ಜೀವನದಲ್ಲಿ ತಡವಾಗಿ ಅರ್ಥವಾಗುವ ಸತ್ಯಗಳು
ಜೀವನದಲ್ಲಿ ತಡವಾಗಿ ಅರ್ಥವಾಗುವ ಪೂರ್ಣ ಸತ್ಯಗಳು :-
ತುಂಬ ದಿನಗಳ ನಂತರ ಹಳೆಯ ಸ್ನೇಹಿತನೊಬ್ಬ ಭೇಟಿಯಾಗಿದ್ದ.ಅ ಕಾಲೇಜು ದಿನಗಳಲ್ಲಿ ಅವನೊಂಥರ ರಾಜಕುಮಾರ. ಅವನ ಸುತ್ತಲೂ ಹತ್ತಾರು ಜನ ಹುಡುಗರು. ಅವನ ಜೊತೆಗಿನ ಸ್ನೇಹದಲ್ಲಿ ಅದೆಷ್ಟು ಜನ ಮುಳುಗಿದ್ದರೂ ಗೊತ್ತಿಲ್ಲ. ಯಾವಾಗಲೂ ಕ್ಲಾಸಗೆ ಚಕ್ಕರ ಹಾಕಿ, ಅದು ಇದು ಅಂತ ತಿರುಗಾಡುತ್ತಿದ್ದದರಿಂದ ಅವನು ತರಗತಿಗೆ ಅಪರೂಪದವನಾಗಿದ್ದ. ಕ್ಲಾಸು, ಲೈಬ್ರರಿ, ವರ್ಕು ಅನ್ನೂದ್ರಲ್ಲೆ ಕಳೆದು ಹೊಗುತ್ತಿದ್ದ ನನ್ನೋಂದಿಗೆ ಅವನ ಸ್ನೇಹ ಅಷ್ಟಕ್ಕಷ್ಟೆ ಎಂಬಂತಿತ್ತು. ಆದರೆ ಈಗ ನನ್ನ ಎದುರು ಬಂದ ಹುಡುಗ ಅವನೆನಾ ಎನ್ನುವಷ್ಟು ಬದಲಾಗಿದ್ದ. ಚುಮು ಚುಮು ಮಳೆ ಬಿಳುತ್ತಿರುವುದರಿಂದ ಅಲ್ಲಿಯೆ ಪಕ್ಕದಲ್ಲಿದ್ದ ಟೀ ಅಂಗಡಿಯಲ್ಲಿ ಕುಳಿತೆವು. ಅವನು ಹೆಚ್ಚಿಗೆನು ಮಾತಾಡಲಿಲ್ಲ. ಮದುವೆ ಮಕ್ಕಳು ಹಾಗೆ ಹೀಗೆ ಕೇಳಿ ಹೋಗುತ್ತೆನೆಂದನು. ನಾನು ತಡೆಯಲಿಲ್ಲ. ಅವನು ಹೋದ ನಂತರ ಇನ್ನೊಂದು ಕಪ್ ಟೀ ಹಿರುತ್ತಾ ಅವನ ಜೊತೆ ಮಾತಾಡಿದ್ದನ್ನು ಮೆಲುಕು ಹಾಕಿದೆ. ಆತನ ಒಂದು ಮಾತು ಚೆನ್ನಾಗಿ ಜ್ಞಾಪಕಕ್ಕೆ ಉಳಿದಿತ್ತು.ಅದನ್ನೇ ಆಲೋಚಿಸಿದೆ. ಹೌದು ಮದುವೆ ಮಕ್ಕಳು ಸಂಸಾರದ ಜಂಜಡಗಳಲ್ಲಿ ಮುಳುಗಿದ್ದ ಆತನಿಗೆ ಈಗ ಜ್ಞಾನೊದಯವಾಗಿತ್ತು.
ಬಹುತೇಕ ಎಲ್ಲರೂ ತಮ್ಮ ಬದುಕಿನ ಮಾಡುವ ಮೊದಲ ತಪ್ಪು ಅದು. ಜೀವನದ ಬಗೆಗೆ ಅಪಾರ ನೀರಿಕ್ಷೆಗಳನಿಟ್ಟುಕೊಂಡು ಪಡಿಬಾರದ ಪಡಿಪಾಟಲು ಅನುಭವಿಸುವ ಮೂಲಕ ತಮ್ಮ ಮೇಲೆ ತಾವೇ ಭ್ರಮನಿರಸಗೊಳ್ಳುತ್ತಾರೆ. ಇದು ಕಾರಣ ಅವರು ಬದುಕಿನಲ್ಲಿನ ಕೆಲವೊಂದು ಶಾಶ್ವತ ಸತ್ಯಗಳನ್ನು ಅರಿಯುವುದರಲ್ಲಿ ಎಡವಿರುವುದು. ನಿಜವಾಗಿ ೧೮ ನೆ ವರುಷದಲ್ಲಿನ ಆಲೋಚನೆಗಳು ಮುಂದಿನ ಹತ್ತು ವರ್ಷಗಳಲ್ಲಿ ಬದಲಾಗಲೆಬೇಕು. ಅಂದರೆ ಒಬ್ಬ ವ್ಯಕ್ತಿ ಹತ್ತು ವರ್ಷಗಳ ಅಂತರದಲ್ಲಿ ನಿಜಜೀವನದ ಆರಾಧಕನಾಗುತ್ತಾನೆ. ಅಕಸ್ಮಾತ್ತಾಗಿ ಆ ವ್ಯಕ್ತಿ ಬದಲಾವಣೆಗೆ ಒಳಪಡದೆ ಇದ್ದರೆ, ಮೇಲೆ ತಿಳಿಸಿದ ಸ್ನೇಹಿತನಂತೆಯೆ ಸುಂದರ ಬದುಕಿನ ಕಲ್ಪನೆಯಲ್ಲಿಯೆ ಮುಳುಗಿ, ನಿಜಬದುಕಿನ ಉತ್ತರಾಧಿಕಾರಿಯಾಗದೆ ಭ್ರಮನಿರಸಗೊಳ್ಳುತ್ತಾನೆ.
