ಶಿವನ ಅಜ್ಞಾತವಾಸಕ್ಕೆ ಅಂತ್ಯ ಹಾಡಿದ ಮಾತೋಶ್ರಿ ಅಹಲ್ಯಾ ಬಾಯಿ ಹೋಳ್ಕರ್..

ರಾಜಮಾತೆ ಅಹಲ್ಯಾಬಾಯಿ ಹೋಳ್ಕರ್
ಬಾಜಿರಾಯ ಪೇಶ್ವೆಯ ಸೇನಾಪತಿಗಳಲ್ಲೊಬ್ಬನಾದ ಮಲ್ಹಾರ ರಾವ್ ಹೋಳ್ಕರ್ ಉತ್ತರ ಭಾರತದ ದಿಗ್ವಿಜಯಗಳನ್ನು ಮುಗಿಸಿ, ಮರಳಿ ತನ್ನ ರಾಜ್ಯಕ್ಕೆ ಹಿಂತಿರುಗುತ್ತಿದ್ದ. ಪೇಶ್ವೆಗಳ ರಾಜಧಾನಿ ಪುಣೆಗೆ ಸಮೀಪ ಚೌಂಡಿ ಎನ್ನುವ ಗ್ರಾಮದ ಹತ್ತಿರ ಬೀಡುಬಿಟ್ಟಿದ್ದ.
ಹತ್ತಿರದ ಶಿವಾಲಯವೊಂದರಲ್ಲಿ ತುಂಬ ಜನ ನೆರೆದಿದ್ದರು. ಹೋಳ್ಕರನು ಮತ್ತವನ ಕೆಲವು ಸೈನಿಕರು ಶಿವ ದೇವಾಲಯಕ್ಕೆ ದರ್ಶನಕ್ಕೆಂದು ಬಂದಿದ್ದರು. ಜನ ನೆರೆಯಲು ಕಾರಣ ಎನೆಂದು ಗಮನಿಸಿದಾಗ, ಅಲ್ಲೊರ್ವ ಎಂಟು ವರುಷದ ಹುಡುಗಿಯೊಬ್ಬಳು ಅಲ್ಲಿಗೆ ಬಂದಿದ್ದ ಭಕ್ತರಿಗೆಲ್ಲಾ ದಾನ ನೀಡುತ್ತಿದ್ದಳು.
ಆಕೆಯ ಚಟುವಟಿಕೆ, ದೈವಭಕ್ತಿ, ಜನರೊಂದಿಗೆ ನಡೆಸುತ್ತಿದ್ದ ಸಂವಾದ ಮಲ್ಹಾರ್ ರಾವ ಹೋಳ್ಕರನನ್ನು ತುಂಬ ಆಕರ್ಷಿಸಿತು.
ಅಂತಹ ಒಬ್ಬ ರಾಜ್ಯದ ಆಡಳಿತಗಾರನನ್ನು ಮಂತ್ರಮುಗ್ದ ಮಾಡಿದವಳು ಬೇರೆ ಯಾರು ಅಲ್ಲ. ಅವಳೆ ಅಹಲ್ಯಾ ಬಾಯಿ ಹೋಳ್ಕರ್.
ಭಾರತದ ಭೂಪಟದ ಮೇಲೆ ಮೋಘಲರ ದಬ್ಬಾಳಿಕೆ ಅಳಿದು ಸ್ವರಾಜ್ಯ ಆಡಳಿತ ಬೇರು ಬೀಡುತ್ತಿದ್ದ ಸಮಯವದು. ಮುಸ್ಲಿಮರ ಕಳೆದ ೩೦೦ ವರ್ಷಗಳ ಆಡಳಿತ ಭಾರತೀಯರನ್ನು ಹಿಂಡಿ ಹಿಪ್ಪೆಯಾಗಿ ಮಾಡಿತ್ತು.
ಪ್ರಖ್ಯಾತ ಎನಿಸುವ ದೇವಾಲಯಗಳೆಲ್ಲಾ ಉರುಳಿಸಿ ಅಲ್ಲಿ ಮಸೀದಿಗಳನ್ನು ನಿರ್ಮಾಣ ಮಾಡಲಾಗಿತ್ತು. ಭಾರತಿಯರ ದೈವಿಕತೆ ಮಂಕು ಹಿಡಿದಂತಾದ ಸಮಯದಲ್ಲಿ ದೇಗುಲಗಳ, ಅನ್ನಛತ್ರ,ಅರವಟಿಗೆ,ಧರ್ಮಶಾಲೆಗಳ ನಿರ್ಮಾಣದ ಮೂಲಕ ಆಶಾಕಿರಣವಾದವರೆ ಇಂದೋರಿನ ಆಡಳಿತಗಾರ್ತಿಯಾದ ಅಹಲ್ಯಾಬಾಯಿ ಹೋಳ್ಕರ್.
