ಪೋಸ್ಟ್‌ಗಳು

ವಿಕೇಂದ್ರಿಕರಣ ಮತ್ತು ಪ್ರಬಲ ಪ್ರಜಾಪ್ರಭುತ್ವ

ಇಮೇಜ್
ಅಧಿಕಾರ ಮತ್ತು ಅದರ ವಿಕೇಂದ್ರೀಕರಣ ಕಳೆದ ಕೆಲವು ದಿನಗಳಿಂದ ನಮ್ಮ ಸುತ್ತಲಿನ ಬಹುರಾಷ್ಟ್ರೀಯ ಸ್ತಿತ್ಯಂತರಗಳನ್ನು ಗಮನಿಸುವಾಗ ಒಂದು ಅಂಶ ಬಹು ಸ್ಪಷ್ಟವಾಗಿ ಗೋಚರಿಸುತ್ತಿದೆ. ನಮ್ಮ ಭಾರತದಲ್ಲಿ ಪ್ರಜಾಪ್ರಭುತ್ವ  ಬಹು ಬಲಿಷ್ಠವಾದ ಸ್ಥಾನವನ್ನು ಹೊಂದಿದೆ. ನಮ್ಮ ಸೇನೆ ಇಡಿ ಜಗತ್ತಿನಲ್ಲಿ ನಾಲ್ಕನೆಯ ಅತಿ ದೊಡ್ಡದಾದ ಸೇನೆಯಾಗಿದ್ದರೂ ಸಹ ಇವತ್ತಿನವರೆಗೂ ಚುನಾಯಿತ ಸರ್ಕಾರಕ್ಕೆ ಎಲ್ಲ ವಿಧದಲ್ಲೂ ವಿಧೇಯವಾಗಿ ಕರ್ತವ್ಯ ನಿರ್ವಹಿಸುತ್ತಿದೆ. ಜಗದಲ್ಲೆ ಜನಸಂಖ್ಯೆಯ ದೃಷ್ಟಿಕೋನದಿಂದ ಬೃಹತ್ ರಾಷ್ಟ್ರವಾಗಿದ್ದರೂ ಯಾವ ವಿಧವಾದ   ಕ್ರಾಂತಿಗಳು ಇಲ್ಲಿ ಕಂಡುಬಂದಿಲ್ಲ. ಪ್ರಾಯಶಃ ಕಂಡುಬರಲು ಸಾಧ್ಯವೂ ಇಲ್ಲ. ಇದರ ಮೂಲ ಕಾರಣ ನಮ್ಮ ಹಿರಿಯರು ರೂಪಿಸಿಕೊಟ್ಟ ಅತ್ಯುತ್ತಮ ಸಂವಿಧಾನದದಲ್ಲಿ ಅಡಗಿದೆ. ಈ ಸಂವಿಧಾನವು ನಮ್ಮ ದೇಶದ ಎಲ್ಲ   ವಿಧದ ಆಡಳಿತ ಹಾಗೂ ಕ್ಷಮತೆಗೆ ಸಹಾಯಕವಾಗಿದೆ. ಇದರ ಅನೇಕಾನೇಕ ಲಕ್ಷಣಗಳಲ್ಲಿ ನಾನು ಒಂದು ವಿಷಯ ಇಲ್ಲಿ ಚರ್ಚಿಸಲು ಯತ್ನಿಸುತ್ತೆನೆ. ಅದೆಂದರೆ ಅಧಿಕಾರದ ವಿಕೇಂದ್ರೀಕೃತ ಆಡಳಿತದ ಮಾದರಿ.  ನಮ್ಮ ಭಾರತ ಬಹು ವೈವಿಧ್ಯಮಯವಾದ ದೇಶ. ಇಲ್ಲಿ ನೀವು ಎಲ್ಲಾ ಪ್ರಮುಖ ಧರ್ಮಗಳು, ಇಲ್ಲೆ ಉಗಮಿಸಿದ ಮತ ಪಂಥಗಳು ಮನುಕುಲದ ಅತ್ಯಂತ ಪುರಾತನ ಆಚರಣೆಗಳು, ನಭಕ್ಕೇರಿದ ವೈಜ್ಞಾನಿಕ ಸಾಧನೆಗಳು ಎಲ್ಲವನ್ನೂ ನೀವು ಇಲ್ಲಿ‌ ನೋಡಬಹುದು. ಅದಾಗ್ಯೂ ಈ ದೇಶದ ಅಭ್ಯುದಯಕ್ಕೆ ಪರಮ ಕಾರಣವಾಗಿರುವ ಅ...