ಹಾಗಾದರೆ ಆ ಸತ್ಯಗಳಾದರೊ ಯಾವವು?? ಯಾವ ಕಾರಣಕ್ಕೆ ವ್ಯಕ್ತಿಗಳು ತಮ್ಮ ಜೀವನದಲ್ಲಿ ವಿಫಲಗೊಳ್ಳುತ್ತಾರೆ?? ಎಂಬುವುಗಳೆನು ಮಿಲಿಯನ್ ಡಾಲರ್ ಪ್ರಶ್ನೆ ಅಲ್ಲ. ಬದಲಿಗೆ ತಮ್ಮದೆ ಬದುಕಿನ ಕಠಿಣ ಪರಿಸ್ಥಿತಿಯಲ್ಲಿಯೂ ಸಹ ಅರಿವು ಹೊಂದದೆ ಇರುವುದೆ ಆಗಿದೆ. ಬೇಗ ಅರಿವಾದರೆ ಬದುಕಿಗೆ ಬಲು ಒಳ್ಳೆಯದು. ಇಲ್ಲವಾದರೆ ಬದುಕು ಕಠಿಣ ಅಷ್ಟೇ ಅಲ್ಲದೆ ಬದಲಿಗೆ ಕೊನೆಯವರೆಗೂ ಬರಿ ದುಸ್ವಪ್ನವಾಗಿ ಕಾಡುವುದರಲ್ಲಿ ಯಾವ ಅನುಮಾನಕೊಡಿರುವುದಿ
ಆ ತಡವಾಗಿ _ಅರ್ಥವಾಗುವ ಪೂರ್ಣ ಸತ್ಯಗಳು_
೧.ಇಲ್ಲಿ ಯಾವುದು ಸಹ ಶಾಶ್ವತವಿಲ್ಲ
ಇದು ತಡವಾಗಿ ಅರ್ಥವಾಗುವ ಮೊದಲ ಸತ್ಯ. ಹೌದು ಭಕ್ತಿ ಪುರುಷರ ವಾಣಿಯಂತೆ, _ಇಲ್ಲಿರುವುದು ಸುಮ್ಮನೆ ಅಲ್ಲಿರುವುದು ನಮ್ಮನೆ_. ನಾವುಗಳು ಇಲ್ಲಿ ಬಂದಿರುವುದು,ಇರುವುದು ಪೂರ್ವ ನಿರ್ಧಾರಿತ ಎಂದು ಆಧ್ಯಾತ್ಮ ಹೇಳಿದರೆ, ಅದು ಆಕಸ್ಮಿಕ ಎಂದು ಚಾರ್ವಾಕ ಸಿದ್ದಾಂತ ಹೇಳುತ್ತದೆ. ಮತ್ತೊಂದು ಸಿದ್ಧಾಂತದ ಪ್ರಕಾರ ಇನ್ನೆನೊ ಆಗಿರಬಹುದು. ಈ ಸಿದ್ಧಾಂತಗಳನ್ನು ಪಕ್ಕಕ್ಕೆ ಇಟ್ಟು ನೋಡಿದಾಗ ಬದುಕು ಕ್ಷಣಿಕ. ನೀವು ಚಾರ್ವಾಕ ಆಗಿರಿ, ಇಲ್ಲ ಧಾರ್ಮಿಕವಾಗಿರಿ ಬಾಳೊದು ನಿಮ್ಮ ಆರೋಗ್ಯದ ಮೇಲೆಯೆ. ಆಧ್ಯಾತ್ಮಿಕ ಅಗಿದ್ದರೆ ನಿರುಮ್ಮಳ ಆಗಿ ನಿರ್ವಾಣ ಹೊಂದಬಹುದು ಅಷ್ಟೇ. ಆದರೆ ಶಾಶ್ವತವಾಗಿ ಇಲ್ಲಿಯೆ ಇರಲು ಸಾದ್ಯವೆ?? ಕೋಟೆಗಳನ್ನು ಕಟ್ಟಿ ಇಡೀ ಭೂಮಂಡಲನ್ನಾಳಿದವರು ಸಹ ಸುಮ್ಮನೆ ಮಲಗಿದ್ದಾರೆ ಗೋರಿಯೊಳಗೆ. ಬದುಕು ಕ್ಷಣಿಕ ಎಂದು ತಿಳಿದಿರುವ ವ್ಯಕ್ತಿ ಬಾಳಲು ಇಚ್ಛಿಸುತ್ತಾನೆ ಹೊರತು ಇನ್ನೊಬ್ಬರನ್ನು ತುಚ್ಚಿಸುವುದಿಲ್ಲ.
