ಪ್ರತಿಭಾವಂತರ ಪ್ರೇಮ ವೈಫಲ್ಯ

ಪ್ರತಿಭಾವಂತರ ಪ್ರೇಮ ವೈಫಲ್ಯ

                   [............................]

ಜಮೀನಿನಲ್ಲಿ ಕಾರಂಜಾ‌ ನದಿ  ನೀರು ಹಾಯಿಸುತ್ತಿದ್ದೆ. ಬರಗಾಲದ ನಮ್ಮ ಜಿಲ್ಲೆಗೆ ಅದೊಂದು ಮಾತ್ರ ವರದಾನವಾಗಿದೆ. ಅಷ್ಟರಲ್ಲಿ ಫೋನ್ ರಿಂಗಣಿಸಿತು. ಹಸಿಕೆಸರಾದ ಕೈಗಳನ್ನು ಒರೆಸಿಕೊಂಡು ಬಂದ ಕರೆ ಸ್ವೀಕರಿಸಬೇಕೆಂದು ಅನ್ನುವಷ್ಟರಲ್ಲಿ ಕರೆ ನಿಂತಿತು. ಯಾವುದೂ ಹೊಸ ಸಂಖ್ಯೆ ಇದ್ದಿದರಿಂದ ತಿರುಗಿ ಕರೆ ಮಾಡಲಿಲ್ಲ.
ಕೆಲ ನಿಮಿಷಗಳ ತರುವಾಯ ಮತ್ತದೆ ನಂಬರ್ ನಿಂದ ಫೋನ್ ಬಂದಿತು. ರಿಸೀವ್ ಮಾಡುತ್ತಿದ್ದಂತೆ ಆ ಕಡೆಯಿಂದ ಹಲೋ..... ಎನ್ನುವ ಗಂಡು ದನಿ.
ನಾನು ಯಾರೆಂದು ಕೇಳಿದೆ. ಅವರು ತಾನು ಯಾರೆಂದು ಹೇಳದೆ ಮಾತನಾಡಲು ಆರಂಭಿಸಿದರು. ಹೇಗಿದಿಯಾ, ಮನೆಕಡೆಯಲ್ಲಾ ಆರಾಮಾ... ಪಕ್ಕಾ ಉತ್ತರ ಕರ್ನಾಟಕ ಭಾಷೆಯಿದ್ದರು ಅದರಲ್ಲಿ ಇಂಗ್ಲಿಷ್ ಮತ್ತು ಬೆಂಗಳೂರಿನ ಪದಗಳು ಯಥೇಚ್ಛವಾಗಿ ಸೇರಿದ್ದವು. ಸ್ವಲ್ಪ ಸಮಯದಂತರದಲ್ಲಿ ತಿಳಿಯಿತು.ನನ್ನ ಜೂನಿಯರ್ ಹುಡುಗ ಕರೆ ಮಾಡಿ ಮಾತಾಡುತ್ತಿದ್ದನು

ನಾನು ಆರಾಮವಾಗಿ ಇದ್ದಿನಿ ನೀನು ಹೇಗಿದಿಯಾ ,ಮದುವೆ ಆಯ್ತಾ ಅಂತ ಕೇಳಿದೆ.
ಮದುವೆ ಬಗ್ಗೆ ಕೇಳಿದ ತಕ್ಷಣ ಅವನ ಧ್ವನಿಯಲ್ಲಿ ಸ್ಪಷ್ಟ ಬದಲಾವಣೆ ಆಯಿತು.
ಅಲ್ಲಿಯವರೆಗೂ ಅರಳು ಹುರಿದಂತೆ ಪಟ ಪಟನೆ ಮಾತನಾಡುತ್ತಿದ್ದ ಆತ ಈಗ ಸುಮ್ಮನೆ ವಿಚಿತ್ರ ಮೌನದಿಂದ ಹ್ಞೂಂ ಗುಡುತ್ತಿದ್ದನು. ಸ್ವಲ್ಪ ಒತ್ತಾಯ ಮಾಡಿ ಕೇಳಿದೆ. ಅಷ್ಟಕ್ಕೆ ಅವನು ತೀರಾ ನೊಂದುಕೊಂಡಿದ್ದಂತೆ ಕಂಡುಬಂದಿತು.
ಆಗಿದ್ದು ಇಷ್ಟು. ಅವನ ಹುಡುಗಿ ಬ್ರೇಕ್ಅಪ್ ಮಾಡಿಕೊಂಡಿದ್ದಳು. ಕಾರಣ ಕೇಳಿದರೆ ನೀನು ಸರಿಹೊಂದುವುದಿಲ್ಲ, ಎಲ್ಲದಕ್ಕೂ ನಿನ್ನಲ್ಲಿ ನಿಂದೆ ಒಂದು ಸಿದ್ದಾಂತ ಇರುತ್ತದೆ. ಜೀವನದ ಪ್ರವಾಹದ ಜೊತೆ ಎಲ್ಲರಂತೆ ಹರಿದು ಹೋಗಲು ನಿನಗೆ ಆಗುವುದಿಲ್ಲ ಅಂತೆಲ್ಲಾ ಹೇಳಿ ಹೋಗಿದ್ದಳಂತೆ.