ಅಹಲ್ಯಾಬಾಯಿ ಹೋಳ್ಕರ್ ಜನಿಸಿದ್ದು ೩೧ ಮೇ ೧೭೩೫ ರಂದು. ಪ್ರಸ್ತುತ ಮಹಾರಾಷ್ಟ್ರದ ಅಹಮದ ನಗರ ಜಿಲ್ಲೆಯ ಚೌಂಡಿ ಎನ್ನುವ ಸಣ್ಣ ಊರಿನಲ್ಲಿ. ಆ ಊರಿನ ಮುಖಂಡನ ಮಗಳಾದ ಅಹಲ್ಯಾಬಾಯಿ ಹೋಳ್ಕರ ತಾಯಿಯದು ಹುಟ್ಟಿನಿಂದಲೆ ದೈವಿಕಭಾವದ, ಕಷ್ಟದಲ್ಲಿರುವವರನ್ನು ಕಂಡರೆ ಕರಗುವ ಭಾವದವರು.
ಚಿಕ್ಕಂದಿನಲ್ಲಿ ತನ್ನ ತಂದೆಯಿಂದಲೆ ಓದು-ಬರಹವನ್ನು ಕಲಿತ ಅಹಲ್ಯಾಬಾಯಿ ಮುಂದೆ ಹೋಳ್ಕರ್ ರಾಜ್ಯದ, ರಾಣಿಯಾಗಿ, ಆಡಳಿಗಾರ್ತಿಯಾಗಿ, ಎಲ್ಲಕ್ಕಿಂತ ಮಿಗಿಲಾಗಿ ದೇಗುಲಗಳ ಮರು ನಿರ್ಮಾಣಕಾರ್ತಿಯಾಗಿ ಇಡಿ ಭಾರತೀಯ ಚರಿತ್ರೆಯಲ್ಲಿ ಚಿರಸ್ಥಾಯಿಯಾಗಿ ನೆಲೆ ನಿಂತಿದ್ದಾರೆ.
ರಾಣಿಯಾಗಿ ಅಹಲ್ಯಾಬಾಯಿ:
ಕುಮಹಾರ್ ಯುದ್ದದಲ್ಲಿ ರಾಣಿ ಅಹಲ್ಯಾಬಾಯಿಯ ಗಂಡ ಖಂಡೆರಾವ್ ಹೋಳ್ಕರ್ ಮೋಘಲರ ಪರವಾಗಿ ಯುದ್ದ ಮಾಡುತ್ತಾನೆ. ಅಲ್ಲಿ ಜಾಟ್ ಸೇನೆಯೊಂದಿಗೆ ನಡೆದ ಮುಖಾಮುಖಿಯಲ್ಲಿ ಖಂಡೆರಾವ್ ತೆರೆದ ಪಲ್ಲಕ್ಕಿಯಲ್ಲಿ ಕುಳಿತು ತನ್ನ ಸೈನಿಕರನ್ನು ಹುರಿದುಂಬಿಸುತ್ತಿದ್ದಾಗ ಜಾಟ್ ಸೈನಿಕನೊಬ್ಬನ ಗುಂಡಿಗೆ ಬಲಿಯಾಗುತ್ತಾನೆ. ಈ ಘಟನೆ ಅಹಲ್ಯಾಬಾಯಿಯನ್ನು ವಿಧವೆಯಾಗಿ ಮಾಡಿತು.
ಆಗ ಪ್ರಚಲಿತದಲ್ಲಿದ್ದ ಸತಿ ಹೋಗುವದನ್ನು ಅಹಲ್ಯಾಬಾಯಿಯ ಮಾವ ಮಲ್ಹಾರ್ ರಾವ್ ತಡೆಯತ್ತಾನೆ. ಕಾರಣ ಅಹಲ್ಯಾಬಾಯಿಯಲ್ಲಿದ್ದ ನಾಯಕತ್ವದ ಗುಣ ರಾಜ್ಯಕ್ಕೆ ಅವಶ್ಯಕ ಎಂಬುದು ಅವನಿಗೆ ಗೊತ್ತಿತ್ತು. ಈ ಮೂಲಕ ಆತ ಭಾರತೀಯರಿಗೆ ಮಹದುಪಕಾರವನ್ನೆ ಮಾಡಿದನು ಎಂದು ಹೇಳಬಹುದು.
