ಮಾನಸಿಕ ಒತ್ತಡ : ಸನ್ನಿವೇಶಗಳು ಮತ್ತು ನಿರ್ವಹಣೆ
ಮಾನಸಿಕ ಒತ್ತಡ :- ಸನ್ನಿವೇಶಗಳು ಮತ್ತು ದೇಹದ ಮೇಲೆ ಪ್ರಭಾವ.
ಎರಡು ದಿನಗಳ ಹಿಂದೆ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ಸುದ್ದಿ ಕೇಳಿ ತೀವ್ರ ಆಘಾತವಾಯಿತು. ೩೫ ರ ಹರೆಯದ ಶಿಕ್ಷಕರೊಬ್ಬರು ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರಿಗೆ ವುಹಾನ್ ವೈರಸ್ ಅಂದರೆ ಕೋವಿಡ್-೧೯ ರ ಸೊಂಕು ತಗುಲಿತ್ತು. ಮೂಲಗಳ ಪ್ರಕಾರ ಸೊಂಕು ಅವರಿಗೆ ತಗುಲಿದ್ದರೂ ಸಹ ಅವರು ಗುಣಮುಖರಾಗುವ ಸಾಧ್ಯತೆಗಳು ಬಹಳಷ್ಟಿದ್ದವು. ವೈದ್ಯರು ಮತ್ತು ಕೋವಿಡ್ ಆಪ್ತ ಸಮಾಲೋಚಕರು ಅವರಿಗೆ ಧೈರ್ಯ ಹೇಳಿದರು ಸಹ ಅವರು ಮಾನಸಿಕವಾಗಿ ತೀವ್ರ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆಯಂತಹ ದಾರಿ ಹಿಡಿದಿದ್ದರು, ಅವರು ಶಿಕ್ಷಕರಾಗಿದ್ದರು ಎಂಬುದು ಇನ್ನೊಂದು ಸಹಿಸಲಾರದ ಅಂಶವಾಗಿತ್ತು.
ಶಿಕ್ಷಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಸುದ್ದಿ.
ಶಿಕ್ಷಣ, ಮೌಲ್ಯಗಳು ಮತ್ತು ನಾಗರಿಕತೆಯನ್ನು ಕಲಿಸುವ ಶಿಕ್ಷಕರೆ ಇಷ್ಟೊಂದು ಧೈರ್ಯಗೆಟ್ಟರೆ ಮಕ್ಕಳಿಗೆ ನಾವು ಇನ್ನೆಂತಹ ಶಿಕ್ಷಣ ನೀಡಬಹುದು??? ಎನ್ನವುದೊಂದು ಪ್ರಶ್ನೆಯಾದರೆ, ಆತ್ಮಹತ್ಯೆಯಂತಹ ಕನಿಷ್ಟತಮ ಕೃತ್ಯಕ್ಕೆ ಪ್ರೇರೆಪಿಸುವ ಒತ್ತಡ ನಿವಾರಣೆ ಇನ್ನೊಂದು ಮುಖ್ಯವಾದ ಸವಾಲಾಗಿ ನಿಂತಿದೆ.
ನಾವೆಲ್ಲರೂ ನಮ್ಮ ಜೀವನದ ಒಂದಿಲ್ಲೊಂದು ಸಂದರ್ಭದಲ್ಲಿ ನಮ್ಮ ಅಸ್ತಿತ್ವಕ್ಕೆ ಮೀರಿದ ಒತ್ತಡವನ್ನು ಅನುಭವಿಸುತ್ತೆವೆ. ಇದು ನಮ್ಮ ಸುತ್ತಮುತ್ತಲಿನ ಪರಿಸರ, ನಾವು ಮಾಡುವ ಕೆಲಸಗಳು, ಇಲ್ಲವೆ ನಮ್ಮ ಜೀವನ ವಿಧಾನದ ಮೂಲಕ ಮೂಡಬಹುದು.
