ಪೋಸ್ಟ್‌ಗಳು

ವಿಜ್ಞಾನದ ಮೂಲವೆ ಪ್ರಶ್ನೆ ಮಾಡುವ ಕುತೂಹಲಕರ ಮನಸ್ಸು...

ಇಮೇಜ್
ವಿಜ್ಞಾನದ ಮೂಲವೆ ಪ್ರಶ್ನೆ ಮಾಡುವ ಕುತೂಹಲಕರ ಮನಸ್ಸು ಡಾ! ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮುಂದಾಳತ್ವದಲ್ಲಿ ರೂಪಿಸಿದ ಸಂವಿಧಾನದ ಮೂಲ ಆಶಯಗಳಲ್ಲಿ ಪ್ರಶ್ನಿಸುವುದು ಒಂದು ಬಹು ಮುಖ್ಯ ಅಂಶ. ಅಲ್ಲದೆ ನಮ್ಮದೆ ಪ್ರಪ್ರಾಚೀನ ತತ್ವಜ್ಞಾನದ ರೂಪಗಳಾಗಿರುವ ಉಪನಿಷತ್ತುಗಳು ಇರುವುದು ಪ್ರಶ್ನೋತ್ತರಗಳ ಮಾದರಿಯಲ್ಲೆ. ಸಹಸ್ರಾರು ಜನರು ಗೌರವಿಸುವ   ನಮ್ಮ ಭಗವದ್ಗೀತೆ ಇರುವುದು ಪ್ರಶ್ನೋತ್ತರದ ರೂಪದಲ್ಲೆ, ಬೌದ್ದ ಸಾಹಿತ್ಯದ ಬಹುಭಾಗ ಇರುವುದು, ಮುಖ್ಯ ಗ್ರಂಥವಾದ ಮಿಲಿಂದ ಪನ್ಹಾ ಇರುವುದು ಪ್ರಶ್ನೋತ್ತರದ ಮಾದರಿಯಲ್ಲೆ.  ಯಾವಾಗ ನಾವು ಪ್ರಶ್ನೆ ಮಾಡುವುದನ್ನು ಬಿಟ್ಟು ಬಿಡುತ್ತೆವೆಯೋ ಆವಾಗ ನಮ್ಮ  ಬೌದ್ದಿಕ ವಿಕಾಸ ನಿಂತುಬಿಡುತ್ತದೆ. ಮೌಡ್ಯತೆ ಮೂಡುವುದು ವ್ಯಕ್ತಿಗತವಾಗಿ ಆಲೋಚನಾ ಶಕ್ತಿ ಕಳೆದುಕೊಂಡಾಗ, ಯಾರೋ ಒಬ್ಬ ಪ್ರಭಾವಿ ಹೇಳುವುದನ್ನೆ ವೇದವಾಕ್ಯ ಎಂದು ಪರಿಭಾವಿಸಿದಾಗ, ಅಲ್ಲಿಗೆ ನಮ್ಮ ಸ್ವಂತಿಕೆಯ ಅಧಃ ಪತನದ ಆರಂಭವಾಗುವುದು. .. _ಅಂತಸತ್ವ ಶಕ್ತಿಶಾಲಿಯಾಗಿ ಇರುವ ಯಾವನೂ ಸಹ ಖಂಡಿತ ಪ್ರಶ್ನೆ ಮಾಡದೆ ಯಾವುದನ್ನೂ ಒಪ್ಪಿಕೊಳ್ಳಲಾರ_ , _ಸ್ವೀಕರಿಸಲಾರ_.   ಇಲ್ಲದವ ಮಾತ್ರ ಕತ್ತಲಲ್ಲಿ ಕುರುಡನೆ ದಾರಿ ತೋರುತ್ತಿದ್ದಾನೆ ಎಂಬ ಭಾವದೊಂದಿಗೆ ನಡೆಯುತ್ತಾನೆ.. ಅದು ಅವನ ವ್ಯಯುಕ್ತಿಕ ನಷ್ಟವಲ್ಲದೆ, ಆತನನ್ನೆ ಅವಲಂಬಿಸಿರುವ ವ್ಯವಸ್ಥೆಯ ನಷ್ಟವೂ ಹೌದು. ಪ್ರಶ್ನೆ ಮಾಡದೆ ಮಾಡುವ ವ್ಯಕ್ತಿಪೂಜೆ ಪ್...

