ಶಿವನ ಅಜ್ಞಾತವಾಸಕ್ಕೆ ಅಂತ್ಯ ಹಾಡಿದ ಮಾತೋಶ್ರಿ ಅಹಲ್ಯಾ ಬಾಯಿ ಹೋಳ್ಕರ್..
 ರಾಜಮಾತೆ ಅಹಲ್ಯಾಬಾಯಿ ಹೋಳ್ಕರ್ ಬಾಜಿರಾಯ ಪೇಶ್ವೆಯ ಸೇನಾಪತಿಗಳಲ್ಲೊಬ್ಬನಾದ ಮಲ್ಹಾರ ರಾವ್ ಹೋಳ್ಕರ್ ಉತ್ತರ ಭಾರತದ ದಿಗ್ವಿಜಯಗಳನ್ನು ಮುಗಿಸಿ, ಮರಳಿ ತನ್ನ ರಾಜ್ಯಕ್ಕೆ ಹಿಂತಿರುಗುತ್ತಿದ್ದ. ಪೇಶ್ವೆಗಳ ರಾಜಧಾನಿ ಪುಣೆಗೆ ಸಮೀಪ ಚೌಂಡಿ ಎನ್ನುವ ಗ್ರಾಮದ ಹತ್ತಿರ ಬೀಡುಬಿಟ್ಟಿದ್ದ. ಹತ್ತಿರದ ಶಿವಾಲಯವೊಂದರಲ್ಲಿ ತುಂಬ ಜನ ನೆರೆದಿದ್ದರು. ಹೋಳ್ಕರನು ಮತ್ತವನ ಕೆಲವು ಸೈನಿಕರು ಶಿವ ದೇವಾಲಯಕ್ಕೆ ದರ್ಶನಕ್ಕೆಂದು ಬಂದಿದ್ದರು. ಜನ ನೆರೆಯಲು ಕಾರಣ ಎನೆಂದು ಗಮನಿಸಿದಾಗ, ಅಲ್ಲೊರ್ವ ಎಂಟು ವರುಷದ ಹುಡುಗಿಯೊಬ್ಬಳು ಅಲ್ಲಿಗೆ ಬಂದಿದ್ದ ಭಕ್ತರಿಗೆಲ್ಲಾ ದಾನ ನೀಡುತ್ತಿದ್ದಳು. ಆಕೆಯ ಚಟುವಟಿಕೆ, ದೈವಭಕ್ತಿ, ಜನರೊಂದಿಗೆ ನಡೆಸುತ್ತಿದ್ದ ಸಂವಾದ ಮಲ್ಹಾರ್ ರಾವ ಹೋಳ್ಕರನನ್ನು ತುಂಬ ಆಕರ್ಷಿಸಿತು. ಅಂತಹ ಒಬ್ಬ ರಾಜ್ಯದ ಆಡಳಿತಗಾರನನ್ನು ಮಂತ್ರಮುಗ್ದ ಮಾಡಿದವಳು ಬೇರೆ ಯಾರು ಅಲ್ಲ. ಅವಳೆ ಅಹಲ್ಯಾ ಬಾಯಿ ಹೋಳ್ಕರ್. ಭಾರತದ ಭೂಪಟದ ಮೇಲೆ ಮೋಘಲರ ದಬ್ಬಾಳಿಕೆ ಅಳಿದು ಸ್ವರಾಜ್ಯ ಆಡಳಿತ ಬೇರು ಬೀಡುತ್ತಿದ್ದ ಸಮಯವದು. ಮುಸ್ಲಿಮರ ಕಳೆದ ೩೦೦ ವರ್ಷಗಳ ಆಡಳಿತ ಭಾರತೀಯರನ್ನು ಹಿಂಡಿ ಹಿಪ್ಪೆಯಾಗಿ ಮಾಡಿತ್ತು. ಪ್ರಖ್ಯಾತ ಎನಿಸುವ ದೇವಾಲಯಗಳೆಲ್ಲಾ ಉರುಳಿಸಿ ಅಲ್ಲಿ ಮಸೀದಿಗಳನ್ನು ನಿರ್ಮಾಣ ಮಾಡಲಾಗಿತ್ತು. ಭಾರತಿಯರ ದೈವಿಕತೆ ...