗಿರುವ ಈ ಸ್ವಾತಂತ್ರದ ಪರಿಕಲ್ಪನೆ ಇಂದು ನಿನ್ನೆಯದಲ್ಲ. ಇದಕ್ಕೆ ಸಾವಿರಾರು ವರುಷಗಳ ಇತಿಹಾಸವೆ ಇದೆ. ʼತನ್ನ ತಾನಾಳುವ ಕಲ್ಪನೆಯೆ ಸ್ವಾತಂತ್ರʼ ಎನ್ನುವುದನ್ನು ಸರಳವಾದ ಮಾತುಗಳಲ್ಲಿ ಹೇಳಬಹುದು. ಅಂದರೆ ...