೨.ಹಣ ಮುಖ್ಯ. ಆದರೆ ಹಣವೆ ಎಲ್ಲವೂ ಅಲ್ಲ.
ಸುಂದರವಾಗಿ ಬದುಕಲು ಹಣ ಮುಖ್ಯ. ಆದರೆ ಹಣವೆ ಬದುಕಲ್ಲ. ಒಂದೊಮ್ಮೆ ಉತ್ತಮವಾಗಿ ಬದುಕಲು ಸಾಕಷ್ಟು ಪ್ರಮಾಣದಲ್ಲಿ ಹಣ ನಮ್ಮಲ್ಲಿದೆಯಾದರೆ ನಾವು ಬೇರೆ ವಿಷಯದ ಕಡೆಗೆ ಗಮನ ನೀಡುತ್ತೆವೆ. ಆದರೆ ಬಹುತೇಕ ಜನರು ಹಣದ ಸಂಪಾದನೆಯಲ್ಲಿ ಕುಟುಂಬ, ಪ್ರೀತಿಸುವ ಹೆಂಡತಿ, ಅಕ್ಕರೆಯ ಮಕ್ಕಳು ಎಲ್ಲವನ್ನೂ ಮರೆತು ಬಿಟ್ಟು ಮುಂದಿನ ಹತ್ತು ತಲೆಮಾರುಗಳಿಗೆ ಸಾಕಾಗುವಷ್ಟು ಹಣವನ್ನು ಸಂಪಾದಿಸುತ್ತಾರೆ. ಆದರೆ ಅದಕ್ಕೂ ಹೆಚ್ಚಿನ ಮೌಲ್ಯವನ್ನು ಹೊಂದಿರುವ, ಬೆಲೆ ಕಟ್ಟಲಾಗದಿರುವ ಇನ್ನಿತರ ಸಂತೋಷವನ್ನು ಮರೆಯುತ್ತಾರೆ. ಸಮಯ ತೀರಿದ ನಂತರ ಹಿಂತಿರುಗಿ ನೋಡಿದಾಗ ಕಂಡುಬರುವ ದೃಶ್ಯ ಬರಿದಾಗಿರುತ್ತದೆ. ಹಣದಿಂದ ವಸ್ತುಗಳನ್ನು ಕೊಳ್ಳಬಹುದು.ಆದರೆ ಸಂತೋಷವನ್ನು ಕೊಳ್ಳಲಾಗುವುದೆ? ಇಲ್ಲ. ಅರ್ಥವಾಗದೆ ಇರುವವರು ಹಣವೆ ಸಂತೋಷ ಎಂದುಕೊಳ್ಳುವುದು ಬರಿ ಮೂರ್ಖತನಗುತ್ತದೆ.
೩.ಕುಟುಂಬ ಮೊದಲು, ಸ್ನೇಹಿತ-ಸಮಾಜ ನಂತರ
ನಮ್ಮೆಲ್ಲರ ಬದುಕಿನಲಿ ಒಬ್ಬ ಸಮಾಜ ಸೇವಕ ಇರುತ್ತಾನೆ. ಅದು ನಾವೆ ಆಗಿರುತ್ತವೆ. ಸಾಮಾನ್ಯವಾಗಿ ಸಂಘಟನೆಗಳಲ್ಲಿ ಮತ್ತಿತರ ಸಾಮಾಜಿಕ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಬಹುಪಾಲು ಯುವಕರೆ ಆಗಿರುತ್ತಾರೆ. ಕಾರಣ ಅವರಿಗೆ ಸಮಾಜ ಮತ್ತು ಹೊರಗಡೆಯ ಸಮಯ ಅಪ್ಯಾಯಮಾನವೆನಿಸುತ್ತದೆ. ಅವರಿಗೆ ತಮ್ಮ ಸ್ವಯಂ ಅಸ್ತಿತ್ವದ ಗುರುತಿಸುವಿಕೆಯ ಬಗ್ಗೆ ಮೋಹವಿರುತ್ತದೆ. ಅವರಗೆ ತಮ್ಮ ಬಗ್ಗೆಯೆ ಸದಾಕಾಲವೂ ಲಬ್ಯವಿರುವ ಕುಟುಂಬದ ಬಗ್ಗೆ ನಿಷ್ಕಾಳಜಿ ತೊರುತ್ತಾರೆ. ಆದರೆ ದಿನಗಳೆದಂತೆ ಗೊತ್ತಾಗುವುದು, ಹೊರಗಡೆಯ ಸ್ನೇಹಿತರಿಗಿಂತ ಯಾವಾಗಲೂ ನಮ್ಮ ಜೊತೆ ಇದ್ದು ನಮ್ಮ ಉನ್ನತಿಗಾಗಿ ಶ್ರಮಿಸುವ ಕುಟುಂಬವೆ ಹೆಚ್ಚು ಎಂದು. ಆದರೆ ಅಲ್ಲಿಯವರೆಗೂ ಸಮಯ ನಿಲ್ಲದು ಅಲ್ಲವೆ.