ನನಗೆ ಆಶ್ಚರ್ಯವೆನು ಅನ್ನಿಸಲಿಲ್ಲ. ಬೆಳಿಗ್ಗೆ ಪ್ರೇಮ ಮೂಡಿ ಮಧ್ಯಾಹ್ನದ ಅವಧಿಗೆಲ್ಲಾ ಹಳಸಿ ಹೋಗುವ ಈ ಕಾಲದಲ್ಲಿ ನೈಜ ಪ್ರೇಮ ಅನ್ನುವುದೆ ಒಂದು ಹಾಸ್ಯ ಅಗಿಬಿಟ್ಟಿದೆ. ಆದರೆ ಇವನ ಕತೆ ಸ್ವಲ್ಪ ಭಿನ್ನವಾಗಿತ್ತು.
ಇದು ಅವನನ್ನು ಪ್ರೇಮದ ಉತ್ತುಂಗಕ್ಕೊಯ್ದು ಧಡಾರನೆ ‌ಕೆಳಗೆ ಬೀಳಿಸಿದಂತಹ ಪ್ರೇಮ ವೈಫಲ್ಯ.‌ ಹುಡುಗಿಯ ಜೊತೆಯಲ್ಲಿ ಮದುವೆಯ ಕನಸು ಕಟ್ಟಿಕೊಂಡದ್ದವನಿಗೆ ತನ್ನ ಪ್ರೇಮವು ಪೂರ್ಣವಾಗಿ ಮದುವೆಯಲ್ಲಿ ಮುಕ್ತಾಯ ಆಗದಿರುವ ಬಗ್ಗೆ ತುಂಬ ಖೇದವಿದ್ದಂತಿತ್ತು.

ಆದರೆ, ಆತನೆನು ಸಾಮಾನ್ಯದವನಿರಲಿಲ್ಲ. ಉನ್ನತಮಟ್ಟದ ಸಂಬಳ ತರುವ ಹುದ್ದೆಯಲ್ಲಿ ಇದ್ದನು ಕೆಲವೆ ದಿನಗಳ ಹಿಂದೆ ಅದೆ ಕಂಪನಿಯಲ್ಲಿ ಪ್ರಮೋಷನ್ ಕೂಡಾ ಆಗಿ ಯೂರೋಪ್ ಪ್ರವಾಸದ ಪ್ಯಾಕೆಜ್ ಕೂಡಾ ಪಡೆದುಕೊಂಡಿದ್ದನು.
ತನ್ನ ಕರಿಯರ್ ಅಲ್ಲಿ ಅಷ್ಟೆಲ್ಲಾ ಪ್ರಗತಿ ಸಾಧಿಸಿದರು ‌ಸಹ ವೈಯಕ್ತಿಕ ಬದುಕಿನಲ್ಲಿ ತೀರಾ ‌ಹಿನ್ನಡೆ ಅನುಭವಿಸುತ್ತಿದ್ದನು. ಅತ್ಯಂತ ಪ್ರತಿಭಾನ್ವಿತನಾಗಿದ್ದ ಆತ ಬಹುತೇಕ ಎಲ್ಲದರಲ್ಲೂ ಮುಂದೆ. ಆದರೆ ಪ್ರೇಮಬಂಧದ ವಿಷಯ ಬಂದಾಗ ಮಾತ್ರ ಆತ ಪದೆ-ಪದೆ ಸೋಲುತ್ತಿದ್ದ.

