ನದಿಯಂತಿರಲಿ ನಮ್ಮ ಬದುಕು..... ನಿರಂತರತೆಯ ನಿರ್ಭಾವದಲಿ........ ಪರಿಪೂರ್ಣನನು ಸೇರುವ ತವಕದಲಿ.

 

ನದಿಯಂತಿರಲಿ  ನಮ್ಮ ಬದುಕು


             ಜಗತ್ತಿನಲ್ಲಿ ಅನೇಕ ಬದಲಿಸಲಾಗದ ಅದ್ಭುತಗಳಿವೆ. ಅವುಗಳು ಅತ್ಯಂತ ಪರಿಪೂರ್ಣ ಬದುಕನ್ನು ಬಾಳುತ್ತವೆ. ಒಂದು ಮರವನ್ನೆ ತೆಗೆದುಕೊಳ್ಳಿ, ಒಂದು ಹಸುವನ್ನಾದರೂ ತೆಗೆದುಕೊಳ್ಳಿ. ಇಂತಹದೆ ಮತ್ತೋಂದು ಅದ್ಭುತವೆಂದರೆ ನದಿ. ವಾಸ್ತವದಲ್ಲಿ ನದಿಯಷ್ಟು ಸುಂದರ ಹಾಗೂ ಪರಿಪೂರ್ಣ ಬದುಕನ್ನು ಬಾಳುವಂತಹ ವಸ್ತಗಳು ಬಹು ಕಡಿಮೆ.ಎಲ್ಲೋ ಹುಟ್ಟಿ ಅದು ಹರಿಯುತ್ತಾ ಸಾಗುತ್ತದೆ. ತನಗೆ ಎದುರಾದ ಪ್ರತಿಯೋಂದನ್ನು ಅದು ಎದುರಿಸುತ್ತಾ ನಿರಂತರವಾಗಿ ಹರಿಯುತ್ತದೆ.ಹುಟ್ಟಿದಾಗ ಅದರ ನೀರನ್ನು  ಬರಿ ಬೊಗಸೆಯಲ್ಲಿ ಹಿಡಿದಿಡಬಹುದು. ಆದರೆ ಬೆಳೆಯುತ್ತಾ ಹೋದಂತೆ, ಅದು ಅಗಾಧವಾದ ಗಾತ್ರಕ್ಕೆ  ಬದಲಾಗುತ್ತದೆ.ಅಷ್ಟೆ ಅಲ್ಲ ತನ್ನ ಸುತ್ತಮುತ್ತ ಇರುವ ಪ್ರದೇಶವನ್ನು ಹಸಿರಾಗಿಸುತ್ತಾ ಸಾಗುತ್ತದೆ.

ಜನರ ಜೀವನವನ್ನು ಸುಂದರಗೊಳಿಸಿ ಪ್ರಕೃತಿಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ತನ್ಮೋಲಕ ಜೀವನವನ್ನು ಸಾರ್ಥಕಗೊಳಿಸುತ್ತದೆ.

                 ಮನುಷ್ಯ ಜೀವನವೂ ಹಾಗೆ . ಹುಟ್ಟಿದಾಗ ಅಸ್ತಿತ್ವವೆ ಇಲ್ಲದಂತಿರುವ ಪರಿಸ್ಥಿತಿಯಿಂದ ಅಗಾಧ ಸಾಧನೆಯತ್ತ ನಾವು ಸಾಗುತ್ತೆವೆ. ಈ ಜೀವನವನ್ನು ಸುಂದರೆಗೊಳಿಸಲು ಯತ್ನಿಸುತ್ತೆವೆ. ನಾವು ಮನುಷ್ಯರಾಗಿ ಅಂತಹ ಸಾಧನೆಯನ್ನು ನಾವು ತೋರಬೇಕು ಸಹ. ನಮ್ಮ ಬದುಕು ನಮ್ಮವರಿಗಾಗಿ, ನಮ್ಮ ಸಮಾಜಕ್ಕಾಗಿ, ನಮಗಿರುವ ಏಕೈಕ ರಾಷ್ಟ್ರಕ್ಕಾಗಿ ದೀವಿಗೆಯಂತೆ ಬೆಳಕು ನೀಡುವ ಭಾವವಾಗಬೇಕು. ದೀವಿಗೆ ಬರಿ ಉರಿಯದೆ ಅಲ್ಲಿರುವ ಕತ್ತಲನ್ನು ನಾಶ ಮಾಡುವಂತೆ ನಮ್ಮ ಬದುಕು ಸಹ ಸುತ್ತಲಿನ ಅಂಧಕಾರವನ್ನು ಹೋಗಲಾಡಿಸುವ ದಿವ್ಯ ದೀಪ್ತಿಯಾಗಬೇಕು.