ಆದರೆ ಮಾನಸಿಕ ಒತ್ತಡ ವುಹಾನ್ ವೈರಸ್ ಅಥವಾ ಸಾಮನ್ಯವಾಗಿ ನಾವು ಕೊರೊನಾ ವೈರಸ್ ಎಂದು ಕರೆಯಲ್ಪಡುವ ಈ ಕಾಲಘಟ್ಟದಲ್ಲಿ ಹೆಚ್ಚು ಹೆಚ್ಚು ಕಂಡುಬರುತ್ತಿದೆ. ಮೊದಲೆಲ್ಲ ವಯಸ್ಸಾದವರು, ಮಧ್ಯವಯಸ್ಕರಲ್ಲಿ ಕಂಡು ಬರುತ್ತಿದ್ದ ವೈರಸ್ ಇತ್ತಿಚಿಗೆ ಮಕ್ಕಳಲ್ಲಿ ಸಹ ಕಂಡು ಬಂದು ಅವರನ್ನು ಖಿನ್ನತೆಗೆ ದೂಡುತ್ತಿದೆ. ಇದು ಸರ್ವರಿಗೂ ಎಚ್ಚರಿಕೆಯ ಗಂಟೆ ಎಂದೆ ಹೇಳಬಹುದು. ನಾಳಿನ ಭವಿಷ್ಯವನ್ನು ಕಟ್ಟುವ ಮಕ್ಕಳು ಮತ್ತು ಅವರನ್ನು ತಯಾರು ಮಾಡುವ ಶಿಕ್ಷಕರೆ ಒತ್ತಡಕ್ಕೆ ಒಳಗಾಗುವ ವಿಷಯಯವಂತೂ ಆಲೋಚಿಸತಕ್ಕ ವಿಷಯವೆ ಹೌದು.
ಸಾಮಾನ್ಯವಾಗಿ ಬದುಕಿನಲ್ಲಿ ಒತ್ತಡ ಉಂಟಾಗುವುದು ನಮ್ಮ ಕೆಲಸ-ಕಾರ್ಯಗಳ ಅಸಮರ್ಪಕ ಮತ್ತು ದೂರಾಲೋಚನೆಯಿಲ್ಲದ ನಿರ್ವಹಣೆಯಿಂದ. ಮಳೆಗಾಲದಲ್ಲಿ ಮನೆ ಸೊರುತ್ತದೆ ಎಂದು ಗೊತ್ತಿದ್ದು, ಇಡಿ ಬೇಸಿಗೆಯಲ್ಲಿ ಅದನ್ನು ರಿಪೇರಿ ಮಾಡದೆ ಇದ್ದರೆ ಮಳೆಗಾಲದಲ್ಲಿ ಮನೆ ಸೊರುವುದು ಸಹ ತಾನೆ. ಒತ್ತಡವು ಇದೆ ಮಾದರಿಯಲ್ಲಿ ಬರುತ್ತದೆ.
ಮನಸೆ ಎಲ್ಲ ರೋಗ ಮತ್ತು ನಿರೋಗದ ಮೂಲ ಎಂದು ತಿಳಿದೆ ಇದೆ. ಈಗ ಕೋವಿಡ್ ಸಂಕಷ್ಟದ ಸಮಯದಲ್ಲಿ ಸಹ ಈ ಅಂಶವೆ ಪ್ರಧಾನವಾಗಿ ಕಂಡುಬರುತ್ತಿದೆ.
ದೇಹದ ಮೇಲೆ ಮಾನಸಿಕ ಒತ್ತಡದ ಪರಿಣಾಮಗಳು :~
ಮೊದಲಿಗೆ ಮಾನಸಿಕ ಒತ್ತಡದಿಂದ ನಮ್ಮ ದೇಹದ ಮೇಲೆ ಯಾವ ಯಾವ ಪರಿಣಾಮಗಳು ಉಂಟಾಗುತ್ತವೆ ಎಂಬುದನ್ನು ಗಮನಿಸೋಣ.