ತುಂಬಾ ಬೇಜಾರಿನಲ್ಲಿದ್ದ ಹುಡುಗ ನನಗೆ ಮಾತ್ರ ಇಂತಹ ಸಮಸ್ಯೆ ಬರುತ್ತದೆ  ಎಂದೆಲ್ಲಾ ಹೇಳಿಕೋಂಡು ಗೋಳಾಡಿದ.  ಮುಂದಿನ ನಾಲ್ಕಾರು ದಿನಗಳವರೆಗೆ ಅವಳನಿಗೆ ಫೋನಿನಲ್ಲಿಯೆ ಕೌನ್ಸಿಲಿಂಗ್ ಮಾಡಿದೆ. ಕೊನೆ-ಕೊನೆಯಲ್ಲಿ  ತಿಳಿದದ್ದು ಅವನ ಬಹುತೇಕ ಸಮಸ್ಯೆಗಳಿಗೆ ಅವನೆ ಕಾರಣ ಎಂದು.

ಅವನು ಅಷ್ಟೇ ಅಲ್ಲ.ಅವಳಂತೆ/ಅವನಂತೆ ಬಹುತೇಕ ಪ್ರತಿಭಾವಂತರು ಎದುರಿಸುವ ಈ ಪ್ರೇಮ ಸಂಬಂದಗಳ ಮೂಲ ಕಾರಣ ಅವರೆ ಆಗಿರುತ್ತಾರೆ ಎಂಬ ಅಂಶವು ಸಹ ಇಲ್ಲಿ ಗಮನಿಸತಕ್ಕ ವಿಷಯ. ಅವುಗಳಲ್ಲಿ ಕೆಲವು ಮುಖ್ಯ ಕಾರಣಗಳನ್ನು ಇಲ್ಲಿ ಪ್ರಸ್ತಾಪಿಸುವುದು ಸೂಕ್ತ.

೧.ಅತಿಯಾದ ಆಲೋಚನೆ:
ಪ್ರತಿಭಾವಂತರು ಸಾಮಾನ್ಯವಾಗಿ ಎಲ್ಲದರಲ್ಲೂ ಅತಿಯಾದ ಆಲೋಚನೆಗಳನ್ನು ಮಾಡುತ್ತಾರೆ. ವಿಶೇಷವಾಗಿ ತಮ್ಮ ಸಂಗಾತಿಯ ಆಯ್ಕೆಯ ಸಂಧರ್ಭದಲ್ಲಿ  ಅವರು ಹೆಚ್ಚಿನ ಆಲೋಚನೆಗಳನ್ನು ಮಾಡುತ್ತಾರೆ. ಅವರ ಈ ಗುಣ ತಮ್ಮ ಕೆಲಸದ ಸಂಧರ್ಭದಲ್ಲಿ ಸಹಾಯವಾಗಬಹುದಾದರೂ ಸಂಭಂದಗಳ ವಿಷಯದಲ್ಲಿ ಇದು ಜಾಸ್ತಿನೆ ನೆತ್ಯಾತ್ಮಕ ಪ್ರಭಾವ ಬಿರುವದನ್ನು ಅಲ್ಲಗೆಳೆಯುವಂತಿಲ್ಲ.

೨.ಅವರು ರಹಸ್ಯಮಯವಾಗಿರುತ್ತಾರೆ.
ಈ ಪ್ರತಿಭಾವಂತರ ಮೊದಲ ಗುಣ ಅವರು ಸಾಧ್ಯವಾದಷ್ಟು ಜನರಿಂದ ದೂರ ಇರುವುದರಿಂದ ಅವರು ಯಾವುದೊ ರಹಸ್ಯ ಕಾಪಾಡುತ್ತಿದ್ದಾರೆ ಎಂಬ ಭಾವ ಇನ್ನಿತರರಲ್ಲಿ ಇರುತ್ತದೆ. ಆದರೆ ವಾಸ್ತವವಾಗಿ ಅವರಲ್ಲಿ ಯಾವುದೇ ಮುಚ್ಚುಮರೆ ಇರುವುದಿಲ್ಲ. ಅವರು ತಮ್ಮ ವ್ಯಯುಕ್ತಿಕ ಸಾಮರ್ಥ್ಯವನ್ನು ಹೆಚ್ಚಿಸಲೊಸುಗ ತಮ್ಮದೆ ಲೋಕದಲ್ಲಿ ಮುಳುಗಿರುತ್ತಾರೆ. ಆದರೆ ಅವರನ್ನು ಅರ್ಥಮಾಡಿಕೊಳ್ಳದ ಅವರ ಸಂಗಾತಿ ತಮ್ಮಿಂದ ಎನೋ ಮುಚ್ಚಿಡಲಾಗುತ್ತಿದೆ ಎನ್ನುವ ಭಾವದಿಂದ ನರಳುತ್ತಾ ಮುಂದೊಂದು ದಿನ ಬೇರೆಯಾಗುವ ಸಾದ್ಯತೆ ಇರುತ್ತದೆ.

