ಮನೆ ಕಟ್ಟುವುದು ಮುಖ್ಯವಲ್ಲ, ಮನ ಕಟ್ಟುವುದು ಮುಖ್ಯ.....
ಮನೆ ಕಟ್ಟುವುದು ಮುಖ್ಯವಲ್ಲ,
ಮನಸ್ಸು ಕಟ್ಟುವುದು ಮುಖ್ಯ
ಈ ನಾಗರಿಕತೆ ಮೊಸಲು ಹುಟ್ಟಿಕೊಂಡಿದ್ದು ಮನೆ ಕಟ್ಟುವ ಮೂಲಕವೆ ಅಥವಾ ಮನಸ್ಸು ಕಟ್ಟುವ ಮೂಲಕವೆ
ಎನ್ನುವದು ಒಂದು ಪ್ರಶ್ನೇಯಾದರೆ ಇದಕ್ಕೆ ಉತ್ತರ ಮನಸ್ಸು ಕಟ್ಟುವ ಮೂಲಕ ಈ ನಾಗರಿಕತೆ ಹುಟ್ಟಿಕೊಂಡಿತು
ಎಂದು ಬಲು ಸ್ಪಷ್ಠವಾಗಿ ಹೇಳಬಹುದು ಯಾಕೆ ಮನೆಗಿಂತ ಮನಸ್ಸು ಮುಖ್ಯ ಎಂಬುದು ಇಲ್ಲೆ ವಿದಿತವಾಗುತ್ತದೆ.
ಮನೆ ಕಟ್ಟಲು ನಮಗೆ ಬೇಕಾಗಿರುವ ವಸ್ತುಗಳು ನಿರ್ಜಿವ ವಸ್ತುಗಳು . ಆದರೆ ಮನ ಕಟ್ಟಲು ಬೇಕಾಗಿರುವುದ
ಮಾತ್ರ ಭಾವನೆಗಳಿಂದ ತುಂಬಿರುವ ಮಾನವ ಜೀವಿಗಳು.
ಅನೇಕ ಜನರಿಗೆ ತಮ್ಮ ಮನೆ ಅದ್ಭುತವಾಗಿರಬೇಕೆಂದು ಬಯಸುತ್ತಾರೆ.ಎಷ್ಟೋ ಜನ ತಮ್ಮ ಜೀವಮಾನದ
ಸಂಪಾದನೆಯನ್ನಲ್ಲ ತಾವು ಬಯಸಿದಂತಹ ಮನೆ ನಿರ್ಮಾಣಕ್ಕಾಗಿ ಸುರಿಯುತ್ತಾರೆ. ಆದರೆ ಅದ್ಭುತವಾಗಿರಬೇಕಾದ್ದದ್ದು
ಮನೆಯಲ್ಲ ಬದಲಿಗೆ ಮನಸ್ಸು ಎಂಬುದನ್ನು ಮರೆಯುತ್ತಾರೆ.ನಾವು ನಿಜವಾಗಿಯೂ ಕಟ್ಟಬೇಕಾಗಿರುವುದು ಕಲ್ಲು
ಇಟ್ಟಿಗೆಗಳ ಮನೆಯಲ್ಲ, ಬದಲಾಗಿ ಬೆಚ್ಚನೆಯ ಭಾವದಿಂದ ಕೂಡಿರುವ ಮನಸ್ಸಇನ ಮನೆ.