ಅಹಲ್ಯಾಬಾಯಿ ರಾಣಿಯಾಗಿ ಸಂಪೂರ್ಣ ಆಡಳಿತ ವಹಿಸಿಕೊಂಡ ಮೇಲೆ ರಾಜ್ಯದ ಪ್ರಗತಿಯ ದಿಕ್ಕೆ ಬದಲಾಯಿತು. ಸಣ್ಣ ಊರಾಗಿದ್ದ ಇಂದೋರ್ ರಾಜ್ಯದ ಪ್ರಸಿದ್ದ ನಗರವಾಗಿ ಬೆಳೆಯಲಾರಂಭಿಸಿತು. ಸತತ ಸ್ವಚ್ಛ ನಗರಿಯೆಂದು ಪ್ರಶಸ್ತಿ ಪಡೆದಿರುವ ಇಂದೋರ್ ನ ಕೀರ್ತಿ ರಾಣಿ ಅಹಲ್ಯಾಬಾಯಿಗೆ ಸಲ್ಲುತ್ತದೆ.
ಶಿವಪ್ರಿಯೆ ಹೋಳ್ಕರ್
ಮಾಹೇಶ್ವರದಲ್ಲಿರುವ ರಾಜಮಾತೆ ಅಹಲ್ಯಾಬಾಯಿ ಹೋಳ್ಕರ್ ಪ್ರತಿಮೆ.
ಅಹಲ್ಯಾಬಾಯಿ ಹೋಳ್ಕರ್ ಚಿಕ್ಕಂದಿನಿಂದಲೆ ದೈವ ಭಕ್ತಿ ಮೈಗೊಡಿಸಿಕೊಂಡವರು. ಮಹಾದೇವ ಶಿವ ಅವರ ಇಷ್ಟದೈವ. ತಮ್ಮ ಮೂವತ್ತು ವರುಷಗಳ ಆಡಳಿತದಲ್ಲಿ ಅವರು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಅಸಂಖ್ಯಾತ ದೇವಾಲಯಗಳನ್ನು ನಿರ್ಮಿಸಿದ್ದು ಅಲ್ಲದೆ ಮುಸ್ಲಿಮರ ಆಡಳಿತದಲ್ಲಿ ಧ್ವಂಸವಾಗಿದ್ದ ಅದೇಷ್ಟೋ ದೇಗುಲಗಳನ್ನು ಸಹ ಮರು ನಿರ್ಮಿಸಿದರು.
ಅವರು ಕಟ್ಟಿಸಿದ ಕಾರಂಜಿ ಕೆರೆಗಳು, ಅರವಟ್ಟಿಗೆಗಳು, ಧರ್ಮಛತ್ರಗಳಿಗೆ ಲೆಕ್ಕವಿಲ್ಲ.
ಕಾಶಿ ವಿಶ್ವೇಶ್ವರ ದೇವಾಲಯ:
ಅಹಲ್ಯಾಬಾಯಿ ಹೋಳ್ಕರ್ ಸುಮಾರು ಗುರುತರವಾದ ದೇವಾಲಗಳನ್ನು ನಿರ್ಮಿಸಿದ್ದಾರೆ. ಅವುಗಳಲ್ಲಿ ಅತ್ಯಂತ ಮುಖ್ಯವಾದುದು ಕಾಶಿ ವಿಶ್ವೇಶ್ವರ ದೇವಾಲಯ.
ದಾಳಿಕೋರ ಮೋಘಲರ ಅತ್ಯಂತ ಕುಖ್ಯಾತ ದೊರೆ ಔರಂಗಜೇಬನ ಬಗ್ಗೆ, ಆತನು ತನ್ನ ರಾಜ್ಯದ ಬಹುಸಂಖ್ಯಾತ ಹಿಂದುಗಳ ಮೇಲೆ ಎಸಗಿದ ದೌರ್ಜನ್ಯಗಳಿಗೆ ಲೆಕ್ಕವಿಲ್ಲ.