ಅಲ್ಲದೆ ಸಂಗಾತಿಯ ಆಯ್ಕೆಯಲ್ಲಿ ತುಂಬ ಜಾಗರೂಕತೆ ವಹಿಸುತ್ತಾರೆ. ಜಾಗರೂಕತೆ ಒಳ್ಳೆಯದು. ಆದರೆ ಅತಿಯಾದ ಜಾಗರೂಕತೆ ಭಿನ್ನವಾದ ಆಲೋಚನೆಗಳನ್ನು ಹುಟ್ಟು ಹಾಕುತ್ತದೆ.

೩.ಸಂಬಂದಗಳಲ್ಲಿ ತಾರ್ಕಿಕತೆ ಹುಡುಕುವುದು
ಇವರು ಬದುಕನ್ನು ವೈಜ್ಞಾನಿಕ ಮನೋಭಾವದಿಂದ ನೊಡುತ್ತಾರೆ. ಆದರೆ ಸಂಬಂದಗಳಲ್ಲಿ ವೈಜ್ಞಾನಿಕತೆ ಹುಡುಕುವುದು ಸಮಂಜಸವಲ್ಲ. ಸಂಗಾತಿಯೋಂದಿಗಿನ ವಿಶೇಷ ಸಂದರ್ಭಗಳನ್ನು ಇತರ ಸನ್ನಿವೇಗಳಿಗೆ ತಾಳೆ ಹಾಕಿ ನೋಡುತ್ತಾರೆ.
ಹೇಳಿ ಕೇಳಿ ಸಂಬಂಧ-ಅನುಬಂಧಗಳಲ್ಲಿ ತರ್ಕದ ಬೆನ್ನು ಬೀಳಲಾಗದು. ಅದು ಭಾವನೆಗಳಿಗೆ ಅರ್ಪಿಸಲ್ಪಟ್ಟ  ವಿಷಯ. ಕಲ್ಪನೆ ಮತ್ತು ಕನಸುಗಳಲ್ಲಿ ಸುಂದರವಾಗಿ ಮುನ್ನಡೆಯುವ ಮಾತಿದು. ಎಕೆಂದರೆ ಪ್ರೇಮ ಸಂಬಂಧಗಳಲ್ಲಿ  ನನಸಿಗಿಂತ ಕನಸುಗಳ ಮಾತಿಗೆ ಮೌಲ್ಯವಿರುತ್ತದೆ. ಭಾವನಾ ಸಮುದ್ರದಲ್ಲಿ ಈಜಾಡುವ ನೌಕೆಗೆ ತಾರ್ಕಿಕತೆಯಿಂದ ಎಳೆದು ನಡು ಮರುಭೂಮಿಯ ಮೇಲೆ ಎಳೆದಂತಾಗುತ್ತದೆ.

೪.ಸ್ವಾವಲಂಬಿ ಮತ್ತು ತೃಪ್ತಿಯಿಂದಿರುತ್ತಾರೆ.

ಬುದ್ದಿವಂತರು ಸಾಮಾನ್ಯವಾಗಿ ಆರ್ಥಿಕ ಸ್ವಾತಂತ್ರ್ಯ ಮತ್ತು ಬೇರೆಯವರ ಮೇಲೆ ಅವಲಂಬಿತರಾಗಿರುವುದಿಲ್ಲ. ಅವರು ಉನ್ನತ ಮಟ್ಟದ ಸ್ವಾತಂತ್ರ್ಯ ಅನುಭವಿಸುತ್ತಾರೆ. ಮತ್ತು ಇದ್ದುದರಲ್ಲಿ ತೃಪ್ತಿಕರವಾಗಿ ಜೀವನ ನಡೆಸುವ ಮನೋಭಾವ ತೋರುತ್ತಾರೆ. ಇದು ಅವರ ಮಾನಸಿಕ ಗಟ್ಟಿತನದ ಸೂಚನೆ.