ಸ್ಥಿತಪ್ರಜ್ಞ ಪೌರವ ಪುರುಷ

ಇಮೇಜ್
ಎಲ್ಲವೂ ಚನ್ನಾಗಿ ನಡೆಯುತ್ತಿರುವಾಗ ಬದುಕು ಸುಂದರ, ಸುಮಧುರವಾಗಿ ಕಂಡುಬರುತ್ತದೆ. ಪ್ರತಿಯೊಬ್ಬ ಪುರುಷ ಅಥವಾ ಸ್ತ್ರೀ ಅಂತಹ ಸಂಧರ್ಭಗಳಲ್ಲಿ ಆನಂದದಿಂದ ಇರುತ್ತಾರೆ. ಜೀವನದ ಪ್ರತಿಯೊಂದು ವಿಷಯ ಅವರಿಗೆ ಹಿತ ನೀಡುತ್ತವೆ. ಆದರೆ.......,   ಒಂದು ದಿನ ಇದ್ದಕ್ಕಿದ್ದಂತೆ ಆ ಕನಸಿನಂತಿರುವ ಜೀವನ ಪಾತಾಳಕ್ಕೆಸೆಯಲ್ಪಡುತ್ತದೆ. ಪಾರ್ಕು, ರೆಸ್ಟೋರೆಂಟ್ ಗಳಲ್ಲಿ ನಲಿಯುತ್ತಿದ್ದ ಮುಖಕ್ಕೆ ಆಸ್ಪತ್ರೆಯ ರೌರವ ನರಕದ ದರ್ಶನವಾಗುತ್ತದೆ, ಹಾಯಾಗಿ ಮೆತ್ತನೆಯ ಹಾಸಿಗೆಯ ಮೇಲೆ ಮಲಗುತ್ತಿದ್ದವರು ಆಸ್ಪತ್ರೆಯ ಅಂಗಳದಲ್ಲಿ ರಾತ್ರಿಯಾಗುತ್ತಿದ್ದಂತೆ ಜಾಗ ಹಿಡಿಯಬೇಕಾಗುತ್ತದೆ. ICU ನಲ್ಲಿರುವ ಸಂಬಂಧಿಕ ರೋಗಿ ತನ್ನ ಪಾಡಿಗೆ ತಾನಿರುತ್ತದೆ. ಆದರೆ ಆ ರೋಗಿ ಜೊತೆಗೆ ಹೋದ ಕರುಳ ಬಳ್ಳಿ ಮಾತ್ರ ಕಟುಕನು ಎಳೆದುಕೊಂಡ ಹೋದ ಆಕಳ ಕರುವಿನಂತೆ ವಿಲ ವಿಲ ಒದ್ದಾಡುತ್ತಿರುತ್ತದೆ.  ಆದರೆ ಕೆಲವೊಬ್ಬರಿಗೆ ಸ್ಥಿತಪ್ರಜ್ಞೆಯೆ ಆಧಾರವಾಗಿರುತ್ತದೆ. ಭಾವನಾರಹಿತರಾಗಿ ಕಲ್ಲಿನಂತೆ ಇದ್ದುಬಿಡುವುದೆ? ಅಥವಾ ಆಸ್ಪತ್ರೆಯ ಭೀಕರತೆಯ ಒಂಟಿತನದಲಿ ಸಾಂಗತ್ಯಕ್ಕಾಗಿ ಹಂಬಲಿಸುವುದಾ?? ಸ್ಥಿತಪ್ರಜ್ಞೆನಾದವನು ಇವೆರಡರಲ್ಲಿ ಯಾವುದನ್ನೂ ಮಾಡುವುದಿಲ್ಲ. ಕಠಿಣಾತಿ ಕಠಿಣ ಪರಿಸ್ಥಿತಿಯಲ್ಲಿ ಸಹ ಸ್ಥಿತಪ್ರಜ್ಞೆನು ಪೌರವನಂತೆ ಇರುತ್ತಾನೆ. ಹೀಗಿವೆ ಸ್ಥಿತಪ್ರಜ್ಞನ ಮೂಲ ಗುಣಗಳು :- ೧.ನಂಜುಂಡನಾಗಿರುವದು:- ಅರೆ ಇದೆನಿದು, ನಂಜಂಡ ಅಂದ್ರೆ ಶಿವನಲ್ವಾ?? ಹೌದು. ಶ...