ಅಕ್ಷರದವ್ವ

ಇಮೇಜ್
✍️ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ – ಅಕ್ಷರವೇ ಆಯುಧವಾದ ಕ್ರಾಂತಿಕಾರಿ ಮಹಿಳೆ ಭಾರತದ ಸಾಮಾಜಿಕ ಇತಿಹಾಸದಲ್ಲಿ ಕೆಲವರು ಮೌನವಾಗಿ ಬಂದರೂ, ಅವರ ಹೆಜ್ಜೆಗಳ ಶಬ್ದ ಶತಮಾನಗಳವರೆಗೆ ಕೇಳಿಸುತ್ತದೆ. ಅಂತಹ ಮಹಾನ್ ವ್ಯಕ್ತಿತ್ವಗಳಲ್ಲಿ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರು ಅಗ್ರಗಣ್ಯರು. ಶಿಕ್ಷಣವೇ ಮಾನವನ ಮುಕ್ತಿಯ ಮಾರ್ಗ ಎಂಬ ನಂಬಿಕೆಯನ್ನು ಜೀವಂತವಾಗಿ ಬದುಕಿದವರು ಸಾವಿತ್ರಿಬಾಯಿ. 🌱 ಬಾಲ್ಯ ಮತ್ತು ಬದುಕಿನ ಆರಂಭ 1831ರ ಜನವರಿ 3ರಂದು ಮಹಾರಾಷ್ಟ್ರದ ನೈಗಾಂವ್ ಎಂಬ ಹಳ್ಳಿಯಲ್ಲಿ ಜನಿಸಿದ ಸಾವಿತ್ರಿಬಾಯಿ, ಆ ಕಾಲದ ಸಾಮಾಜಿಕ ಪರಿಸ್ಥಿತಿಯಲ್ಲಿ ಶಿಕ್ಷಣದಿಂದ ವಂಚಿತರಾಗಿದ್ದ ಸಾಮಾನ್ಯ ಹುಡುಗಿಯರಲ್ಲಿ ಒಬ್ಬರು. ಆದರೆ ಜ್ಯೋತಿರಾವ್ ಫುಲೆ ಎಂಬ ಕ್ರಾಂತಿಕಾರಿ ಚಿಂತಕರ ಸಹವಾಸ ಅವರ ಬದುಕಿನ ದಿಕ್ಕನ್ನೇ ಬದಲಿಸಿತು. ಪತಿ ಜ್ಯೋತಿರಾವ್ ಅವರೇ ಸಾವಿತ್ರಿಬಾಯಿಗೆ ಅಕ್ಷರ ಕಲಿಸಿದ ಮೊದಲ ಗುರು. 📚 ಭಾರತದ ಮೊದಲ ಮಹಿಳಾ ಶಿಕ್ಷಕಿ 1848ರಲ್ಲಿ ಪುಣೆಯ ಭಿಡೆವಾಡದಲ್ಲಿ ಬಾಲಕಿಯರಿಗಾಗಿ ಶಾಲೆ ತೆರೆದು, ಭಾರತದ ಮೊದಲ ಮಹಿಳಾ ಶಿಕ್ಷಕಿ ಎಂಬ ಗೌರವಕ್ಕೆ ಪಾತ್ರರಾದರು. ಆ ದಿನಗಳಲ್ಲಿ ಮಹಿಳೆಯರು, ಅದರಲ್ಲೂ ಶೂದ್ರ-ಅತಿಶೂದ್ರ ವರ್ಗದವರು ಶಿಕ್ಷಣ ಪಡೆಯುವುದು ಅಪರಾಧದಂತೆ ಕಾಣುತ್ತಿದ್ದ ಕಾಲ. ಸಾವಿತ್ರಿಬಾಯಿ ಶಾಲೆಗೆ ಹೋಗುವಾಗ ಜನರು ಕಲ್ಲು ತೂರುತ್ತಿದ್ದರು, ಕೆಸರು ಎರಚುತ್ತಿದ್ದರು. ಆದರೆ ಅವರು ತಮ್ಮ ಬಳಿ ಹೆಚ್ಚುವರಿ ಸೀರೆ ಇಟ್ಟುಕೊಂಡು, ಅ...