ಆರ್ಥಿಕ ಸ್ವಾವಲಂಬನೆ ಅವರು ತಮ್ಮ ಬದುಕಿನಲ್ಲಿ ಸ್ವಯಂ ನಿರ್ಧಾರಗಳನ್ನು ತೆಗೆದುಕೊಳ್ಳುವ ಗುಣವನ್ನು ರೂಢಿಸಿಕೊಂಡು ಬಂದಿರುತ್ತಾರೆ
ಅವರ ಈ ಗುಣವು ಸಂಗಾತಿಯೂಂದಿಗಿನ ಸಂಬಂಧಗಳಲ್ಲಿ  ಎಕಮುಖವಾಗಿ ತೀರ್ಮಾನ ತೆಗೆದುಕೊಳ್ಳುವಂತೆ ಮಾಡುತ್ತದೆ. ಮತ್ತು ಇದು ಸಂಬಂಧದಲ್ಲಿ ಬಿರುಕು ಮೂಡಿಸುತ್ತದೆ.

೫.ಗುರಿ ಮತ್ತು ಸಾಧನೆಗಳು ಮುಖ್ಯವಾಗಿರುತ್ತವೆ

ಇವರಿಗೆ ತಮ್ಮ ಪ್ರತಿಭೆಯ ಮೇಲೆ ಅಗಾಧ ನಂಬಿಕೆ ಇರುತ್ತದೆ. ಜೀವನದ ಪ್ರತಿರಂಗದಲ್ಲೂ ಇವರು ಜಯಶಾಲಿಗಳಾಗಬೇಕೆಂದು ಹಂಬಲಿಸುತ್ತಾರೆ. ಸಹಜವಾಗಿ ತಮ್ಮ ಗುರಿ ಸಾಧನೆಗಾಗಿ ಯಾವುದೆ ರೀತಿಯ ತ್ಯಾಗಕ್ಕೂ ಹಿಂಜರಿಯುವುದಿಲ್ಲ.ತಮ್ಮ ಗುರಿ ಸಾಧನೆಗೆ ತಮ್ಮದೆ ಆದ ಸಮಯದ ನಿಗದಿ ಮಾಡಿಕೂಂಡಿರುತ್ತಾರೆ.ಇದು ಅವರು ಸಂಗಾತಿಯ ಕಡೆಗೆ ಸಮಯದ ಅಭಾವವನ್ನು ತೂರ್ಪಡಿಸುತ್ತ  ಮುಂದೂಂದು ದಿನ ಸಂಗಾತಿಯೋಂದಿಗಿನ ಸಂಬಂದದ ಪ್ರಭಾವ ಬೀರುತ್ತದೆ. ಅವರು ಎಚ್ಚತ್ತುಕೋಳ್ಳದಿದ್ದರೆ ಸಂಬಂದ ನಿಧಾನವಾಗಿ ಹಳಸಲು ಆರಂಭಿಸುತ್ತದೆ.ಮತ್ತು ಒಂದು ದಿನ ಮುರಿದು ಬಿಳುತ್ತದೆ.

೬.ಸೌಂದರ್ಯ ಮುಖ್ಯವಲ್ಲ ಇವರಿಗೆ
ಇವರಿಗೆ ಸೌಂದರ್ಯದ ಬಗ್ಗೆ ಯಾವ ಆಸಕ್ತಿ ಇರುವುದಿಲ್ಲ. ಇದ್ದರೂ ಅದು ಇನ್ನಿತರ ಮುಖ್ಯ ವಿಷಯಗಳಷ್ಟು  ಪ್ರಮುಖವಾಗಿ ಗಣಿಸುವುದಿಲ್ಲ. ಅವರಿಗೆ ದೈಹಿಕ ಸೆಳೆತಕ್ಕಿಂತ ಮಾನಸಿಕ ಮತ್ತು ಬೌದ್ದಿಕ ಆಕರ್ಷಣೆ ಜಾಸ್ತಿ ಇರುತ್ತದೆ. ಸೌಂದರ್ಯ ಯಾವಾಗಲೂ ಎರಡನೆ ಸ್ಥಾನ ಪಡೆದುಕೂಳ್ಳುತ್ತದೆ.

ಮಾನಸಿಕ ಮತ್ತು ಇತರ ಹವ್ಯಾಸಗಳಿಗೆ ಇವರು ಮಾರುಹೋಗುತ್ತಾರೆ. ಆದರೆ ಅಂತಹ ಸಂಗಾತಿ ಸಿಗುವುದು ಬಹು ದುರ್ಲಭ ಆಗಿರುವುದರಿಂದ ಬಹುತೆಕ ಇವರು ಸಂಬಂದಗಳ ಬಗ್ಗೆ ಆಸಕ್ತಿ ಹೊಂದಿರುವುದಿಲ್ಲ. ಆದರೆ ಹೊಸ ಮಾದರಿಯ ಸಂಗಾತಿಯ ವಿಚಾರಕ್ಕೆ ಅವರು ಯಾವಾಗಲೂ ಮನಸ್ಸನ್ನು ತೆರೆದಿಡುತ್ತಾರೆ