ಹಾಗಾದರೆ ಸಿನಿಮಾಗಳಲ್ಲಿ ಎಕೆ ಸ್ನೇಹದ ಬಗ್ಗೆ ಅಷ್ಟು ಉದಾರವಾಗಿ ತೋರಿಸುತ್ತಾರೆ ಎಂದು ಪ್ರಶ್ನೆ ಮೂಡಬಹುದು.. ಅದು ಹಣವನ್ನು ಗಳಿಸುವ ಒಂದು ಟ್ರಿಕ್ ಆಗಿರುತ್ತದೆ ವಿನಃ ಸಿನಿಮಾದಲ್ಲಿ ತೋರಿಸುವಷ್ಟು ಹೆಚ್ಚುಗಾರಿಕೆ ನಿಜ ಜೀವನದಲ್ಲಿ ಹೊಂದಿರುವುದಿಲ್ಲ.
೪. ಜೀವನ ಅಂದುಕೊಂಡಂತೆ ನಡೆಯುವುದಿಲ್ಲ.
ಹೌದು. ನಾವು ಅಂದುಕೊಳ್ಳುವ ಜೀವನ ಯಾವತ್ತೂ ಸಹ ಕಷ್ಟ ಕೊಟಲೆ,ಆಸ್ಪತ್ರೆ, ಜೈಲು, ಅಪಘಾತ ಮುಂತಾದವುಗಳಿಂದ ಕೊಡಿರುವುದಿಲ್ಲ. ಅಲ್ಲಿ ಬರಿ ನವಿರಾದ,ಸೊಗಾಸಾದ ಭಾವನಾ ಲೋಕದ ಕನಸುಗಳಿಂದ ಕೂಡಿರುತ್ತದೆ.
ಆದರೆ ನಿಜ ಬದುಕು???
ನೋಡು ನೋಡುತ್ತಿದ್ದಂತೆ ಯಾರೊ ಒಬ್ಬರಿಗೆ ಅಪಘಾತವುಂಟಾಗುತ್ತದೆ. ಯಾರಿಗೊ ಆಸ್ಪತ್ರೆ ಬಿಲ್ಲು ಕಟ್ಟುವುದಕ್ಕೂ ಹಣವಿಲ್ಲದೆ ಪರದಾಡಬೇಕಾಗುತ್ತದೆ. ಪ್ರೀತಿಸಿದ ಹುಡುಗಿ ಬೇರೊಬ್ಬ ಹುಡುಗನೊಂದಿಗೆ ಡ್ಯುಯೆಟ್ ಹಾಡುತ್ತಿರಬಹುದು.
ಹಾಗಂತ ಬರಿ ನೆತ್ಯಾತ್ಮಕವೆ ಅಂತಿಲ್ಲ. ಬಲು ದಿನಗಳಿಂದ ಇಷ್ಟ ಪಟ್ಟ ಕೆಲಸ ನಮಗೆ ಸಿಗಬಹುದು. ಅಥವಾ ಮತ್ತೆನೊ ಕಷ್ಟದ ಕೆಲಸ ಸರಳವಾಗಿ ಆಗಬಹುದು.ಆದರೆ ಎಲ್ಲವೂ ಅಂದುಕೊಂಡಿದ್ದೆ ಆಗುತ್ತದೆ ಎಂದರೆ ಅದು ಸಾಧ್ಯವಿಲ್ಲದ ಮಾತೆ ಸರಿ. ಎಕೆಂದರೆ ಬದುಕು ಅನಿರಿಕ್ಷಿತ ಮತ್ತು ಕೆಲವೊಮ್ಮೆ ಅನಪೇಕ್ಷಿತಗಳ ನಿಲ್ದಾಣಗಳನ್ನು ಹಾದು ಹೋಗುವ ಪ್ರವಾಸ. ನಮಗೆ ಇಷ್ಟವಿರಲಿ, ಇಷ್ಟವಾಗದೆ ಇರಲಿ ಅವುಗಳನು ಎದುರಿಸಿ ಹೋಗಲೆಬೇಕಾಗುತ್ತದೆ
೫.ಈ ಕ್ಷಣದ ತ್ಯಾಗ ಮುಂದಿನ ಹಿರಿದಾದ ಖುಷಿಗೆ ಕಾರಣ.