ನಾವು ಒತ್ತಡಕ್ಕೆ ಒಳಗಾದಾಗ ನಮ್ಮ ನರಮಂಡಲ ತಕ್ಷಣವೆ ಅಡ್ರಿನಲಿನ್, ನೋರಾಡ್ರಿನಲಿನ್ ಮತ್ತು ಕಾರ್ಟಿಸೋಲ್ ಗಳನ್ನು ಒಳಗೊಂಡಂತೆ ಕೆಲವೊಂದು ರಾಸಾಯನಿಕ ಕಿಣ್ವಗಳನ್ನು ಬಿಡುಗಡೆ ಮಾಡುತ್ತದೆ. ಇವುಗಳು ನಮ್ಮಲ್ಲಿ ಮನೋದೈಹಿಕ ಬದಲಾವಣೆಗಳು ತರುತ್ತವೆ.
ಶೃಂಗಾರ ಅಥವಾ ಭಯದ ತಾತ್ಕಾಲಿಕ ಒತ್ತಡದ ನಂತರ ನಮ್ಮ ದೇಹ ಸಹಜ ಸ್ಥಿತಿಗೆ ಮರಳುತ್ತದೆ. ಮತ್ತು ನಾವು ಉಲ್ಲಾಸಿತರಾಗುತ್ತೆವೆ. ಅದು ಉತ್ತಮವೆ, ಆದರೆ ಒತ್ತಡವು ಮರಳಿ ಸಹಜ ಸ್ಥಿತಿಗೆ ಬರದೆ ಬಹಳಷ್ಟು ಸಮಯ ಅಥವಾ ದಿನಗಳ ಕಾಲ ಹಾಗೆ ಇದ್ದರೆ ನಮ್ಮ ದೇಹ ಅಕ್ಷರಶಃ ಬಟ್ಟೆಯಂತಾಗಿ, ಬಳಸು ಮತ್ತು ಬಿಸಾಡು ಎಂಬಂತೆ ಆಗುತ್ತದೆ.
ಇದರಿಂದ ದೇಹದ ನರಮಂಡಲ, ಹೃದಯದ ಕಾರ್ಯಗಳಲ್ಲಿ ವಿಪರೀತ ಬದಲಾವಣೆಗಳು ಉಂಟಾಗಿ ನಾವು ನಮ್ಮ ದೇಹದ ನಿಸರ್ಗದತ್ತ ರಕ್ಷಾ ಕವಚವನ್ನು ನಾವೆ ಹಾಳು ಮಾಡಿಕೊಳ್ಳುತ್ತೆವೆ.
ಉಸಿರಾಟದ ಮೇಲೆ ಒತ್ತಡದ ಪರಿಣಾಮ:-
ನಾವು ಒತ್ತಡಕ್ಕೆ ಒಳಗಾದಾಗ ಮೊಟ್ಟ ಮೊದಲಿಗೆ ಬಲಿಯಾಗುವುವ ಅಂಗವೆಂದರೆ ಶ್ವಾಸಕೋಶಗಳು. ನೀವು ಗಮನಿಸಿರಬಹುದು, ನಮಗೆ ಕೋಪ, ಸಿಟ್ಟು, ಆಕ್ರೋಶ ಅಥವಾ ಆಂತರ್ಯದ ದ್ವೇಷ ಸ್ಪೋಟಗೊಂಡಾಗ ನಮ್ಮ ಉಸಿರಾಟ ಪ್ರಕ್ರಿಯೆ ವಿಪರೀತವಾಗಿ ಬದಲಾಗುತ್ತದೆ. ಆಮ್ಲಜನಕಯುಕ್ತ ರಕ್ತವು ದೇಹಕ್ಕೆ ಹೆಚ್ಚಿನ ಅವಶ್ಯಕತೆ ಇರುವುದರಿಂದ ನಾವು ಬೇಗ ಬೇಗ ಉಸಿರಾಡುತ್ತೆವೆ. ಇದರಿಂದ ಶ್ವಾಸಾಂಗ ವ್ಯೂಹದ ಮೇಲೆ ಹೆಚ್ಚಿನ ಭಾರ ಬಿದ್ದು ಶ್ವಾಸಕೋಶಗ ಕಾರ್ಯದಕ್ಷತೆ ಕುಸಿಯುತ್ತದೆ. ಒಂದು ವೇಳೆ ವ್ಯಕ್ತಿಯು ಈಗಾಗಲೆ ಕೋವಿಡ್ ವೈರಸ್ ಗೆ ತುತ್ತಾಗಿದ್ದೆ ಆದರೆ ಅವನ ಉಸಿರಾಟ ಪ್ರಕ್ರಿಯೆ ವ್ಯತಿರಿಕ್ತವಾಗಿ ಆಮ್ಲಜನಕದ ಪೂರೈಕೆ ಕಡಿಮೆಯಾಗಿ ಸಾವು ಸಂಭವಿಸುವ ಸಾಧ್ಯತೆಗಳು ಇರುತ್ತವೆ.