ವಿಕೇಂದ್ರಿಕರಣ ಮತ್ತು ಪ್ರಬಲ ಪ್ರಜಾಪ್ರಭುತ್ವ

ಇಮೇಜ್
ಅಧಿಕಾರ ಮತ್ತು ಅದರ ವಿಕೇಂದ್ರೀಕರಣ ಕಳೆದ ಕೆಲವು ದಿನಗಳಿಂದ ನಮ್ಮ ಸುತ್ತಲಿನ ಬಹುರಾಷ್ಟ್ರೀಯ ಸ್ತಿತ್ಯಂತರಗಳನ್ನು ಗಮನಿಸುವಾಗ ಒಂದು ಅಂಶ ಬಹು ಸ್ಪಷ್ಟವಾಗಿ ಗೋಚರಿಸುತ್ತಿದೆ. ನಮ್ಮ ಭಾರತದಲ್ಲಿ ಪ್ರಜಾಪ್ರಭುತ್ವ  ಬಹು ಬಲಿಷ್ಠವಾದ ಸ್ಥಾನವನ್ನು ಹೊಂದಿದೆ. ನಮ್ಮ ಸೇನೆ ಇಡಿ ಜಗತ್ತಿನಲ್ಲಿ ನಾಲ್ಕನೆಯ ಅತಿ ದೊಡ್ಡದಾದ ಸೇನೆಯಾಗಿದ್ದರೂ ಸಹ ಇವತ್ತಿನವರೆಗೂ ಚುನಾಯಿತ ಸರ್ಕಾರಕ್ಕೆ ಎಲ್ಲ ವಿಧದಲ್ಲೂ ವಿಧೇಯವಾಗಿ ಕರ್ತವ್ಯ ನಿರ್ವಹಿಸುತ್ತಿದೆ. ಜಗದಲ್ಲೆ ಜನಸಂಖ್ಯೆಯ ದೃಷ್ಟಿಕೋನದಿಂದ ಬೃಹತ್ ರಾಷ್ಟ್ರವಾಗಿದ್ದರೂ ಯಾವ ವಿಧವಾದ   ಕ್ರಾಂತಿಗಳು ಇಲ್ಲಿ ಕಂಡುಬಂದಿಲ್ಲ. ಪ್ರಾಯಶಃ ಕಂಡುಬರಲು ಸಾಧ್ಯವೂ ಇಲ್ಲ. ಇದರ ಮೂಲ ಕಾರಣ ನಮ್ಮ ಹಿರಿಯರು ರೂಪಿಸಿಕೊಟ್ಟ ಅತ್ಯುತ್ತಮ ಸಂವಿಧಾನದದಲ್ಲಿ ಅಡಗಿದೆ. ಈ ಸಂವಿಧಾನವು ನಮ್ಮ ದೇಶದ ಎಲ್ಲ   ವಿಧದ ಆಡಳಿತ ಹಾಗೂ ಕ್ಷಮತೆಗೆ ಸಹಾಯಕವಾಗಿದೆ. ಇದರ ಅನೇಕಾನೇಕ ಲಕ್ಷಣಗಳಲ್ಲಿ ನಾನು ಒಂದು ವಿಷಯ ಇಲ್ಲಿ ಚರ್ಚಿಸಲು ಯತ್ನಿಸುತ್ತೆನೆ. ಅದೆಂದರೆ ಅಧಿಕಾರದ ವಿಕೇಂದ್ರೀಕೃತ ಆಡಳಿತದ ಮಾದರಿ.  ನಮ್ಮ ಭಾರತ ಬಹು ವೈವಿಧ್ಯಮಯವಾದ ದೇಶ. ಇಲ್ಲಿ ನೀವು ಎಲ್ಲಾ ಪ್ರಮುಖ ಧರ್ಮಗಳು, ಇಲ್ಲೆ ಉಗಮಿಸಿದ ಮತ ಪಂಥಗಳು ಮನುಕುಲದ ಅತ್ಯಂತ ಪುರಾತನ ಆಚರಣೆಗಳು, ನಭಕ್ಕೇರಿದ ವೈಜ್ಞಾನಿಕ ಸಾಧನೆಗಳು ಎಲ್ಲವನ್ನೂ ನೀವು ಇಲ್ಲಿ‌ ನೋಡಬಹುದು. ಅದಾಗ್ಯೂ ಈ ದೇಶದ ಅಭ್ಯುದಯಕ್ಕೆ ಪರಮ ಕಾರಣವಾಗಿರುವ ಅ...