ಬಹಳಷ್ಟು ಜನ ಈ ಸತ್ಯವನ್ನು ಅರ್ಥ ಮಾಡಿಕೊಳ್ಳಲು ಸತತವಾಗಿ ಅವರಿಗೆ ಅರಿವಿಲ್ಲದಂತೆ ಯತ್ನಿಸುತ್ತಾರೆ. ಒಂದು ಉತ್ತಮ ಮಾತಿನಂತೆ, ಇಂದಿನ ತಾತ್ಕಾಲಿಕ ಖುಷಿಗೆ ಮುಂದಿನ ಶಾಶ್ವತ ಸಂತೋಷವನ್ನು ಕಳೆದುಕೊಳ್ಳುವುದು ಮೂರ್ಖತನವಾದಿತು. ಹೌದು ಇಂದು ನಾವು ಮಾಡುವ ಪುಟ್ಟ ಪುಟ್ಟ ತ್ಯಾಗಗಳು ಮತ್ತು ನೀರಿಕ್ಷೆಗಳು ಬದುಕಿನ ಮುಂದಿನ ಪುಟಗಳಲ್ಲಿ ಉತ್ತಮ ಸಂತೋಷ ನೀಡುತ್ತವೆ. ವಿದ್ಯಾರ್ಥಿ ದೆಸೆಯಲ್ಲಿ ಒಬ್ಬ ಹುಡುಗ ಉತ್ತಮವಾಗಿ ಅಧ್ಯಯನ ಮಾಡುತ್ತಿದ್ದಾನೆ ಎಂದರೆ, ಆತ ಆ ಕ್ಷಣದ ಖುಷಿಯನ್ನು ಮುಂದಿನ ನಲವತ್ತು ವರುಷಗಳ ಸಂತೋಷದ ಬದುಕಿಗೆ ತ್ಯಾಗ ಮಾಡುತ್ತಿದ್ದಾನೆ ಎಂದೆ ಅರ್ಥ. ಅಂದರೆ ಆ ಹುಡುಗನ ಅರ್ಧ ಬದುಕು ಅಲ್ಲಿಯೇ ಕಟ್ಟಲ್ಪಟ್ಟಿದೆ ಅಥವಾ ಆತನೆ ತನ್ನ ಸ್ವಯಂ ಸಾಮರ್ಥ್ಯದಿಂದ ಕಟ್ಟಿಕೊಳ್ಳಲು ಸಮರ್ಥನಾಗಿದ್ದಾನೆ ಎಂಬುದಾಗಿದೆ.
ಆದರೆ ವಿಚಿತ್ರವೆಂದರೆ ಬಹಳಷ್ಟು ಜನಕ್ಕೆ ಇದು ತೀರ ತಡವಾಗಿ ಅರ್ಥವಾಗುತ್ತದೆ.ಆದರೆ ಅಲ್ಲಿಯವರೆಗೂ ಸಮಯ ಕಾಯುವುದು ಸಾಧ್ಯವೆ?? ಇಲ್ಲ. ನಾವು ಎಡವಿ ಬಿಳುವುದು ಇಲ್ಲಿಯೆ.
೬.ಭಕ್ತಿ ಮತ್ತು ಪ್ರೇಮ ಎಂಬ ಸ್ವಾರ್ಥ ವ್ಯಾಪಾರದ ವಸ್ತುಗಳು
ತಿಳಿದೊ ತಿಳಿಯದೆಯೊ, ನಾವೆಲ್ಲರೂ ಅಂತರಂಗದಲಿ ಚಾರ್ವಾಕ ಸಿದ್ದಾಂತಿಗಳೆ. ಉದಾಹರಣೆಗೆ ಸೂರ್ಯ ಒಂದು ನಕ್ಷತ್ರ ಎಂದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೂ ನಾವದನ್ನು ದೇವರೆಂದು ಕೈಮುಗಿಯುತ್ತೆವೆ.
ಮತ್ಯಾವುದೊ ಒಂದು ಅನ್ಯ ಜಾತಿಯ ಜೀವಿಯನ್ನು ಅಥವಾ ಪ್ರಾಣಿಯನ್ನು ದೇವರೆಂದು ಪೂಜಿಸುತ್ತೆವೆ. ಆ ದೇವರುಗಳನ್ನು ನಾವು ನಮ್ಮ ಲಾಭಕ್ಕಾಗಿ ದಾಳವಾದ ರೂಪದಲ್ಲಿ ಬಳಸಿಕೊಳ್ಳುತ್ತವೆ .ಯಾವುದೊ ವಿಧದಲ್ಲಿ ನಾವು ಮಾಡಿದ ಕರ್ಮವನನ್ನು ಭಕ್ತಿಯ ಹೆಸರಿನಲ್ಲಿ ಸಕ್ರಮಗೊಳಿಸಿಕೊಳ್ಳತ್ತೆವೆ. (ಇಲ್ಲೊಂದು ವಿಷಯ ಗಮನಿಸತಕ್ಕದ್ದು. ನೈಜ ಅರಿವಿನ ಜ್ಞಾನಕ್ಕೆ ಒಳಗಾದವರು ದೇವರನ್ನು ನಂಬುವುದಕ್ಕಿಂತಲೂ ತಮ್ಮ ಒಳಗಿನ ಅರಿವಿನ ಕೂಗಿಗೆ ಓಗೊಡುತ್ತಾರೆ.)