ಇಂತಹ ಸಂಧರ್ಭದಲ್ಲಿ ವ್ಯಕ್ತಿಯು ಸಾದ್ಯವಾದಷ್ಟರ ಮಟ್ಟಿಗೆ ನಿರಾತಂಕದಿಂದ ದೀರ್ಘ ಉಸಿರಾಟವನ್ನು ಮಾಡುತ್ತಿರಬೇಕು. ಅದಲ್ಲದೆ ಶ್ವಾಸಕೋಶಗನ್ನು ಬಲಗೊಳಿಸುವ ಪ್ರಾಣಾಯಾಮಗಳನ್ನು ಮಾಡುವುದರೆ ಮೂಲಕ ಸಹ ಇದರಿಂದ ಮುಕ್ತಿ ಪಡೆಯಬಹುದು.
ನಮ್ಮ ರೋಗ ನಿರೋಧತೆಯನ್ನು ಕಡಿಮೆ ಮಾಡುತ್ತದೆ :-
ಪದೆ ಪದೆ ಒತ್ತಡಕ್ಕೆ ಒಳಗಾಗುವವರಲ್ಲಿ ರೋಗ ನಿರೋಧಕತೆ ಕುಸಿಯುತ್ತದೆ. ಇದರಿಂದ ವ್ಯಕ್ತಿಯು ಇತರ ರೋಗಗಳಿಗೆ ಸುಲಭವಾಗಿ ತುತ್ತಾಗುತ್ತಾನೆ.
ಉದಾಹರಣೆಗೆ ಬಿಸಿಲಲ್ಲಿ ಬಿದ್ದ ಹಗ್ಗವು ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ ಅಲ್ಲದೆ ಬಲು ಬೇಗ, ಕಡಿಮೆ ಬಲಪ್ರಯೋಗಕ್ಕೆ ತುಂಡಾಗಿ ಬಿಡುತ್ತದೆ. ಹಾಗೆ ನಾವು ಒತ್ತಡಕ್ಕೆ ಒಳಗಾಗದಾಗ ನಮ್ಮ ದೇಹವು ಸಹ ಇದೆ ಮಾದರಿಯಲ್ಲಿ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ.
ಸಕ್ಕರೆ ಕಾಯಿಲೆಗೆ ಕಾರಣ :- ಒತ್ತಡದಿಂದ ನಿರಂತರವಾಗಿ ಬಳಲುವ ವ್ಯಯಕ್ತಿಗಳು ಸಕ್ಕರೆ ಕಾಯಿಲೆಯ ಸಮಸ್ಯೆಯನ್ನು ಎದುರಿಸುತ್ತಾರೆ, ಸಕ್ಕರೆ ಕಾಯಿಲೆ ದೈಹಿಕವಾಗಿ ಕಡಿಮೆ ಚಟುವಟಿಕೆಯಿಂದ ಬರುತ್ತದೆ ಎಂದು ತಿಳಿದರೂ ಇದರ ಮೂಲ ಮಾನಸಿಕ ಒತ್ತಡದಲ್ಲಿ ಅಡಗಿದೆ.