೭.ಪ್ರತಿಭಾವಂತರು ಉನ್ನತ ಮೌಲ್ಯಗಳನ್ನು ಹೊಂದಿರುತ್ತಾರೆ
ಸಾಮನ್ಯವಾಗಿ, ಪ್ರತಿಭಾವಂತರು ಸರಾಸರಿಯಲ್ಲಿ ಬದುಕುವುದಿಲ್ಲ. ಅವರು ಉನ್ನತ ಮಟ್ಟದ ಮೌಲ್ಯಗಳನ್ನು ಹೊಂದಿರುತ್ತಾರೆ. ತಮ್ಮನ್ನು ಬಯಸಿಬರುವ ಯಾರೆ ಆಗಲಿ ಅವರಂತಹ ಮೌಲ್ಯಗಳನ್ನು ಹೊಂದಿರಬೆಕೆಂದು ಬಯಸುತ್ತಾರೆ. ಅದಕ್ಕಾಗಿ ತಮ್ಮ ಸಮಯ ಮತ್ತು ಭಾವನೆಗಳನ್ನು ಯಾರು ಯಾರಾರ ಮೇಲೆ ಮುಡಿಪಾಗಿಡಲು ಇಷ್ಟ ಪಡುವುದಿಲ್ಲ. ಇದರಿಂದ ಅವರು ಸರಿಯಾದ ಜೋಡಿ ಸಿಗುವವರಗೂ ತಾಳ್ಮೆಯಿಂದ ಕಾಯುತ್ತಿರುತ್ತಾರೆ. ಇಡಿ ಬದುಕನ್ನು ಪರಿಪೂರ್ಣವಾಗಿ ಬದುಕಲು ಬಯಸುವುದರಿಂದ ಅಂತವರು ಸಿಗುವವರಗೊ ಇವರು ಎಕಾಂಗಿಯಾಗಿರುವ ಸಾದ್ಯತೆ ಹೆಚ್ಚಾಗಿರುತ್ತವೆ.

೮.ರಕ್ಷಣಾತ್ಮಕ ಗುಣಧರ್ಮದವರು:
ಇವರು ರಕ್ಷಣಾತ್ಮಕ ಗುಣವನ್ನು ಹೊಂದಿರುತ್ತಾರೆ. ಇದರಿಂದ ಸುಲಭವಾಗಿ ಯಾರೊಬ್ಬರೊಂದಿಗೋ ಬೆರೆಯುವ ಮನೋಭಾವ ಹೊಂದಿರುವುದಿಲ್ಲ. ತಾವು ಕೇಳಿದ,ನೋಡಿದ ಸಂಗತಿಗಳನ್ನು ತಮ್ಮ ಬದುಕಿನ ವ್ಯಕ್ತಿಗಳೊಂದಿಗೆ ತಾಳೆ ಹಾಕುತ್ತಾರೆ.
ಎಕೆಂದರೆ ಇವರಿಗೆ ಇನ್ನೊಬ್ಬರಿಗೆ ನೋಯಿಸುವುದು ಅಥವಾ ತಾವು ನೋವಿಗೆ ಒಳಗಾಗುವುದು ಇಷ್ಟವಿರುವುದಿಲ್ಲ. ಇದರಿಂದ ಅವರಿಗೆ ಮತ್ತೊಬ್ಬರ ಬಗ್ಗೆ ಧನಾತ್ಮಕ ದೃಷ್ಟಿಕೋನ ಬೆಳೆಸಿಕೊಳ್ಳಲು ಸ್ವಲ್ಪ ಕಷ್ಟ ಆಗುತ್ತದೆ.ಈ ಕಾರಣಕ್ಕಾಗಿ ಬೆರೆಯವರ ಬಗ್ಗೆ ಮಾತನಾಡದೆ ಇದ್ದರೂ ಅವರ ಬಗ್ಗೆ ಕುತೂಹಲ ಇಟ್ಟುಕೊಂಡಿರುತ್ತಾರೆ.