ಭಗವಾನ್ ಬುದ್ದ ಹೇಳಿದಂತೆ ಬೇಡಿದ ತಕ್ಷಣ ವರ ನೀಡುವ ಶಕ್ತಿ ಈ ಜಗತ್ತಿನಲ್ಲಿ ಇಲ್ಲವೆ ಇಲ್ಲ ಎಂಬುದನ್ನು ಅರಿತೂ ಸಹ ಮತ್ತೆ ಮೂಢರಾಗುತ್ತೆವೆ, ಎಲ್ಲಿಯವರೆಗೆ?? ಬದುಕಿನಲ್ಲಿ ಸಹಿಸಲಾಗದ ಉಳಿಪೆಟ್ಟು ಬೀಳುವವರೆಗೆ.
ಇದರಂತೆ ಇನ್ನೊಂದು ಅಂದರೆ, ಪ್ರೇಮ!!! ಕಾವ್ಯಗಳು, ಸಿನಿಮಾಗಳು, ಮತ್ತಿತರ ರಮ್ಯಗೀತೆಗಳಲ್ಲಿ ಕೇಳಿಬರುವಷ್ಟು ಮಧುರವಾಗಿರುವುದಿಲ್ಲ ಪ್ರೇಮ. ಸ್ವಾರ್ಥ ಮತ್ತು ಮೋಹದ ಎರಡು ಮಗ್ಗಲುಗಳಿಂದ ಕೂಡಿರುವ ಈ ಪ್ರೇಮದ ನಿಜಬಣ್ಣ ಅರಿಯುವವರೆಗೆ ಅರ್ಧಾಯುಷ್ಯ ಸಂದಿರುತ್ತದೆ.
ಹೈಸ್ಕೂಲಿನಲ್ಲಿ ದೇಹದಲ್ಲಿ ಬದಲಾವಣೆ ಆಗುವ ಸೇಳೆತವೆ ಪ್ರೇಮ ಎಂದು ತಿಳಿದವರಾರ ಪ್ರೇಮವು ಪೂರ್ಣವಾಗಿಲ್ಲ. ನಂತರದ ಕಾಲೇಜು ದಿನಗಳಲ್ಲಿ ಮೋಜು ಮಸ್ತಿಯ ಭಾಗವಾಗಿ, ನಂತರದ ದಿನಗಳಲ್ಲಿ ಲೆಕ್ಕಾಚಾರವಾಗಿ ಮಾರ್ಪಡುವ ಪ್ರೇಮದ ತರಂಗ ಅರ್ಥ ಮಾಡಿಕೊಳ್ಳವ ಸಮಯದಲ್ಲಿ ಬದುಕಿನ ಬಾನಿನಲ್ಲಿ ಬಾಳ ಸೂರ್ಯ ಮುಳುಗುವ ಸಮಯವಾಗಿರುತ್ತದೆ.
ಮತ್ಯಾವುದೊ ರೀತಿಯಲ್ಲಿ
೭.ಆರೊಗ್ಯವೆಂಬ ಅಪರೂಪದ ಭಾಗ್ಯ
ಈ ಲೇಖನದ ಆರಂಭದಲ್ಲಿ ಒರ್ವ ಸ್ನೇಹಿತನ ಬಗ್ಗೆ ತಿಳಿಸಿದ್ದೆ. ಮಾತಾಡುವಾಗಲೆಲ್ಲ ಆತ ಕೆಮ್ಮುತ್ತಿದ್ದ. ಕಾರಣ ಇಷ್ಟೇ ಕಾಲೇಜು ದಿನಗಳಲ್ಲಿ ಅವನು ಸಿಗರೆಟ್ ಮತ್ತಿತರ ಚಟಕ್ಕೆ ದಾಸನಾಗಿದ್ದ. ಅದರ ಪ್ರಭಾವ ಈಗ ತೊರಿಸುತ್ತಿತ್ತು.
ಹೌದು ಈ ಅನಾರೋಗ್ಯಕರ ವಾತಾವರಣದ ದಿನಮಾನಗಳಲ್ಲಿ ಉತ್ತಮ ಆರೋಗ್ಯವೆಂಬುದು ಮರಿಚಿಕೆಯಾಗಿ ಬಿಟ್ಟಿದೆ. ಆದರೆ ಬಹುತೆಕರಿಗೆ ಆರೋಗ್ಯ ಸಂಭಂಧಿತ ವಿಚಾರಗಳು ರುಚಿಸುವುದಿಲ್ಲ. ಅದರ ಬದಲಿಗೆ ಬೇರೆ ಅಹಿತಕರ ಅಭ್ಯಸಗಳನ್ನೆ ಮಾಡುವುವುದರಲ್ಲಿ ಅವರಿಗೆ ಬಲು ತೃಪ್ತಿಯನ್ನು ನಿಡುತ್ತದೆ.