ಒತ್ತಡಕ್ಕೆ ಒಳಗಾದಷ್ಟೂ, ನಮ್ಮ ಪಚನಕ್ರೀಯೆಯು ಸಹ ಸರಿಯಾಗಿ ಆಗದೆ ತೆಗೆದುಕೊಂಡ ಊಟ ಅಜೀರ್ಣದಂತಹ ಉದರ ಸಂಬಂಧ ರೋಗಗಳಿಗೆ ಕಾರಣವಾಗುತ್ತದೆ.
ಚಿಕ್ಕವಯಸ್ಸಿನಲ್ಲೇ ಒತ್ತಡಕ್ಕೆ ಒಳಗಾಗುವುದರಿಂದ ದೈಹಿಕ ಬೆಳವಣಿಗೆಗೆ ಅವಶ್ಯಕತೆ ಇರುವ ಗ್ರಂಥಿಗಗಳು ರಾಸಾಯನಿಕ ರಸಗಳನ್ನು ಸರಿಯಾಗಿ ಸ್ರವಿಕೆ ಮಾಡದೆ ಮನೋದೈಹಿಕ ವಿಕಲ್ಪಕಗಳಿಗೆ ಇವು ಕಾರಣವಾಗಿ ಬಿಡುತ್ತವೆ.
ಇನ್ನೂ ಹಿರಿಯರಲ್ಲಿ ಈ ಗ್ರಂಥಿಗಳು ದೇಹವನ್ನು ಸಮಸ್ಥಿತಿಯಲ್ಲಿ ಇಡಲು ಸಹಾಯ ಮಾಡುತ್ತವೆ. ಆದರೆ ಒತ್ತಡದಿಂದ ಎರುಪೇರಾದರೆ ಸಮಸ್ಯೆಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ.
ಇನ್ನೊಂದು ಗಮನಿಸತಕ್ಕ ಅಂಶವೆಂದರೆ, ನಿರಂತರ ಒತ್ತಡ ಪುರುಷ ಮತ್ತು ಸ್ತೀ ಇರ್ವರಲ್ಲೂ ಬಂಜೆತನಕ್ಕೆ ಕಾರಣವಾಗುತ್ತದೆ. ಪುರುಷರಲ್ಲಿ ನಿಮಿರುವಿಕೆ ಮತ್ತು ಸೂಕ್ತ ಪ್ರಮಾಣದ ವೀರ್ಯದ ಉತ್ಪಾದನೆ ಸಮಸ್ಯೆಗೆ ಕಾರಣವಾದರೆ, ಸ್ತ್ರೀಯರಲ್ಲಿ ಇದು ಋತುಚಕ್ರದ ಎರುಪೇರಿನಿಂದ ಬಂಜೆತನಕ್ಕೆ ಕಾರಣವಾಗುತ್ತದೆ.