೯.ಗಟ್ಟಿ ಚಿಪ್ಪಿನೊಳಗಿನ ಮೃದು ಮನಸ್ಸಿನವರು

ಇವರು ತೋರಿಕೆಗೆ ಬಹು ಗಟ್ಟಿಗರಂತೆ ಕಂಡು ಬಂದರು, ಆಂತರ್ಯದಲ್ಲಿ ತುಂಬಾ ಮೃದುವಾಗಿರುತ್ತಾರೆ. ಆದರೆ ತಮ್ಮತನ ಬಿಟ್ಟು ಕೊಡದ ರೀತಿಯಲ್ಲಿ ವರ್ತಿಸುತ್ತಾರೆ. ಇವರಿಗೆ ಸೋಲನ್ನು ಅರಗಿಸಿಕೊಳ್ಳುವುದು ಬಲು ಕಷ್ಟ. ಆದುದರಿಂದ ಇವರು ತಾವು ಯಾರನ್ನೆ ಪ್ರೇಮಿಸಿದರೂ ಅದನ್ನು ಹೇಳಿಕೋಳ್ಳವುವಲ್ಲಿ ಎಡವುತ್ತಾರೆ. ಅಥವಾ ಹೇಳಿಕೋಳ್ಳವುದಿಲ್ಲ. ಇದು ಅವರ ಪ್ರೇಮ ಸಂಗಾತಿಗೆ ತಲುಪುವಲ್ಲಿ ಬಹಳಷ್ಟು ಸಮಯವಕಾಶ ತೆಗೆದುಕೊಳ್ಳುತ್ತದೆ. ಪ್ರೇಮ ವೈಫಲ್ಯಕ್ಕೆ ಇದು ಸಹಾ ಕಾರಣವಾಗಿತ್ತದೆ.

೧೦.ತಮ್ಮ ಲೋಕದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಾರೆ.
ಬುದ್ದಿವಂತರು ಯಾವಾಗಲೂ ಬೌದ್ದಿಕ ಸಾದ್ಯತೆಗಳು ಹೆಚ್ಚಾಗಿರುವೆಡೆಯಲ್ಲಿ ಆಸಕ್ತಿ ವಹಿಸುತ್ತಾರೆ. ಇವರು ತಮ್ಮದೆ ಲೋಕವನ್ನು ಕಟ್ಟಿಕೊಂಡಿರುತ್ತಾರೆ.ಅದರಲ್ಲಿ ಸುಲಭವಾಗಿ ಯಾರನ್ನು ಬೇಕಾದರೂ ಬಿಟ್ಟಿಕೊಳ್ಳಲಾರರು. ತಾವು ವಿಶೇಷವಾಗಿ ಎಂದು ಭಾವಿಸುವವರನ್ನೆ ಆತ್ಮಸಾಂಗತ್ಯಕ್ಕೆ ಆಹ್ವನಿಸುತ್ತಾರೆ. ಮೊದಲ ನೋಟದಲ್ಲಿ ಪ್ರೀತಿ ಹುಟ್ಟುಕೋಳ್ಳುತ್ತೆ ಎಂಬುವುದರ ಬಗ್ಗೆ ಇವರಿಗೆ ಆಸಕ್ತಿಯಿರದು. ತಮ್ಮ ಕೋಟೆಯನ್ನು ಮೀರಿದವರಿಗೆ ಮಾತ್ರ ಸೋಲುತ್ತಾರೆ.ಆದರೆ ಅದಕ್ಕೆ ಸಾಕಷ್ಟು ಸಮಯ ಬೇಕಾಗಿರುವುದರಿಂದ ಸಂಗಾತಿ ಹುಡುಕುವುದು ಸಾದ್ಯವಾಗದು ಇವರಿಗೆ.

ಈ ಲೇಖನವನ್ನು ಇಲ್ಲಿಯವರೆಗೊ ತಾವು ಓದಿದ್ದಕ್ಕೆ ಕೃತಜ್ಞತೆಗಳ ಪೂರಕವಾಗಿ ನಿಮಗೊಂದು ಹೆಚ್ಚುವರಿ ಅಂಶ ಇಲ್ಲಿದೆ...

ಪರಿಪೂರ್ಣತೆಯನ್ನು ಹುಡುಕುತ್ತಾರೆ ಇವರು∆
ಪ್ರತಿಭಾವಂತರು ಕಲ್ಪನಾ ಲೋಕದ ಸರದಾರರು, ಇವರಿಗೆ ಜೀವನವನ್ನು  ಅದರ ಪರಿಪೂರ್ಣತೆಯಿಂದ ಆನಂದಿಸಬೇಕೆಂದು ಬಯಸುತ್ತಾರೆ... ಈ ಕಾರಣದಿಂದ ತಮಗೆದುರಾಗುವ ಪ್ರತಿಯೊಬ್ಬ ಸಂಗಾತಿಯಲ್ಲಿ ದಿನಗಳೆದಂತೆ ಎನಾದರೊಂದು ಕೊರತೆ ಕಂಡು ಹಿಡಿದು, ಕಾಲಕಳೆದಂತೆ ಅದನ್ನೆ ದೊಡ್ಡದು ಮಾಡುತ್ತಾರೆ.. ಅಲ್ಲಿಗೆ ಸಂಬಂಧಕ್ಕೆ ಇತಿ ಶ್ರೀ.