ಯಾವಾಗ ಅನಾರೋಗ್ಯಕ್ಕೆ ಈಡಾಗಿ ತಮಗೆ ಮತ್ತು ತಮ್ಮ ಸಂಪೂರ್ಣ ಕುಟುಂಬಕ್ಕೆ ತೊಂದರೆಗಳು ಬರುತ್ತವೆಯೊ ಆ ಸಮಯಕ್ಕೆ ಎಚ್ಚರಗೊಳ್ಳುತ್ತಾರೆ.ಆರಂಭದಲ್ಲೆ ವೈದ್ಯರು ನೀಡಿದ ಸಲಹೆಯಂತೆ ನಡೆದರೆ ಅದೆಷ್ಟೋ ಖುಷಿಗಳು ಅವರ ಮಡಿಲಲ್ಲಿ ಇರುತ್ತಿದ್ಸವು ಆದರೆ ಅವರು ಅದನ್ನು ನಿರ್ಲಕ್ಷಿಸಿದರ ಪರಿಣಾಮ ಅಂತಹ ಸಮಸ್ಯೆಗಳನ್ನು ಅನುಭವಿಸುತ್ತರೆ. ಆರೋಗ್ಯದ ಮೌಲಿಕತೆ ಅರ್ಥವಾಗುವ ಹೊತ್ತಿಗೆ ಕಾಲ ಮಿಂಚಿರುತ್ತದೆ. ಹೌದಲ್ಲವೆ ಕಾಲನ ಕುದುರೆ ಯಾರಿಗೂ ನಿಲ್ಲದಲ್ಲವೆ???
ಈ ಏಳೂ ಪೂರ್ಣ ಸತ್ಯಗಳನ್ನು ಹೊರತು ಪಡಿಸಿ ಮತ್ತೊಂದು ಬಲು ಮುಖ್ಯವಾದ ಸತ್ಯವಿದೆ. ಅದು ಯಾವುದೆಂದರೆ,
ಈ ಬದುಕು ಒಬ್ಬರಿಗೆ ಒಮ್ಮೆ ಮಾತ್ರ ಸಿಗುವುದು
ಹೌದು, ದಾಸರ ವಾಣಿಯಂತೆ, ಈ ಬದುಕು ನಿಸರ್ಗ ನಾವು ಕೆಳದೆ ನೀಡಿರುವ ಬಲು ಅಪರೂಪದ ಕೊಡುಗೆ. ಅದನ್ನು ಅತ್ಯುತ್ತಮವಾಗಿ ಸಾಧ್ಯವಾಗದಿದ್ದರೆ ಉತ್ತಮ ರೀತಿಯಲ್ಲಿ ಆದರೂ ಬಳಸಿಕೊಂಡು ಬಾಳ ಬೇಕಾಗಿರುವುದು ಪ್ರತಿಯೊಬ್ಬ ಮನುಜನ ಕರ್ತವ್ಯ. ಆದರೆ ನಾವುಗಳು ಬದುಕುವ ರೀತಿ ನೋಡಿದರೆ ನಮ್ಮ ನಮ್ಮಗೆ ಒಮ್ಮೊಮ್ಮೆ ಹತಾಶೆ ಎನಿಸುತ್ತದೆ. ಎಲ್ಲೆಲ್ಲಿಯೂ ತಿರುಗಾಡುತ್ತೆವೆ, ಆದರೆ ಪಕ್ಕದಲ್ಲಿರುವ ಊರಿನಲ್ಲಿ ಇರುವ ಪ್ರಾಚೀನ ದೇವಾಲಯಕ್ಕೆ ಹೋಗಿ ಅದರ ಸೌಂದರ್ಯ ಕಣ್ತುಂಬಿಕೊಳ್ಳಲಾರೆವು.
ಪಕ್ಕದ ಮನೆಯ ಹುಡುಗಿಯನ್ನು ಹೋಗಳುತ್ತೆವೆ, ಆದರೆ ನಮ್ಮದೆ ರಕ್ತವನ್ನು ಹೊಂದಿರುವ ಮಗಳ ಸಾಮರ್ಥ್ಯವನ್ನು ಗುರುತಿಸದೆ ಅವಳ ಮನೊವಿಕಲ್ಪಕ್ಕೆ ಕಾರಣವಾಗುತ್ತವೆ.ಅತ್ಯಂತ ಕ್ಷುಲ್ಲಕ ಕಾರಣಕ್ಕೆ ಜೀವನವನ್ನು ಅಂತ್ಯಗೊಳಿಸಿಕೊಳ್ಳವ ಮಹಾನುಭಾವರಿಗೆನು ಕೊರತೆಯಿಲ್ಲ ಈ ಜಗತ್ತಿನಲ್ಲಿ.ಆದರೆ ಮುಂದೊಂದು ದಿನ ಹಿಂತಿರುಗಿ ನಾವು ನಡೆದು ಬಂದ ದಾರಿ ನೋಡಿದಾಗ ನಮ್ಮ ಬಗ್ಗೆ ನಮಗೆ ಹೆಮ್ಮೆ ಅನಿಸದೆ ಖೇದವುಂಟಾಗುತ್ತದೆ. ಆದರೆ ಅಲ್ಲಿಗೆ ಪೂರ್ಣ ಚಂದಿರ ಪರ್ಮೆನೆಂಟಾಗಿ ರಜಾ ಹಾಕಿರುತ್ತಾನೆ.