           ಇಂತಹ ಸಾರ್ಥಕತೆ ಮನುಷ್ಯನ ಜೀವನಕ್ಕೆ ಬೇಕು. ಬರಿ ಉರಿಯುವುದಲ್ಲ. ಎಕೆಂದರೆ ಬೆಂಕಿಯು ವಸ್ತಗಳನ್ನು ಸುಟ್ಟುಹಾಕುತ್ತದೆ, ಅದೆ ಬೆಂಕಿ ಸಮರ್ಪಕ ನಿಯಂತ್ರಣದಲ್ಲಿ ಕತ್ತಲೆಯನ್ನು ಹೋಗಲಾಡಿಸಿ ದೇದಿಪ್ಯಮಾನವಾಗಿ ಬೆಳಗುತ್ತದೆ. ಇರುವ ಪರಿಸರವನ್ನು ಇಂತಹ ಸುಮಧುರ ಭಾವದ ಬೆಳಕನ್ನು ಬೀರುವ ಮೂಲಕ ಬದಲಾವಣೆಗೆ ಯತ್ನಿಸಬೇಕು.ಸುಖದ ಬೆಳಕನ್ನು ಪಸರಿಸಬೇಕು.

      ನದಿಯ ಪ್ರತಿರೂಪದಂತೆ ನಮ್ಮ ಬದುಕು ಬದಲಾದಾಗ ಮಾತ್ರ ನಮ್ಮ ಜೀವನ ಮತ್ತಷ್ಟು ಸುಂದರವಾಗಿ ಅದಕ್ಕೋಂದು ಅರ್ಥ ಬರುತ್ತದೆ. ಸಂತರು,ಮಹಾತ್ಮರು ಹೇಳುವಂತೆ ಈ ಜೀವನ ಸುಖ ಸಂತೋಷವನ್ನು ನೀಡುವಂತಹದು. ಹೇಗೆ ನದಿಯು ಜೀವದಾಯಿನಿಯಾಗಿ ತನ್ನಲ್ಲಿಗೆ ಬರುವಂತಹ ಪ್ರಾಣಿ ಪ್ರಪಂಚಕ್ಕೆ ಜೀವಛಾಯೆಯಾಗಿ ನಿಲ್ಲುತ್ತದೆಯೋ ಹಾಗೆಯೆ ನಮ್ಮ ಬದುಕು ಸಹ  ಅದರಂತಾಗಬೇಕು.

ಇಂತಹ ಒತ್ತಡದ ಬದುಕಿನಲ್ಲಿ ಮನುಷ್ಯನು ಸುಖಮಯ ಮತ್ತುಮೌಲ್ಯವಯುತವಾದ ಬಾಳನ್ನು ಬಾಳಬೇಕೆಂದರೆ,ಆತ ನದಿಯ ಗುಣಲಕ್ಷಣಗಳನ್ನು ಮೈಗೂಡಿಸಿಕೊಳ್ಳಬೇಕು. ಆತ ನದಿಯ ಮನಸಿನಂತೆ ತನ್ನ ಸುತ್ತಲೂ ಸಂತೋ಼ಷದ ಹಸಿರನ್ನು ಹರಡಿದ್ದೆ ಆದರ ಆತನ ಬದುಕು ನದಿಯಂತೆ ಸಾರ್ಥಕವಾಗುತ್ತದೆ.

ಶ್ರೀ ಸಿದ್ದೇಶ್ವರ ಅಮೃತವಚನ ಸಂಗ್ರಹಾನುವಾದ

 ಸಮಭಾವ ಸಮಜೀವದ ಸಮಾಜಕ್ಕಾಗಿ ನಮ್ಮೊಳಗೊಂದು ಅಂತರಂಗದ ಚಳುವಳಿ


ಶ್ರೀ ನಾಗೇಶ ಮುದ್ದಾಳೆ.
ಉಪಪ್ರಾಂಶುಪಾಲರು ಹಾಗೂ ಕನ್ನಡ ಸಹ ಶಿಕ್ಷಕರು.
ಕಿ.ರಾಚ.ವ.ಶಾಲೆ. ಭಾಲ್ಕಿ


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡಮಯ ಮಹಾರಾಷ್ಟ್ರ

ವಿಜ್ಞಾನದ ಮೂಲವೆ ಪ್ರಶ್ನೆ ಮಾಡುವ ಕುತೂಹಲಕರ ಮನಸ್ಸು...