ಹೃದಯದ ಮೇಲೆ ಒತ್ತಡದ ಪರಿಣಾಮ :-
ಒತ್ತಡದಿಂದ ಮನುಷ್ಯನ ದೇಹ ಬಹುತೇಕ ಎಲ್ಲಾ ಭಾಗಗಳು ಸಮಸ್ಯಗೆ ತುತ್ತಾಗುತ್ತವೆ.. ಆದರೆ ದೇಹದ ಜೀವಂತಿಕೆಯ ಸಂಕೇತವೆಂದೆ ಕರೆಯಬಹುದಾದ ಹೃದಯದ ಮೇಲೆ ಒತ್ತಡದ ಪರಿಣಾಮ ಬಹು ಘೋರ. ಹೃದಯಾಘಾತಕ್ಕೆ ಒಳಗಾಗುವ ಪುರುಷರಲ್ಲಿ ಪ್ರತಿಶತ ಮಂದಿ, ಒತ್ತಡಕ್ಕೆ ಒಳಗಾದವರೆ ಆಗಿರುತ್ತಾರೆ ಎಂದು ಸಮೀಕ್ಷೆಯೊಂದು ಹೇಳಿದೆ. ಮತ್ತು ಇದರ ಪ್ರಮಾಣ ನಗರಕೇಂದ್ರಿತ ಭಾಗಗಳಲ್ಲಿ ಜಾಸ್ತಿ ಎಂದು ಸಹ ಅಂಕಿ ಅಂಶಗಳು ಸೂಚಿಸುತ್ತವೆ. ಪದೆ ಪದೆ ಒತ್ತಡವನ್ನು ಎದುರಿಸುವ ವ್ಯಕ್ತಿ ಮಾನಸಿಕ ಖಿನ್ನತೆಗೆ ಒಳಗಾಗುತ್ತಾನೆ. ಹೃದಯ ಸಂಭಂಧಿ ರೋಗಗಳಿಗೆ ಈ ಮಾನಸಿಕ ಖಿನ್ನತೆ ಮೂಲ.
ಮೆದುಳಿಗೆ ಒತ್ತಡದ ಪ್ರಭಾವ ಮತ್ತು ಸಮಸ್ಯೆಗಳು :-
ಒತ್ತಡದ ಅತಿಘೋರ ಪರಿಣಾಮ ಅನುಭವಿಸುವುದು ನಮ್ಮ ಮೆದುಳು. ಇದು ನಮ್ಮ ದೇಹದ ಎರಡನೆಯ ಅತಿಮುಖ್ಯ ಅಂಗವಾದರೂ ಇದರ ಕಾರ್ಯಚಟುವಟಿಕೆ ಅಗಾಧ. ಆದರೆ ಇದೆ ಒಂದು ವೇಳೆ ಒತ್ತಡಕ್ಕೆ ಒಳಗಾದರೆ ನಮ್ಮ ದೇಹ ತುಂಬ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
ಮಾನಸಿಕವಾಗಿ ಒತ್ತಡದ ಎರಡು ಮುಖ್ಯ ಲಕ್ಷಣಗಳು ಹೀಗಿರುತ್ತವೆ:-
೧. ಉದ್ವಿಗ್ನತೆ : ಒತ್ತಡ ನಮ್ಮಲ್ಲಿ ಉದ್ವಿಗ್ನತೆಯನ್ನು ಹುಟ್ಟಿಸುತ್ತದೆ, ಎನಾಗುವುದೊ ಎಂಬ ಹೆದರಿಕೆಯಿಂದ ಮನುಷ್ಯ ಬಸವಳಿಯುತ್ತಾನೆ. ಆತನಲ್ಲಿ ಸ್ವಾಭಾವಿಕವಾಗಿ ಇರುವ ಆಲೋಚನಾ ಶಕ್ತಿ ಕುಸಿದು ಭಯ ಬಿಳುತ್ತಾನೆ. ಉದ್ವಿಗ್ನತೆ ಇದರಿಂದ ಆತನು ದೈನಂದಿನ ಕಾರ್ಯ ಚಟುವಟಿಕೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗದೆ ಮತ್ತಷ್ಟು ಸಮಸ್ಯೆಗೆ ಒಳಗಾಗುತ್ತಾನೆ.
ಉದ್ವಿಗ್ನತೆ ಭಾವನೆಗಳ ಮೇಲಿನ ಹಿಡಿತವನ್ನು ತಪ್ಪಿಸಿ ಆತ ಅನಾವಶ್ಯಕವಾಗಿ ಆಲೋಚಿಸುವಂತೆ ಮಾಡುತ್ತದೆ ಮತ್ತು ಆತನನ್ನ ಸ್ವಭಾವದಲ್ಲಿ ಬದಲಾವಣೆ ಉಂಟುಮಾಡುತ್ತದೆ.