ಬದುಕಿನ ಸಂತೆಯಲ್ಲಾ ಗೊಂದಲಮಯವಾಗಿ ಮುಗಿದು ಹೋಗಿ, ಖಾಲಿ ಕೈಯಲ್ಲಿ ಹಿಂತಿರುಗುತ್ತೆವೆ..
ಹೀಗಾಗಿ ಸಾಧ್ಯವಾದಷ್ಟು ಈ ಬದುಕನ್ನು ಬಾಳಲು ಯತ್ತನಿಸಬೇಕೆ ವಿನಃ ಸುಮ್ಮನೆ ದಿನಗಳನ್ನು ಎಣೆಸುತ್ತಾ ಕೊನೆಗಾಣಿಸುವುದಲ್ಲ. ಈ ನಡುವೆ ಕನ್ನಡ ಕವಿಯೋಬ್ಬರ ವಾಣಿಯೋಂದು ನೆನಪಿಗೆ ಬರುತ್ತಿದೆ. *ಈ ಬಾಳು ತುಂಬಿರುವ ತನಕ ತುಂಬಿ ಕುಡಿ ಸಂತಸದ ಹೊನಲನು*
ಹೌದಲ್ಲವೆ,
ಯಾರಿಗೆ ಗೊತ್ತು ನಾಳೆಯೆ ನಮ್ಮ ಇಹದಂಚೆಂದು??
ಹೀಗಾಗಿ ಈ ಬದುಕನ್ನು ಓದುಗರೆಲ್ಲರೂ ಪೂರ್ಣವಾಗಿ ಬಾಳಲಿ ಎಂದು ಹಾರೈಸುತ್ತಾ....
ಸಮಭಾವ- ಸಮಜೀವದ ಸಮಾಜಕ್ಕಾಗಿ ನಮ್ಮೋಳಗೋಂದು ಅಂತರಂಗದ ಚಳುವಳಿ
🖋ನಾಗೇಶ ಮುದ್ದಾಳೆ💐
ಈ ಕ್ಷಣದ ತ್ಯಾಗ ಮುಂದಿನ ಹಿರಿದಾದ ಖುಷಿಗೆ ಕಾರಣ.
ಪ್ರತ್ಯುತ್ತರಅಳಿಸಿಈ ಸಾಲು ಚನ್ನಾಗಿದೆ.👍💐
ಧನ್ಯವಾದಗಳು..🙏
ಅಳಿಸಿSuper
ಪ್ರತ್ಯುತ್ತರಅಳಿಸಿ😊👍
ಅಳಿಸಿstruck ಆಗಿರುವ computer ಗೆ Refresh ಮಾಡಿದ ಅನುಭವ.......ತುಂಬ ಚೆನ್ನಾಗಿದೆ
ಪ್ರತ್ಯುತ್ತರಅಳಿಸಿನಿಮ್ಮ ಕಂಪ್ಯೂಟರ್ ರಿಫ್ರೇಶ್ ಆಗಿದ್ದಕ್ಕೆ ನನಗೆ ಖುಷಿಯಿದೆ...😊
ಅಳಿಸಿಕುಟುಂಬದ ಮಹತ್ವ,, ಜೀವನದ ಅಶಾಶ್ವತತೆ,, ಕ್ಷಣಿಕ ದುಖ,, ಹಣ& ಆರೋಗ್ಯದ ಬೆಲೆ.. 😇
ಪ್ರತ್ಯುತ್ತರಅಳಿಸಿಒಂದೇ ಲೇಖನಿಯಲ್ಲಿ ಪ್ರಕಟಿಸಿದ ನಿಮ್ಮಗೆ ಅಭಿನಂದನೆಗಳು.. 💐 💐..
.....
.... ನಿಮ್ಮ ಅಭಿಮಾನಿ..
VN..😇
ತಮ್ಮ ಅಭಿಮಾನಕ್ಕೆ ನಾನು ಋಣಿ..😊
ಅಳಿಸಿThanks sir nice information
ಪ್ರತ್ಯುತ್ತರಅಳಿಸಿಧನ್ಯವಾದಗಳು ಸರ್..😊🙏
ಅಳಿಸಿVery nice nagesh
ಪ್ರತ್ಯುತ್ತರಅಳಿಸಿತಾವು ಬಿಡುವು ಮಾಡಿಕೊಂಡು ಲೇಖನ ಓದಿದಕ್ಕೆ ಖುಷಿಯಿದೆ ಗುರುಗಳೆ....🙏
ಅಳಿಸಿ