ಔರಂಗಜೇಬನಿಗೆ ಭಾರತವನ್ನು ಮುಸ್ಲಿಂ ರಾಜ್ಯವನ್ನಾಗಿ ಮಾಡುವ ಬಯಕೆ ಇತ್ತು. ಆದ್ದರಿಂದ ಬಹುಸಂಖ್ಯಾತ ಹಿಂದುಗಳ ಭಾವನೆಗೆ ಧಕ್ಕೆ ತರುವ ಎಲ್ಲ ವಿಧದ ಕೃತ್ಯವನ್ನು ನಿರ್ವಿಕಾರವಾಗಿ ಮಾಡುತ್ತಿದ್ದ. ಜ್ಞಾನಕ್ಕೆ ಹೆಸರಾದ ಕಾಶಿಯ ಪ್ರಖ್ಯಾತಿ ಔರಂಗಜೇಬನಿಗೆ ಕಣ್ಣಿಸುರಾಯಿತು. ಹಿಂದೂಗಳ ನಂಬಿಕೆಯಂತೆ ಕಾಶಿ ವಿಶ್ವೇಶ್ವರನ ದರ್ಶನ ಮಾತ್ರದಿಂದ ಮುಕ್ತಿಯುಂಟಾಗುವುದೆಂಬ ನಂಬಿಕೆ ಆತನಿಗೆ ಸಹ್ಯವಾಗದೆ ೧೬೬೯ ದೇಗುಲದ ನಾಶಕ್ಕೆ ಆದೇಶಿಸಿದ. ಅಲ್ಲದೆ ಅಲ್ಲಿಯೆ ಮಸೀದಿ ನಿರ್ಮಿಸಲು ಸಹ ಸೂಚಿಸಿದ.
ಆತನ ಆಜ್ಞೆಯಂತೆ ಅಲ್ಲನ ಪ್ರಖ್ಯಾತ ವಾರಣಾಸಿ ಪುರಪತಿಯ ದೇವಾಲಯ ನಾಶವಾಗಿ ಮಿನಾರುಗಳ ಮಸೀದಿ ಎದ್ದು ನಿಂತಿತು.
ಜ್ಞಾನವಾಪಿ ಮಸೀದಿ.ವಾರಣಾಸಿ
ದಿನಗಳು ಉರುಳಿದವು, ವರುಷಗಳು ಕಳೆದವು, ದಶಕಗಳೆ ಮುಗಿದರು ಸಹ ಕಾಶಿನಾಥನ ಅಜ್ಞಾತವಾಸ ಮಾತ್ರ ಮುಗಿಯಲಿಲ್ಲ..
ಯಾವ ಹಿಂದು ದೊರೆಯು ಸಹ ಎಲ್ಲಿ ಬಾದಶಹನ ಕೋಪಕ್ಕೆ ಈಡಾಗಬೇಕಾಗುವುದೊ ಎಂದು ಕಾಶಿ ವಿಶ್ವೇಶ್ವರನ ದೇವಾಲಯ ನಿರ್ಮಾಣ ಮಾಡಲಿಲ್ಲ.
ಆಗ ಬಂದವರೆ ತಾಯಿ ಸ್ವರೂಪಿಣಿ ಅಹಲ್ಯಾಬಾಯಿ ಹೋಳ್ಕರ್...
ಮೋಘಲ ಬಾದಶಹನು ಕೋಟ್ಯಾಂತರ ಹಿಂದುಗಳ ಆರಾಧ್ಯ ದೈವ ಕಾಶಿ ವಿಶ್ವೇಶ್ವರನಿಗೆ ಮಾಡಿದ ವಿಘ್ನವನ್ನು ಕೇಳಿತ್ತಾ ಬೆಳೆದಿದ್ದ ಅಹಲ್ಯಾಬಾಯಿಗೆ ಅಲ್ಲಿ ಮತ್ತೆ ಶಿವನ ದೇಗುಲ ಕಟ್ಟಿಸಿ ಪೂಜೆ ನಿರ್ವಿಘ್ನವಾಗಿ ನಡೆಯುವಂತೆ ಮಾಡಿದರು.
ಇಂದು ನಾವೆಲ್ಲರೂ ದರ್ಶನಗಯ್ಯುವ ಕಾಶಿ ದೇವಾಲಯ ನಿರ್ಮಾಣವಾದ್ದೆ ಈ ಸಿಂಹಿಣಿಯಿಂದ.

ಮಾತೆ ಅಹಲ್ಯಾಬಾಯಿ ಕೇವಲ ವಾರಣಾಸಿ ದೇವಾಲಯ ಮಾತ್ರವೆ ನಿರ್ಮಿಸಲಿಲ್ಲ. ಬದಲಿಗೆ ದೇಶದುದ್ದಕ್ಕೂ ಸಹಸ್ರಾರು ದೇವಾಲಗಳನ್ನು ನಿರ್ಮಿಸಿದರು.