ದಿನನಿತ್ಯದಂತೆ ಅವರು ಕಂಡುಬರುವುದಿಲ್ಲ. ಅನ್ಯಮನಸ್ಕರಾಗಿ ಇರುತ್ತಾರೆ ಇಲ್ಲವೆ ಬಾಯಿಗೆ ಬಂದದ್ದನ್ನು ಬಡಬಡಿಸುತ್ತಿರುತ್ತಾರೆ.
೨.ನಿದ್ರಾಹೀನತೆ: ಮನುಷ್ಯನು ಮಾನಸಿಕ ಮತ್ತು ದೈಹಿಕ ವಿರಾಮ ಹೊಂದಲು ನಿದ್ರೆ ಪ್ರಕೃತಿದತ್ತವಾದ ವರ. ಇದು ನಿಜಕ್ಕೂ ಅದ್ಬುತವಾದದು. ಸಾಮಾನ್ಯವಾಗಿ ೭ಗಂಟೆ ನಿದ್ರೆ ಬೇಕೆ ಬೇಕು. ಆದರೆ ಒತ್ತಡಕ್ಕೆ ಒಳಗಾದಾಗ ನಿದ್ರೆ ಮಾಡಲು ಅಸಮರ್ಥತೆ ಕಂಡು ಬರುತ್ತದೆ. ಇದರಿಂದ ದೇಹದಲ್ಲೆ ಇರುವ ಜೈವಿಕ ಗಡಿಯಾರ (ಚಕ್ರ) ಎರುಪೇರಾಗಿ ಇನ್ನಿತರ ಸಮಸ್ಯಗಳು ಹುಟ್ಟಿಕೊಳ್ಳುತ್ತವೆ. ಅಕಸ್ಮಾತ ನಿಮಗೆ ನಿದ್ರೆ ಮಾಡಲು ಅಸಮರ್ಥತೆ ಕಂಡು ಬರುತ್ತಿದ್ದರೆ ನೀವು ನಿಮಗರಿವಿಲ್ಲದಂತೆ ಒತಗತಡಕ್ಕೆ ಒಳಗಾಗಿದ್ದಿರಿ ಎಂತಲೆ ಅರ್ಥ. ಅದನ್ನು ಅಲಕ್ಷ್ಯ ಮಾಡುವುದು ಒಳಿತಲ್ಲ.
ಇವೆಲ್ಲವುಗಳಿಗಿಂತ ಮೀರಿ, ಒತ್ತಡಕ್ಕೆ ಒಳಗಾಗುವುದರಿಂದ ಇನ್ನೊಂದು ದೊಡ್ಡ ಸಮಸ್ಯೆ ಎನೆಂದರೆ, ಆತ್ಮನಿರ್ಭರವಿಲ್ಲದವರು, ದೃಡತೆಯ ವ್ಯಕ್ತಿತ್ವ ಹೊಂದಿಲ್ಲದವರು ಅಥವಾ ಕುಟುಂಬ ಮತ್ತು ಸ್ನೇಹಿತರ ಜೊತೆ ಉತ್ತಮ ಆರೋಗ್ಯಕರ ಸಂಬಂಧ ಹೊಂದಿಲ್ಲದೆ ಇರುವವರು ಅಪಾಯಕಾರಿ
ವ್ಯಸನಗಳಾದ ಮದ್ಯಸೇವನೆ, ಮತ್ತು ಬರಿಸುವ ಔಷಧಿಗಳ ಸೇವನೆ, ಮತ್ತು ಆತ್ಮಹತ್ಯಿಯ ಕಾರಕ ಆಲೋಚನೆಗಳಿಗೆ ಒಳಗಾಗುವ ಸಾದ್ಯತೆಗಳು ವಿಪರೀತವಾಗಿರುತ್ತವೆ. ಇಂತಹವರನ್ನು ಸಾದ್ಯವಾದಷ್ಟರ ಮಟ್ಟಿಗೆ ಎಚ್ಚರಿಕೆಯಿಂದ ಮತ್ತು ನಿಜವಾದ ಪ್ರೀತಿಯಿಂದ ನೋಡಿಕೊಳ್ಳಬೇಕು.