ಕನ್ನಡದಲ್ಲಿ ಅಸಮಾನತೆಯ ವಿರುದ್ದ ದೊಡ್ಡ ಕ್ರಾಂತಿಯನ್ನೆ ಮಾಡಿರುವ ಬಸವಣ್ಣವನರ ಸ್ಥಾವರಕ್ಕಳಿವುಂಟು
ಜಂಗಮಕ್ಕಳಿವಿಲ್ಲ ಮಾತು ಇಲ್ಲಿ ಪ್ರಸ್ತುತ. ಜಂಗಮವೆಂದರೆ ನಮ್ಮ ಮನಸ್ಸೆ ಹೌದು.ಅದೆಷ್ಟೋ
ಅದ್ಭುತವಾಗಿ ಕಟ್ಟಿಸಿರುವ ಸಹಸ್ರ ಹಸ್ರ ಮನೆಗಳಲ್ಲಿ ಇಂದು ನೆಮ್ಮದಿಯಲ್ಲದಿರುವುದಕ್ಕೆ ಕಾರಣ ಮನಸ್ಸಿನ
ಮನೆಯನ್ನೆ ಕಟ್ಟದಿರುವುದು.ಈ ಮನಸ್ಸಿನ ಮನೆ ನೂರಾರು ಮೈಲಿ ದೂರವಿದ್ದರೂ, ದೇಶ ಕಾಲ ಗತಿಯಗಳನ್ನು ದಾಟಿ
ಕುಟುಂಬದ ಸದಸ್ಯರನ್ನು ಒಂದು ಮಾಡಿರುತ್ತದೆ. ಸ್ನೇಹಿತರನ್ನು ಬೆಸೆದಿರುತ್ತದೆ. ಇಂತಹ ಮನಸ್ಸಿನ ಮನೆಯೋಳಗೆ
ಸುಂದರವಾದ ನಿರ್ಮಲ ಭಾವನೆಗಳನ್ನು ಬೆರೆಸಿದರೆ ಬದುಕು ಖುಷಿಯಿಂದ ತುಂಬುತ್ತದೆ. ಇತರರು ನಮ್ಮನ್ನು
ನೋಡಿ ಆನಂದದಿಂದ ಕುಣಿಯಬೇಕೆ ವಿನಃ ಹುಬ್ಬು ಗಂಟಿಕ್ಕಿ ದೂರ ಹೊಗಬಾರದು. ನಮ್ಮ ಭಾವನೆಗಳು ಸ್ಪಟಿಕ
ಶುದ್ದವಾಗಿ, ಮಾತುಗಳು ಜೇನುಸವಿಯಾಗಿ, ಮಾಡುವ ಕೆಲಸದಲ್ಲಿ, ನಮ್ಮೋಂದಿಗಿನ ಇರುವ ಜನರ ಜೊತೆಗೆ ಪ್ರಾಮಾಣಿಕ
ವ್ಯವಹಾರದಲ್ಲಿ ದೇವರನ್ನು ಕಾಣುವಂತಾದರೆ ಬಾಳಿನಲ್ಲಿ ನಾವು ಸಾವಿರ ಮನೆಗಳನ್ನು ಕಟ್ಟಿದುದಕ್ಕೆ ಸಮನಾಗಿ
ಇರುತ್ತದೆ.
ಇವೆಲ್ಲಕ್ಕೂ ಮೀರಿ ಸಮಷ್ಟಿ ಪ್ರಜ್ಞೆಯಿಂದ ಕೂಡಿದ ಮನಸ್ಸು ಎಲ್ಲವನ್ನೂ ಹದಗೊಳಿಸುತ್ತದೆ.ಉತ್ತಮವಾದ
ಆಹಾರ, ಗಾಳಿ ನೀರು ಮುಂತಾದವುಗಳನ್ನು ಕೊಟ್ಟು ಸಲಹುವ , ನಿಸರ್ಗಕ್ಕೆ, ಬಾಳಲು ಅವಕಾಶ ನೀಡಿದ ಸಮಾಜಕ್ಕೆ
ಕೃತಜ್ಞತೆಯಿಂದರಬೇಕು. ಮನೆಯೆ ದೇವಮಂದಿರದಂತೆ ಭಾವಿಸಿ, ಅಲ್ಲಿ ಮನಸ್ಸೆಂಬ ದೈವಕ್ಕೆ ನಮ್ಮನಡೆ ನುಡಿ
ಆಚಾರಗಳಿಂದ ಪೂಜೆ ಮಾಡುತ್ತಾ ಬಾಳಬೇಕು. ಮನಸ್ಸು ಕಟ್ಟುವ ವ್ಯಕ್ತಿ ತನ್ನ ಜೀವನದಲ್ಲಿ ಖಂಡಿತ ಮೇಲೆ
ಬರುತ್ತಾನೆ ಎಂಬುವುದರಲ್ಲಿ ಯಾವ ಸಂಶಯವು ಇಲ್ಲ.
ಸಮಭಾವ ಸಮಜೀವದ ಸಮಾಜಕ್ಕಾಗಿ ನಮ್ಮೊಳಗೊಂದು ಅಂತರಂಗದ ಚಳುವಳಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