ಸ್ಥಿತಪ್ರಜ್ಞ ಪೌರವ ಪುರುಷ

ಇಮೇಜ್
ಎಲ್ಲವೂ ಚನ್ನಾಗಿ ನಡೆಯುತ್ತಿರುವಾಗ ಬದುಕು ಸುಂದರ, ಸುಮಧುರವಾಗಿ ಕಂಡುಬರುತ್ತದೆ. ಪ್ರತಿಯೊಬ್ಬ ಪುರುಷ ಅಥವಾ ಸ್ತ್ರೀ ಅಂತಹ ಸಂಧರ್ಭಗಳಲ್ಲಿ ಆನಂದದಿಂದ ಇರುತ್ತಾರೆ. ಜೀವನದ ಪ್ರತಿಯೊಂದು ವಿಷಯ ಅವರಿಗೆ ಹಿತ ನೀಡುತ್ತವೆ. ಆದರೆ.......,   ಒಂದು ದಿನ ಇದ್ದಕ್ಕಿದ್ದಂತೆ ಆ ಕನಸಿನಂತಿರುವ ಜೀವನ ಪಾತಾಳಕ್ಕೆಸೆಯಲ್ಪಡುತ್ತದೆ. ಪಾರ್ಕು, ರೆಸ್ಟೋರೆಂಟ್ ಗಳಲ್ಲಿ ನಲಿಯುತ್ತಿದ್ದ ಮುಖಕ್ಕೆ ಆಸ್ಪತ್ರೆಯ ರೌರವ ನರಕದ ದರ್ಶನವಾಗುತ್ತದೆ, ಹಾಯಾಗಿ ಮೆತ್ತನೆಯ ಹಾಸಿಗೆಯ ಮೇಲೆ ಮಲಗುತ್ತಿದ್ದವರು ಆಸ್ಪತ್ರೆಯ ಅಂಗಳದಲ್ಲಿ ರಾತ್ರಿಯಾಗುತ್ತಿದ್ದಂತೆ ಜಾಗ ಹಿಡಿಯಬೇಕಾಗುತ್ತದೆ. ICU ನಲ್ಲಿರುವ ಸಂಬಂಧಿಕ ರೋಗಿ ತನ್ನ ಪಾಡಿಗೆ ತಾನಿರುತ್ತದೆ. ಆದರೆ ಆ ರೋಗಿ ಜೊತೆಗೆ ಹೋದ ಕರುಳ ಬಳ್ಳಿ ಮಾತ್ರ ಕಟುಕನು ಎಳೆದುಕೊಂಡ ಹೋದ ಆಕಳ ಕರುವಿನಂತೆ ವಿಲ ವಿಲ ಒದ್ದಾಡುತ್ತಿರುತ್ತದೆ.  ಆದರೆ ಕೆಲವೊಬ್ಬರಿಗೆ ಸ್ಥಿತಪ್ರಜ್ಞೆಯೆ ಆಧಾರವಾಗಿರುತ್ತದೆ. ಭಾವನಾರಹಿತರಾಗಿ ಕಲ್ಲಿನಂತೆ ಇದ್ದುಬಿಡುವುದೆ? ಅಥವಾ ಆಸ್ಪತ್ರೆಯ ಭೀಕರತೆಯ ಒಂಟಿತನದಲಿ ಸಾಂಗತ್ಯಕ್ಕಾಗಿ ಹಂಬಲಿಸುವುದಾ?? ಸ್ಥಿತಪ್ರಜ್ಞೆನಾದವನು ಇವೆರಡರಲ್ಲಿ ಯಾವುದನ್ನೂ ಮಾಡುವುದಿಲ್ಲ. ಕಠಿಣಾತಿ ಕಠಿಣ ಪರಿಸ್ಥಿತಿಯಲ್ಲಿ ಸಹ ಸ್ಥಿತಪ್ರಜ್ಞೆನು ಪೌರವನಂತೆ ಇರುತ್ತಾನೆ. ಹೀಗಿವೆ ಸ್ಥಿತಪ್ರಜ್ಞನ ಮೂಲ ಗುಣಗಳು :- ೧.ನಂಜುಂಡನಾಗಿರುವದು:- ಅರೆ ಇದೆನಿದು, ನಂಜಂಡ ಅಂದ್ರೆ ಶಿವನಲ್ವಾ?? ಹೌದು. ಶ...