ಈ ಎಲ್ಲಾ ಕಾರಣದಿಂದಾಗಿ ಒತ್ತಡ ನಿರ್ವಹಣೆಯನ್ನು ಕಲಿಯುವುದು ಬಲು ಮುಖ್ಯ. ಒತ್ತಡ, ಉದ್ವೇಗ ನಮ್ಮನ್ನು ಹಾಳು ಮಾಡುವುದಕ್ಕಿಂತ ನಾವೆ ಉತ್ತಮ ಜೀವನ ಶೈಲಿ ಮತ್ತು ಅರೋಗ್ಯಕರ ಹವ್ಯಾಸಗಳಿಂದ ಅದನ್ನು ದೂರ ಮಾಡುವುದು ತುಂಬ ಉತ್ತಮವಾಗಿ ಇರುತ್ತದೆ...
ಈ ಒತ್ತಡ ನಿರ್ವಹಣೆ ಮತ್ತು ಹವ್ಯಾಸಗಳನ್ನು ಮುಂದಿನ ಭಾಗದಲ್ಲಿ ತಿಳಿಯಬಹುದು.
ಸಮಭಾವ ಸಮಜೀವದ ಸಮಾಜಕ್ಕಾಗಿ ನಮ್ಮೊಳಗೊಂದು ಅಂತರಂಗದ ಚಳುವಳಿ.
🖋 ನಾಗೇಶ ಮುದ್ದಾಳೆ..
ಸಾವೊಂದೇ ಸಮಸ್ಯೆ ಗೆ ಪರಿಹಾರವಲ್ಲ.. ಆರೋಗ್ಯ ಕರ ಹವ್ಯಾಸಗಳು.. ಮಾನಸಿಕಸ್ಥಿರತೆ.. ಸಕಾರಾತ್ಮಕ ಆಲೋಚನೆಗಳು.. ನಮ್ಮ ದೈಹಿಕ & ಮಾಸಿಕ ಆರೋಗ್ಯ ಕಾಪಾಡುತ್ತವೆ
ಪ್ರತ್ಯುತ್ತರಅಳಿಸಿತುಂಬಾ ಉಪಯುಕ್ತ ಮಾಹಿತಿ.... ಮುದ್ದಾಳೆಯವರಲ್ಲೊಬ್ಬ ಮನಃಶಾಸ್ತ್ರಜ್ಞಾನನ್ನು ಕಾಣುವಂತಾಯಿತು....
ಅಳಿಸಿಧನ್ಯವಾದಗಳು ಗಿರೀಶ್ ಕೌಟಿಲ್ಯ ಅವರೆ.
ಅಳಿಸಿಈವಾಗಿನ ಪರಿಸ್ಥಿತಿ ಗೆ ಸೂಕ್ತವಾದ ಲೇಖನ👌
ಪ್ರತ್ಯುತ್ತರಅಳಿಸಿಗುರುತಿಸಿದ್ದಕ್ಕಾಗಿ ಧನ್ಯವಾದಗಳು..
ಅಳಿಸಿNice.
ಪ್ರತ್ಯುತ್ತರಅಳಿಸಿThank You.
ಅಳಿಸಿಆಧುನಿಕ ಜೀವನ ಶೈಲಿಯಿಂದ ಹಲವೂ ಜನರ ಸ್ಥಿತಿ ಹೀಗೆ ಆಗಿದೆ
ಪ್ರತ್ಯುತ್ತರಅಳಿಸಿಖಂಡಿತ...
ಅಳಿಸಿ