ಕೆಲವು ದೇವಾಲಗಳು..
೧.ಅಮರಕಂಟಕದಲ್ಲಿ ವಿಶ್ವನಾಥ ದೇವಾಲಯ.
೨.ಅಯೋಧ್ಯೆಯಲ್ಲಿ ಶ್ರೀ ನಾಗೇಶ್ವರ ದೇವಾಲಯ
೩.ಬದ್ರಿನಾಥದಲ್ಲಿ ಬದ್ರಿನಾಥ ದೇವಾಲಯ.
೪.ಕರ್ನಾಟಕದ ಬೇಲುರಿನಲ್ಲಿ ಗಣಪತಿ ಮತ್ತು ಪಾಂಡುರಂಗ ದೇವಾಲಯ
೫. ಭರತಪುರದಲ್ಲಿ ಶಿವಧರ್ಮಶಾಲೆ.(ಅನ್ನಛತ್ರ)
೬.ಗಂಗೋತ್ರಿಯಲ್ಲಿ ವಿಶ್ವನಾಥ ದೇವಾಲಯ
೭.ಘ್ರೀಸ್ಣೇಶ್ವರದಲ್ಲಿ ಶಿವ ದೇವಾಲಯ
೮.ಹರಿಯಾಣದ ಕುರುಕ್ಷೇತ್ರದಲ್ಲಿ ಶಿವಶಾಂತ ದೇವಾಲಯ.
೯.ಮಮ್ಲೇಶ್ವರದಲ್ಲಿ ಶಿವ ದೇವಾಲಯ
೧೦.ಉಜ್ಜೈನಿಯಲ್ಲಿ ಸುಮಾರು ದೇವಾಲಯಗಳು.
ರಾಜಮಾತೆ ಅಹಲ್ಯಾಬಾಯಿ ಹೋಳ್ಕರ್ ಭಾರತೀಯರಿಗೆ ನಿಜವಾಗಿಯು ದೈವಿಕ ಕೋಡುಗೆ. ಅವರು ದೇವಾಲಯಗಳನ್ನು ನಿರ್ಮಾಣ ಮಾಡುವ ಮೂಲಕ ಭಾರತೀಯ ಅದ್ಯಾತ್ಮಿಕ ಪರಂಪರೆಯ ಧಾರೆ ನಿರಂತರವಾಗಿರುವಂತೆ ಮಾಡಿದ್ದಾರೆ. ಅವರಿಗೊಂದು ಗೌರವಪೂರ್ಣ ನಮನ.
ಇತಿಹಾಸ ಅಧ್ಯಯನ ಭವಿಷ್ಯ ವನ್ನು ರೂಪಿಸುತ್ತದೆ. ಅರಿಯದವನು ಮತ್ತೆ ಸೋಲುತ್ತಾನೆ.
ಮಾತೋಶ್ರಿ ರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರ ಜನ್ಮಜಯಂತಿಯ ಶುಭ ಹಾರೈಕೆಗಳು.
💐💐💐💐💐💐💐💐💐💐💐💐💐💐
ಸಕಾಲಿಕ ಬರೆಹ. ಹೀಗೆ ಬರೆಯುತ್ತಾ, ಬೆರೆಯುತ್ತಾ, ಬೆಳೆಯುತ್ತಾ ಇರಿ.
ಪ್ರತ್ಯುತ್ತರಅಳಿಸಿನಿಮ್ಮ ಪ್ರತಯತ್ತರ ನಮಗೆ ಸಾಕಷ್ಟು ಬಲ ನೀಡಿದೆ.. ಆದರೆ, ಬರೆಯುವುದು ಬಹಳಷ್ಟಿಗೆ ಗುರುಗಳೆ...🙏
ಪ್ರತ್ಯುತ್ತರಅಳಿಸಿಅತ್ಯಂತ ಸುಂದರವಾಗಿ ಬರೆದ್ದಿದೀರಾ ಸರ್ . ತಾಯಿಯ ಬಗ್ಗೆ ಹಲವಾರು ವಿಷಯಗಳು ತಿಳಿದವು
ಪ್ರತ್ಯುತ್ತರಅಳಿಸಿಧನ್ಯವಾದಗಳು...ಜೀ.😊
ಅಳಿಸಿGood information brother.....
ಪ್ರತ್ಯುತ್ತರಅಳಿಸಿThank you...stay Home, stay Safe.
ಅಳಿಸಿ