  ವಾಸ್ತವವಾಗಿ ಇವರು ಒಂದು ವೇಳೆ ಯಾರನ್ನಾದರೂ ಮನಸ್ಪೋರ್ವಕವಾಗಿ ಪ್ರೇಮಿಸಿದ್ದೆ ಆದರೆ ಇವರಿಂದ ಅಂತಹವರನ್ನು ಮರೆಯುವುದು ಸುಲಭ ಸಾಧ್ಯವಲ್ಲ. ಇದು ಈ ಪ್ರತಿಭಾವಂತರನ್ನು ಜೀವನದುದ್ದಕ್ಕೂ ಕೊರಗುವಂತೆ ಮಾಡುತ್ತದೆ. ಇದು ಇಂತಹವರೊಂದಿಗೆ ಭಾವ ಸಂಬಂದ ಬೆಳೆಸುವವರು ಗಮನಿಸಬೇಕಾದ ಮಹತ್ವದ ಅಂಶ.

ಇಷ್ಟು ಅಂಶಗಳ ಅಂತಿಮ ಅಂತಲ್ಲ. ಎಕೆಂದರೆ ಪ್ರತಿಯೊಬ್ಬರೂ ವಿಭಿನ್ನವಾಗಿರುವುದರಿಂದ ಅವರವರೆ ವ್ಯಕ್ತಿತ್ವಕ್ಕೆ ತಕ್ಕಂತೆ ಮಾರ್ಪಾಡುಗಳು ಆಗಬಹುದು. ಆದರೂ ಮೇಲಿನ ಅಂಶಗಳು ಮನೋವೈಜ್ಞಾನಿಕ ದೃಷ್ಟಿಯಿಂದ ಬರೆದಿರುವುದರಿಂದ ಇವುಗಳನ್ನು ಸಾದ್ಯತೆಗಳಾಗಿ ಪರಿಗಣಿಸಬಹುದು.

ಹಾಗೆ ನಿಮ್ಮ ಪ್ರಕಾರ ಪ್ರೇಮವೈಫಲ್ಯಕ್ಕೆ ಕಾರಣಗಳು ಎನೆನು ಎಂಬುದನ್ನು ನಾನು ಸಹ ತಿಳಿಯಲು ಬಯಸುತ್ತೆನೆ.. ಕಮೇಂಟ್ ಅಲ್ಲಿ ನೀವು ತಿಳಿಸಿ

 ಹಾಗೆ ಇದನ್ನು ಶೇರ್ ಮಾಡಿ..
ಧನ್ಯವಾದಗಳು...

-ನಾಗೇಶ ಮುದ್ದಾಳೆ.

ಸಮಭಾವ - ಸಮಜೀವದ ಸಮಾಜಕ್ಕಾಗಿ ನಮ್ಮೊಳಗೊಂದು ಅಂತರಂಗದ ಚಳುವಳಿ.

ಕಾಮೆಂಟ್‌ಗಳು

  1. ಬೆಳಿಗ್ಗೆ ಪ್ರೇಮ ಮೂಡಿ ಮಧ್ಯಾಹ್ನದ ಅವಧಿಗೆಲ್ಲಾ ಹಳಸಿ ಹೋಗುವ ಈ ಕಾಲದಲ್ಲಿ ನೈಜ ಪ್ರೇಮ ಅನ್ನುವುದೆ ಒಂದು ಹಾಸ್ಯ ಅಗಿಬಿಟ್ಟಿದೆ
    ಈ ಮಾತು ನಿಜವಾಗಿದೆ.

    ಉತ್ತಮವಾದ ಲೇಖನ 👌

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡಮಯ ಮಹಾರಾಷ್ಟ್ರ

ವಿಜ್ಞಾನದ ಮೂಲವೆ ಪ್ರಶ್ನೆ ಮಾಡುವ ಕುತೂಹಲಕರ ಮನಸ್ಸು...

ಸ್ಥಿತಪ್ರಜ್ಞ ಪೌರವ ಪುರುಷ